ಈ ಮಾರ್ಗದರ್ಶಿ ನಿಮಗೆ ಹೇಗೆ ಸಹಾಯ ಮಾಡಬಹುದು?
‘ನ್ಯಾಯ’ದ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ವೈದ್ಯಕೀಯ-ಕಾನೂನಿನ ಪರೀಕ್ಷಣದ ಮಾರ್ಗದರ್ಶಿಯು ಸಂತ್ರಸ್ತರಿಗೆ ಪ್ರಕ್ರಿಯೆಯ ಸಾರಾಂಶ ಮತ್ತು ವ್ಯಕ್ತಿಯೊಬ್ಬರು ಲೈಂಗಿಕ ದೌರ್ಜನ್ಯಕ್ಕೊಳಗಾದರೆ ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳ ಬಗ್ಗೆ ತಿಳಿಸುವ ಮೂಲಕ ಸಹಾಯ ಮಾಡುತ್ತದೆ.
ಡಿಎನ್‌ಎ ಸೇರಿದಂತೆ ಸಂಭವನೀಯ ಪುರಾವೆಗಳನ್ನು ಸಂರಕ್ಷಿಸಲು ಮತ್ತು ಪ್ರಮುಖ ವೈದ್ಯಕೀಯ ಗಮನವನ್ನು ಪಡೆಯಲು ಸಂತ್ರಸ್ತರು ಅನುಭವಿಸುವ ವಿಧಿವಿಜ್ಞಾನ ವೈದ್ಯಕೀಯ ಪರೀಕ್ಷೆಗಳ ವಿಧಾನವನ್ನು ಅರ್ಥಮಾಡಿಕೊಳ್ಳಲು ಈ ಮಾರ್ಗದರ್ಶಿ ಸಹಾಯ ಮಾಡುತ್ತದೆ. ಇದು ಸಂತ್ರಸ್ತರಿಗೆ ಇರುವ ಹಕ್ಕುಗಳ ಅವಲೋಕನವನ್ನು ನೀಡುತ್ತದೆ ಮತ್ತು ವಿವಿಧ ತಪ್ಪು ಅಭಿಪ್ರಾಯಗಳನ್ನೂ ಹೊರಹಾಕುತ್ತದೆ. ಲೈಂಗಿಕ ದೌರ್ಜನ್ಯವನ್ನು ಎದುರಿಸುವಾಗ, ಆರೋಗ್ಯ ಕಾರ್ಯಕರ್ತರು ದ್ವಿಪಾತ್ರವನ್ನು ನಿರ್ವಹಿಸುತ್ತಾರೆ – ಒಂದು, ವೈದ್ಯಕೀಯ ಚಿಕಿತ್ಸೆ ಮತ್ತು ಮಾನಸಿಕ ಆಸರೆಯನ್ನು ಒದಗಿಸುವುದು ಮತ್ತು ಎರಡು, ಪುರಾವೆಗಳನ್ನು ಸಂಗ್ರಹಿಸುವುದು ಮತ್ತು ಸಾಕ್ಷ್ಯದ ಉತ್ತಮ ಗುಣಮಟ್ಟದ ದಾಖಲಾತಿಯನ್ನು ಖಚಿತಪಡಿಸಿಕೊಳ್ಳುವುದು. 2014 ರಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಲೈಂಗಿಕ ದೌರ್ಜನ್ಯದ ಸಂತ್ರಸ್ತರಿಗೆ ವೈದ್ಯಕೀಯ-ಕಾನೂನಿನ ಆರೈಕೆಗಾಗಿ ಮಾರ್ಗಸೂಚಿಗಳು ಮತ್ತು ನಿಯಮಾವಳಿಗಳನ್ನು ಹಾಕಿತು.
ಮಾರ್ಗದರ್ಶಿಯಲ್ಲಿ ಚರ್ಚಿಸಲಾದ ಕಾನೂನುಗಳು ಯಾವುವು?
ಈ ಮಾರ್ಗದರ್ಶಿಯು 2014 ರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವ್ಯೆದ್ಯಕೀಯ-ಕಾನೂನಿನ ಮಾರ್ಗಸೂಚಿಗಳ ಕಾನೂನು ಅಂಶಗಳನ್ನು ಚರ್ಚಿಸುತ್ತದೆ. ಈ ಮಾರ್ಗಸೂಚಿಗಳು ಕ್ರಿಮಿನಲ್ ಕಾನೂನು ತಿದ್ದುಪಡಿ ಕಾಯಿದೆ, 2013, ಭಾರತೀಯ ದಂಡ ಸಂಹಿತೆ, 1860 ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO), 2012, ಕ್ರಿಮಿನಲ್ ಪ್ರೊಸೀಜರ್ ಕೋಡ್, 1973 ಭಾರತೀಯ ನ್ಯಾಯ ಸಂಹಿತೆ ,2023 ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023 ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ 2023ರ ಅಡಿಯಲ್ಲಿ ವಿವರಿಸಿರುವ ವಿವಿಧ ಅವಶ್ಯಕತೆಗಳನ್ನು ಆಧರಿಸಿದೆ.
ಮೊದಲ ಹೆಜ್ಜೆಗಳು – ವೈದ್ಯಕೀಯ ನೆರವು ಮತ್ತು ಪರೀಕ್ಷೆ
ಸಂತ್ರಸ್ತರ ಹೇಳಿಕೆಯನ್ನು ದೃಢೀಕರಿಸುವಲ್ಲಿ ವೈದ್ಯಕೀಯ ಪರೀಕ್ಷೆಗಳು ಪ್ರಮುಖ ಪಾತ್ರವಹಿಸುತ್ತವೆ, ಅದಕ್ಕಾಗಿಯೇ ನೋಂದಾಯಿತ ವೈದ್ಯಕೀಯ ವೈದ್ಯರಿಂದ ಸಾಧ್ಯವಾದಷ್ಟು ಬೇಗ ನಿಮ್ಮನ್ನು ಪರೀಕ್ಷಿಸಿಕೊಳ್ಳುವುದು ಮುಖ್ಯ.
ಸಾಧ್ಯವಾದರೆ ವೈದ್ಯಕೀಯ ಪರೀಕ್ಷೆಗೆ ಮುನ್ನ ಹಲ್ಲುಜ್ಜುವುದು, ಸ್ನಾನ ಮಾಡುವುದು, ಮೂತ್ರ ವಿಸರ್ಜನೆ ಮಾಡುವುದು, ಮಲವಿಸರ್ಜನೆ ಮಾಡುವುದು, ಬಟ್ಟೆ ಬದಲಾಯಿಸುವುದು, ಕೂದಲು ಬಾಚುವುದು, ಬಾಯಿ ತೊಳೆಯುವುದು ಅಥವಾ ಜನನಾಂಗದ ಪ್ರದೇಶವನ್ನು ಸ್ವಚ್ಛಗೊಳಿಸುವುದನ್ನು ತಪ್ಪಿಸಿ. ಇದು ಪುರಾವೆಗಳ ಸಂಗ್ರಹಕ್ಕೆ ಸಹಾಯ ಮಾಡಬಹುದು.
ಪರೀಕ್ಷೆಯ ಸಮಯದಲ್ಲಿ ಸಂತ್ರಸ್ತರ ಜೊತೆಯಲ್ಲಿ ಯಾರಾದರೂ ಹೋಗಬಹುದು. ಸಂಬಂಧಿಕರು/ ಸ್ನೇಹಿತರಲ್ಲಿ ಒಬ್ಬರು ಅಥವಾ ಅವರ ಆಯ್ಕೆಯ ವ್ಯಕ್ತಿ, ವೈದ್ಯಕೀಯ ಪರೀಕ್ಷೆಯ ಸಮಯದಲ್ಲಿ ಸಂತ್ರಸ್ತರ ಜೊತೆ ಹೋಗಬಹುದು. ಆ ಸ್ಥಳದಲ್ಲಿ ಅವರಿಗೆ ಆಸರೆಗಾಗಿ ತರಬೇತಿ ಪಡೆದ ವೃತ್ತಿಪರರನ್ನು ಸಹ ಒದಗಿಸಬಹುದು. |
ವೈದ್ಯಕೀಯ ಪರೀಕ್ಷೆ:
ಅವಲೋಕನ
ವೈದ್ಯಕೀಯ ಪರೀಕ್ಷೆಯ ಉದ್ದೇಶಗಳೇನು?
ವೈದ್ಯಕೀಯ ಪರೀಕ್ಷೆಯು ಎರಡು ಉದ್ದೇಶಗಳನ್ನು ಹೊಂದಿದೆ.
- ಮೊದಲನೆಯದು ವೈದ್ಯಕೀಯ ಆರೈಕೆಯನ್ನು ನೀಡುವುದು, ಇದು ಯಾವುದೇ ಲೈಂಗಿಕ ಆರೋಗ್ಯದ ಅಗತ್ಯತೆಗಳನ್ನು ಉದಾ: ಗರ್ಭಧಾರಣೆ ಅಥವಾ STI ಗಳನ್ನು ಪರೀಕ್ಷಿಸುವ ಮೂಲಕ, ಪ್ರಿಸ್ಕ್ರಿಪ್ಷನ್‌ಗಳನ್ನು ಒದಗಿಸುವುದನ್ನು ಅರ್ಥೈಸಬಲ್ಲದು.
- ಎರಡನೆಯದು ನ್ಯಾಯಸ್ಥಾನಕ (ವೈದ್ಯಕೀಯ ಫೋರೆನ್ಸಿಕ್), ಅಂದರೆ ವೈದ್ಯರು ತಮ್ಮ ವೈದ್ಯಕೀಯ ಕೌಶಲ್ಯಗಳನ್ನು ಬಳಸಿ ಪೊಲೀಸ್ ತನಿಖೆಗೆ ಸಹಾಯ ಮಾಡುತ್ತಾರೆ, ಡಿಎನ್‌ಎ ಸ್ವ್ಯಾಬ್‌ಗಳನ್ನು ತೆಗೆದುಕೊಳ್ಳುವುದು, ಗಾಯಗಳನ್ನು ಗುರುತಿಸುವುದು ಮತ್ತು ಫೋಟೋ ತಗೆಯುವುದು, ಸಂತ್ರಸ್ತರ ಭಾವನಾತ್ಮಕ ಸ್ಥಿತಿಯನ್ನು ವಿವರಿಸುವುದು, ದೇಹದಲ್ಲಿ ವಿದೇಶಿ ವಸ್ತುಗಳನ್ನು ಕಂಡುಹಿಡಿಯುವುದು ಮತ್ತು ವಿಷಶಾಸ್ತ್ರ ಪರೀಕ್ಷೆಗಳನ್ನು ನಡೆಸುವುದು.
ವೈದ್ಯಕೀಯ ಪರೀಕ್ಷೆಗೆ 2-4 ಗಂಟೆ ತೆಗೆದುಕೊಳ್ಳಬಹುದು.
ಯಾವ ಸಂದರ್ಭಗಳಲ್ಲಿ ಸಂತ್ರಸ್ತರು ವೈದ್ಯಕೀಯ ಪರೀಕ್ಷೆಗೆ ಒಳಗಾಗುತ್ತಾರೆ?
ಸಂತ್ರಸ್ತರು ಮೂರು ಸಂದರ್ಭಗಳಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಬಹುದು:
- ಸಂತ್ರಸ್ತರು ದೌರ್ಜನ್ಯದ ಪರಿಣಾಮಗಳಿಗೆ ಚಿಕಿತ್ಸೆಗಾಗಿ ಆಸ್ಪತ್ರೆ/ಕ್ಲಿನಿಕ್ ಅನ್ನು ಸಂಪರ್ಕಿಸಿದಾಗ.
- ಪೋಲೀಸ್ ದೂರಿನ ನಂತರ ಪೋಲೀಸ್ ಅಪ್ಪಣೆ/ಕೋರಿಕೆ ಇದ್ದಾಗ; ಅಥವಾ
- ನ್ಯಾಯಾಲಯದ ನಿರ್ದೇಶನದ ನಂತರ ಅಥವಾ ನ್ಯಾಯಾಲಯದ ಆದೇಶದ ಮೇರೆಗೆ.
ವೈದ್ಯಕೀಯ ಪರೀಕ್ಷೆಗೆ FIR (ಎಫ್ಐಆರ್) ಕಡ್ಡಾಯವೇ?
ವೈದ್ಯಕೀಯ ಪರೀಕ್ಷೆಗೆ FIR ಕಡ್ಡಾಯವಲ್ಲ. ಇದಲ್ಲದೆ, ಸಂತ್ರಸ್ತರು ದೂರು ಸಲ್ಲಿಸದಿರಲು ಆಯ್ಕೆ ಮಾಡಬಹುದು. ಆದಷ್ಟು ಬೇಗ ವೈದ್ಯಕೀಯ ಪರೀಕ್ಷೆಗೆ ಒಳಗಾಗುವುದು ಸೂಕ್ತ. ವೈದ್ಯಕೀಯ ವೃತ್ತಿಪರರು ಸಂತ್ರಸ್ತರಿಗೆ ದೌರ್ಜನ್ಯದ ವಿರುದ್ಧ ದೂರು ಸಲ್ಲಿಸುವ ಹಕ್ಕನ್ನು ಸಹ ತಿಳಿಸುತ್ತಾರೆ. ಸಂತ್ರಸ್ತರು ದೂರು ಸಲ್ಲಿಸಲು ಬಯಸದಿದ್ದರೆ, ವೈದ್ಯಕೀಯ ಸಿಬ್ಬಂದಿ ಸಂತ್ರಸ್ತರ ತಿಳುವಳಿಕೆಯುಳ್ಳ ನಿರಾಕರಣೆಯನ್ನು ದಾಖಲಿಸಬೇಕು. ಆದಾಗ್ಯೂ, ಘಟನೆಯ ಬಗ್ಗೆ ಪೊಲೀಸರಿಗೆ ವರದಿ ಮಾಡಲು ಅವರು ಕರ್ತವ್ಯ ಬದ್ಧರಾಗಿದ್ದಾರೆ.
ವೈದ್ಯಕೀಯ ಪರೀಕ್ಷೆಯನ್ನು ಯಾರು ನಡೆಸುತ್ತಾರೆ?
ಭಾರತೀಯ ವೈದ್ಯಕೀಯ ಮಂಡಳಿಯಲ್ಲಿ ನೋಂದಾಯಿತ ವೈದ್ಯರು ಪರೀಕ್ಷೆಯನ್ನು ನಡೆಸಬಹುದು. ಪರೀಕ್ಷೆಯ ಪ್ರತಿ ಹಂತಕ್ಕೂ ಸಂತ್ರಸ್ತರ ಒಪ್ಪಿಗೆಯನ್ನು ತೆಗೆದುಕೊಳ್ಳಬೇಕು. ಸಂತ್ರಸ್ತರು ಅದಕ್ಕೆ ಒಪ್ಪಿಗೆ ನೀಡದಿದ್ದರೆ ವೈದ್ಯರು ನಿರ್ದಿಷ್ಟ ಹಂತವನ್ನು ಬಿಟ್ಟುಬಿಡಬೇಕು. ಮಹಿಳಾ ವೈದ್ಯರು ಪರೀಕ್ಷೆಯನ್ನು ನಡೆಸುವುದು ಎಂದು ಸಲಹೆ ನೀಡಲಾಗಿದೆ. ಮಹಿಳಾ ವೈದ್ಯರು ಲಭ್ಯವಿಲ್ಲದಿದ್ದರೆ, ಸಂತ್ರಸ್ತರ ಒಪ್ಪಿಗೆಯೊಂದಿಗೆ ಪುರುಷ ವೈದ್ಯರು ಪರೀಕ್ಷೆಯನ್ನು ನಡೆಸಬಹುದು. ಸಂತ್ರಸ್ತರು ಪುರುಷ ವೈದ್ಯರು ಪರೀಕ್ಷೆಯನ್ನು ನಡೆಸಲು ಆಯ್ಕೆ ಮಾಡಬಹುದು.
ವೈದ್ಯಕೀಯ ಪರೀಕ್ಷೆ ಉಚಿತವೇ?
ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿನ ವೈದ್ಯರು ತಮ್ಮ ಬಳಿಗೆ ಬಂದು ಲೈಂಗಿಕ ದೌರ್ಜನ್ಯವನ್ನು ಬಹಿರಂಗಪಡಿಸುವವರಿಗೆ ಪ್ರಥಮ ಚಿಕಿತ್ಸೆ ಅಥವಾ ವೈದ್ಯಕೀಯ ಚಿಕಿತ್ಸೆಯನ್ನು ಉಚಿತವಾಗಿ ನೀಡಬೇಕಾಗುತ್ತದೆ.
ನೆನಪಿರಲಿ….
ಸಂತ್ರಸ್ತರು ಪರೀಕ್ಷೆಯನ್ನು ಯಾವುದೇ ಸಮಯದಲ್ಲಿ ನಿಲ್ಲಿಸಲು, ವಿರಾಮಗೊಳಿಸಲು ಅಥವಾ ಹೆಜ್ಜೆಯನ್ನು ಬಿಟ್ಟುಬಿಡಲು ಆಯ್ಕೆ ಮಾಡಬಹುದು |
ವೈದ್ಯಕೀಯ ಪರೀಕ್ಷೆ
ವಿಧಾನ
ವೈದ್ಯಕೀಯ ಪರೀಕ್ಷೆಯ ವಿಧಾನ ಏನು?
- ತಕ್ಷಣದ ಆರೈಕೆಯ ಅಗತ್ಯವಿರುವ ಯಾವುದೇ ಗಾಯಗಳಿಗೆ ಚಿಕಿತ್ಸೆ ನೀಡುವ ಮೂಲಕ ಪರೀಕ್ಷೆಯು ಪ್ರಾರಂಭವಾಗುತ್ತದೆ.
- ನಂತರ, ಸಂತ್ರಸ್ತರ ವೈದ್ಯಕೀಯ ಇತಿಹಾಸವನ್ನು ವೈದ್ಯರು ತಿಳಿದುಕೊಳ್ಳುತ್ತಾರೆ.
- ಅವರ ದೇಹ ಅಥವಾ ಬಟ್ಟೆಯ ಮೇಲೆ ಸಾಕ್ಷ್ಯವನ್ನು ತೋರಿಸುವಂತಹ ಸ್ಥಳಗಳನ್ನು ಗುರುತಿಸುವುದು ಸೇರಿದಂತೆ ಏನಾಯಿತು ಎಂಬುದರ ವಿವರಗಳನ್ನು ಸಂಗ್ರಹಿಸಲಾಗುತ್ತದೆ.
- ಮುಂದೆ, ವೈದ್ಯಕೀಯ ವೃತ್ತಿಪರರು ತಲೆಯಿಂದ ಕಾಲ್ಬೆರಳು ತನಕ ಪರೀಕ್ಷೆಯನ್ನು ನೀಡಬಹುದು, ಇದು ಬಾಯಿ, ಯೋನಿ ಮತ್ತು ಗುದದ್ವಾರದ ಆಂತರಿಕ ಪರೀಕ್ಷೆಗಳನ್ನು ಒಳಗೊಂಡಿರುತ್ತದೆ.
- ಸಂತ್ರಸ್ತರಿಂದ ಸಾಕ್ಷ್ಯಕ್ಕಾಗಿ ರಕ್ತ, ಮೂತ್ರ, ದೇಹ ಮತ್ತು ಕೂದಲಿನ ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ.
- ಗಾಯಗಳನ್ನು ದಾಖಲಿಸಲು ಆರೋಗ್ಯ ಆರೈಕೆ ಪೂರೈಕೆದಾರರು ಸಂತ್ರಸ್ತರ ದೇಹದ ಛಾಯಾಚಿತ್ರಗಳನ್ನು ಸಹ ತೆಗೆದುಕೊಳ್ಳಬಹುದು.
- ಅಗತ್ಯವಿದ್ದರೆ ಸಂತ್ರಸ್ತರಿಗೆ STI ತಡೆಗಟ್ಟುವಿಕೆ ಚಿಕಿತ್ಸೆ ಅಥವಾ ತುರ್ತು ಗರ್ಭನಿರೋಧಕವನ್ನು ಒದಗಿಸಲಾಗುತ್ತದೆ.
- ಹೆಚ್ಚುವರಿಯಾಗಿ, ಸಂತ್ರಸ್ತರಿಗೆ ಬಲವಂತವಾಗಿ ಮಾದಕ ದ್ರವ್ಯ ನೀಡಿರುವ ಸಂದರ್ಭಗಳಲ್ಲಿ, ಆರೋಗ್ಯ ಆರೈಕೆ ಪೂರೈಕೆದಾರರು ಔಷಧ-ಸೌಕರ್ಯ(ಮಾದಕ ದ್ರವ್ಯ) ಕಿಟ್ ಅನ್ನು ನಡೆಸಬಹುದು, ಇದು ಪರೀಕ್ಷೆಗಾಗಿ ರಕ್ತ ಮತ್ತು ಮೂತ್ರದ ಮಾದರಿಗಳನ್ನು ತೆಗೆದುಕೊಳ್ಳುವುದನ್ನು ಒಳಗೊಂಡಿರುತ್ತದೆ.
- ಸಂತ್ರಸ್ತರು ಗರ್ಭಧಾರಣೆ ಮತ್ತು ಲೈಂಗಿಕವಾಗಿ ಹರಡುವ ಸೋಂಕುಗಳು (STI), HIV, ಹೆಪಟೈಟಿಸ್ ಬಿ ಪರೀಕ್ಷೆಗೆ ಒಳಗಾಗುತ್ತಾರೆ.
ಯಾವ ವೈದ್ಯಕೀಯ ಇತಿಹಾಸವನ್ನು ಸಂಗ್ರಹಿಸಲಾಗುತ್ತದೆ?
ದೌರ್ಜನ್ಯದ ನಂತರ, ವೈದ್ಯರು ಸಂತ್ರಸ್ತರ ಕೆಳಕಂಡ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಾರೆ:
- ಬಟ್ಟೆ ಬದಲಾಯಿಸುವುದು, ಬಟ್ಟೆ ಶುಚಿಗೊಳಿಸುವುದು
- ಸ್ನಾನ / ತಲೆ ಸ್ನಾನ
- ಜನನಾಂಗಗಳನ್ನು ತೊಳೆಯುವುದು, ಋತುಚಕ್ರ, ಮೂತ್ರ ವಿಸರ್ಜನೆ, ಮಲವಿಸರ್ಜನೆ
- ಬಾಯಿ ತೊಳೆಯುವುದು, ಕುಡಿಯುವುದು, ತಿನ್ನುವುದು
- ವ್ಯಾಕ್ಸಿನೇಷನ್, ಇತ್ತೀಚಿನ ಲೈಂಗಿಕ ಚಟುವಟಿಕೆ
ಈ ಮಾಹಿತಿಯು ಸಂತ್ರಸ್ತರಿಂದ ಸಂಗ್ರಹಿಸಿದ ಸಾಕ್ಷ್ಯದ ಮೇಲೆ ಪ್ರಭಾವ ಬೀರುತ್ತದೆ.
ಆದಾಗ್ಯೂ, ಲೈಂಗಿಕ ಜೊತೆಗಾರರ ಸಂಖ್ಯೆ ಅಥವಾ ಹಿಂದಿನ ಲೈಂಗಿಕ ಅನುಭವಗಳ ಕುರಿತಾದ ಮಾಹಿತಿಯು ಯಾವುದೇ ರೀತಿಯಲ್ಲಿ ದೌರ್ಜನ್ಯಕ್ಕೆ ಸಂಬಂಧಿಸದ ಹೊರತು ಅಗತ್ಯವಿಲ್ಲ.
ಎರಡು-ಬೆರಳಿನ ಪರೀಕ್ಷೆಯು ಕಾನೂನುಬದ್ಧವಾಗಿದೆಯೇ?
ಎರಡು ಬೆರಳಿನ ಪರೀಕ್ಷೆಯನ್ನು PV (ಪರ್ ವೆಜೈನಲ್) ಪರೀಕ್ಷೆ ಅಥವಾ ‘ಕನ್ಯತ್ವ ಪರೀಕ್ಷೆ’ ಎಂದೂ ಕರೆಯುತ್ತಾರೆ, ಪರೀಕ್ಷಿಸುವ ವೈದ್ಯರು ಮಹಿಳೆಯ ಯೋನಿಯೊಳಗೆ ಅವರ ಎರಡು ಬೆರಳುಗಳು ಒಳಗಿಟ್ಟು ಕನ್ಯಾಪೊರೆ ಇರುವಿಕೆ ಅಥವಾ ಅನುಪಸ್ಥಿತಿಯನ್ನು ಮತ್ತು ಅತ್ಯಾಚಾರದಿಂದ ಸಂತ್ರಸ್ತರ ಯೋನಿಯ ಸಡಿಲತೆ ಪರಿಶೀಲಿಸುವ ಅಭ್ಯಾಸವಾಗಿದೆ. |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊರಡಿಸಿದ ವ್ಯೆದ್ಯಕೀಯಕಾನೂನಿನ ಮಾರ್ಗಸೂಚಿಗಳ ಪ್ರಕಾರ ವೈದ್ಯರು ಭಾರತದಲ್ಲಿ ಎರಡು ಬೆರಳು ಪರೀಕ್ಷೆಯನ್ನು ಕೈಗೊಳ್ಳುವಂತಿಲ್ಲ.
ಇದು ಸಂತ್ರಸ್ತರ ಗಾಯಗಳು ಮತ್ತು ಸೋಂಕನ್ನು ಪರೀಕ್ಷಿಸಲು ವಿಸ್ತರಿಸಿದ ವೈದ್ಯಕೀಯ ಚಿಕಿತ್ಸೆಯ ಭಾಗವಾದ ಯೋನಿಯ ಆಂತರಿಕ ಪರೀಕ್ಷೆಗಿಂತ ಭಿನ್ನವಾಗಿದೆ.
ವೈದ್ಯಕೀಯ ಪರೀಕ್ಷೆ
ವಿಧಿವಿಜ್ಞಾನ ಸಾಕ್ಷ್ಯ
ವಿಧಿವಿಜ್ಞಾನ ಸಾಕ್ಷ್ಯವನ್ನು ಹೇಗೆ ಸಂಗ್ರಹಿಸಲಾಗುತ್ತದೆ?
- ವೀರ್ಯ, ಲಾಲಾರಸ, ಕೂದಲು ಮತ್ತು ಬೆರಳಿನ ಉಗುರಿನ ತುಣುಕುಗಳನ್ನು ಡಿಎನ್‌ಎಗಾಗಿ ಅಧ್ಯಯನ ಮಾಡಲಾಗುತ್ತದೆ.ಇವು ಶಂಕಿತರನ್ನು ಗುರುತಿಸಬಹುದು ಮತ್ತು ಅವರನ್ನು ಸಂತ್ರಸ್ತರಿಗೆ ಅಥವಾ ಅಪರಾಧದ ಸ್ಥಳಕ್ಕೆ ಲಿಂಕ್ ಮಾಡಬಹುದು.
- ಆಂತರಿಕ ಮತ್ತು ಬಾಹ್ಯ ಗಾಯಗಳ ಪರೀಕ್ಷೆಯೂ ನಡೆಯುತ್ತದೆ. ಗಾಯಗಳು ದೌರ್ಜನ್ಯಕಾರರ ಬಲ ಅಥವಾ ಹಿಂಸೆಯ ಬಳಕೆಯನ್ನು ಮತ್ತು ಸಂತ್ರಸ್ತರ ಪ್ರತಿರೋಧವನ್ನು ಸೂಚಿಸಬಹುದು.
- ರಕ್ತ ಮತ್ತು ಮೂತ್ರವು ಸಂತ್ರಸ್ತರು ಮದ್ಯ ಅಥವಾ ಮಾದಕ ವಸ್ತು ಪ್ರಭಾವದ ಅಡಿಯಲ್ಲಿದ್ದರೆ ಮತ್ತು ಆ ಕಾರಣದಿಂದ ಒಪ್ಪಿಗೆ ನೀಡಲು ಸಾಧ್ಯವಾಗಲಿಲ್ಲ ಎಂಬುದನ್ನು ತೋರಿಸುತ್ತದೆ.
- ಬಟ್ಟೆಯ ನಾರುಗಳು, ಪರ್ಣಾಲಂಕಾರ ಮತ್ತು ಮಣ್ಣಿನಂತಹ ವಿದೇಶಿ ವಸ್ತುಗಳು ಆರೋಪಿಯನ್ನು ಅಪರಾಧಕ್ಕೆ ಸಂಬಂಧಿಸಬಹುದು. ನಡೆದ ಘಟನೆಗಳ ಆವೃತ್ತಿಯನ್ನು ಬೆಂಬಲಿಸಲು ಮತ್ತು ದೃಢೀಕರಿಸಲು ಸಾಧ್ಯವಾದಷ್ಟು ಪುರಾವೆಗಳನ್ನು ಸಂಗ್ರಹಿಸಲು ಇದನ್ನು ಮಾಡಲಾಗುತ್ತದೆ.
ಸಂಗ್ರಹಿಸಿದ ಪುರಾವೆಗಳನ್ನು/ ಸಾಕ್ಷ್ಯವನ್ನು ಕಲುಷಿತಗೊಳಿಸಲಾಗುವುದಿಲ್ಲ ಅಥವಾ ಹಾಳುಮಾಡಲಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಶುದ್ಧವಾದ ತೇವವಿಲ್ಲದ ನಿರ್ಮಲಗೊಳಿಸಿದ ಪ್ಯಾಕ್‌ನಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ಸ್ಟಿಕ್ಕರ್‌ನಿಂದ ಮುಚ್ಚಲಾಗುತ್ತದೆ.
ಸಂತ್ರಸ್ತರು ಸಾಕ್ಷ್ಯ ಸ್ವಚ್ಛಗೊಳಿಸಿದರೆ ಏನಾಗುತ್ತದ ?
ಸಂತ್ರಸ್ತರು ಸ್ನಾನ ಮಾಡಿದರೂ ಅಥವಾ ತಮ್ಮನ್ನ ಸ್ವಚ್ಛಗೊಳಿಸಿದರೂ ವೈದ್ಯಕೀಯ ಪರೀಕ್ಷೆಗಳು ಸಾಧ್ಯವಾಗಿರುತ್ತದೆ. ಆದಾಗ್ಯೂ, ಸಾಧ್ಯವಾದರೆ, ಸ್ನಾನ ಮಾಡುವುದು, ಕೂದಲನ್ನು ಬಾಚಿಕೊಳ್ಳುವುದು, ಹಲ್ಲುಜ್ಜುವುದು, ಬಾಯಿ ತೊಳೆಯುವುದು, ಮೂತ್ರ ವಿಸರ್ಜನೆ, ಮಲವಿಸರ್ಜನೆ, ಬಟ್ಟೆ ಬದಲಾಯಿಸುವುದು ಮತ್ತು ಜನನಾಂಗದ ಸ್ಥಳ ಅಥವಾ ದೌರ್ಜನ್ಯದ ಇತರ ಸ್ಥಳಗಳನ್ನು ಸ್ವಚ್ಛಗೊಳಿಸುವದು ಮಾಡದಿರಿ, ಇದು ಸಾಕ್ಷ್ಯವನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ. 72 ಗಂಟೆಗಳ (3 ದಿನಗಳು) ನಂತರ ಸಾಕ್ಷ್ಯವನ್ನು ಕಂಡುಹಿಡಿಯುವ ಸಾಧ್ಯತೆಯು ಕಡಿಮೆಯಾಗುತ್ತದೆ. ಸಮಯ ಕಳೆದಿರುವುದರ ಬಗ್ಗೆ ಅಸ್ಪಷ್ಟತೆ ಇರುವ ಸಂದರ್ಭದಲ್ಲಿ ಸಾಮಾನ್ಯವಾಗಿ ಸಾಕ್ಷ್ಯವನ್ನು 96 ಗಂಟೆಗಳವರೆಗೆ ಸಂಗ್ರಹಿಸಲಾಗುತ್ತದೆ.
ವಿಧಿವಿಜ್ಞಾನ ಸಾಕ್ಷ್ಯಗಳಿಲ್ಲದ ಪ್ರಕರಣಗಳಲ್ಲಿ ಏನಾಗುತ್ತದೆ?
ವೈದ್ಯಕೀಯ ಪರೀಕ್ಷೆಯಿಂದ ಒಪ್ಪಿಗೆಯ ಉಪಸ್ಥಿತಿ ಅಥವಾ ಅನುಪಸ್ಥಿತಿಯನ್ನು ಖಚಿತಪಡಿಸಲು ಸಾಧ್ಯವಿಲ್ಲ. ಅದು ಸಂತ್ರಸ್ತರು ಮಾತ್ರ ನಿಜವಾಗಿಯೂ ಹೇಳಬಲ್ಲರು. ಒಂದು ಕೃತ್ಯವು ಅತ್ಯಾಚಾರವೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವಲ್ಲಿ, ಒಪ್ಪಿಗೆಯು ಪ್ರಮುಖ ಅಂಶವಾಗಿದೆ. ಯಾವುದೇ ಸಾಕ್ಷ್ಯಗಳು ಕಂಡುಬಂದಿಲ್ಲವಾದರೆ, ಅಪರಾಧ ನಡೆದಿಲ್ಲ ಎಂದು ಅರ್ಥವಲ್ಲ. ಪೊಲೀಸರು ತಮ್ಮ ತನಿಖೆಯನ್ನು ಮುಂದುವರಿಸುತ್ತಾರೆ.
ವಿಧಿವಿಜ್ಞಾನ ಸಾಕ್ಷ್ಯದ ಏಕೈಕ ರೂಪ ವೀರ್ಯವೇ?
ಈಗಲೂ ವೀರ್ಯವನ್ನು ಕಂಡುಹಿಡಿಯುವುದು ಯಾವುದೇ ಪರೀಕ್ಷೆಯ ಪ್ರಾಥಮಿಕ ಕೇಂದ್ರವಾಗಿದ್ದರೂ, ಡಿಎನ್‌ಎ ತಂತ್ರಜ್ಞಾನದಲ್ಲಿನ ಪ್ರಗತಿಯ ಕಾರಣದಿಂದ ಇತರ ಆನುವಂಶಿಕ ಪುರಾವೆಗಳನ್ನು ಸಂಗ್ರಹಿಸಲಾಗುತ್ತದೆ ಮತ್ತು ಬಳಸಲಾಗುತ್ತದೆ. ದಾಳಿಕಾರ ಮುಟ್ಟಿದ, ಕಚ್ಚಿದ ಅಥವಾ ಮುತ್ತು ಕೊಟ್ಟಿದ ಶರೀರದ ಸ್ಥಳಗಳ ಹೀರೊತ್ತಿಗೆ ಮಾದರಿಗಳು, ಸಂತ್ರಸ್ತರ ಉಗುರುಗಳಲ್ಲಿ ಡಿಎನ್ಎ ಇರುವ ಸಾಧ್ಯತೆ ಇದ್ದಲ್ಲಿ ಅವುಗಳ ಕತ್ತರಿಸಿದ ಭಾಗಗಳು, ಮತ್ತು ನೆತ್ತಿಯ ಮತ್ತು ಪ್ಯುಬಿಕ್ ಕೂದಲಿನ ಸಂಗ್ರಹಣೆಯು ಎಲ್ಲಾ ಸಂಭಾವ್ಯ ಸಾಕ್ಷ್ಯಾಧಾರಗಳ ಮೂಲಗಳು ಆಗಿರುತ್ತವೆ. ಇವು ಒಬ್ಬ ಅತ್ಯಾಚಾರಿಯನ್ನು ಗುರುತಿಸಲು ಮತ್ತು ಶಿಕ್ಷೆಗೆ ಗುರಿಪಡಿಸಲು ಸಹಾಯ ಮಾಡುತ್ತವೆ. |
ಕಾನೂನು ಪ್ರಕ್ರಿಯೆ
ಆರೋಗ್ಯ ಆರೈಕೆ ಪೂರೈಕೆದಾರರ ಹತ್ತಿರ
ಸಂತ್ರಸ್ತರನ್ನು ನೋಡಿಕೊಳ್ಳುವ ಆರೋಗ್ಯ ವೃತ್ತಿಪರರ ಕರ್ತವ್ಯಗಳು ಯಾವುವು?
ಸಂತ್ರಸ್ತರು ವೈದ್ಯಕೀಯ ಅಥವಾ ಇತರ ರೀತಿಯ ಆಸರೆಗಾಗಿ ಆಸ್ಪತ್ರೆಗಳು/ಚಿಕಿತ್ಸಾಲಯಗಳಿಗೆ ಬಂದಾಗ ಆರೋಗ್ಯ ವೃತ್ತಿಪರರು (ವೈದ್ಯರು, ದಾದಿಯರು ಮತ್ತು ಇತರ ವೈದ್ಯಕೀಯ ಸಿಬ್ಬಂದಿ) ಈ ಕೆಳಗಿನ ಕರ್ತವ್ಯಗಳನ್ನು ಹೊಂದಿರುತ್ತಾರೆ:
- ಸಂತ್ರಸ್ತರಿಗೆ ಸರಳ ಮತ್ತು ಅರ್ಥವಾಗುವ ಭಾಷೆಯಲ್ಲಿ ವಿವಿಧ ಕಾರ್ಯವಿಧಾನಗಳು ಮತ್ತು ಅವುಗಳ ಕ್ರಮಗಳ ತಾರ್ಕಿಕತೆಯನ್ನು ವಿವರಿಸುವುದು.
- ಮಕ್ಕಳು, ಅಂಗವಿಕಲ ವ್ಯಕ್ತಿಗಳು, LGBTI ವ್ಯಕ್ತಿಗಳು, ಲೈಂಗಿಕ ಕಾರ್ಯಕರ್ತರು ಅಥವಾ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಗಳಂತಹ ಅಂಚಿನಲ್ಲಿರುವ ಗುಂಪುಗಳಿಂದ ಸಂತ್ರಸ್ರರೊಂದಿಗೆ ವ್ಯವಹರಿಸುವಾಗ ವಿಶೇಷ ಹೆಜ್ಜೆಗಳನ್ನು ಅನುಸರಿಸುವುದು.
- ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಸಂತ್ರಸ್ತರಿಗೆ ಅವರು ಸಂಪೂರ್ಣ ಇತಿಹಾಸವನ್ನು ಆರೋಗ್ಯ ವೃತ್ತಿಪರರಿಗೆ ಭಯವಿಲ್ಲದೆ ಬಹಿರಂಗಪಡಿಸಬೇಕು ಎಂದು ವಿವರಿಸುವುದು. ಈ ಹಂತದಲ್ಲಿ, ಅಸ್ತಿತ್ವದಲ್ಲಿರುವ ಯಾವುದೇ ವೈದ್ಯಕೀಯ ಇತಿಹಾಸ ಅಥವಾ ಮಾಹಿತಿಯನ್ನು ಮರೆಮಾಡದಂತೆ ಸಂತ್ರಸ್ತರನ್ನು ಪ್ರೋತ್ಸಾಹಿಸಲಾಗುತ್ತದೆ.
- ಜನನಾಂಗದ ಪರೀಕ್ಷೆಯು ಅಹಿತಕರವಾಗಿರಬಹುದು ಆದರೆ ಕಾನೂನು ಉದ್ದೇಶಗಳಿಗಾಗಿ ಅವಶ್ಯಕವಾಗಿದೆ ಎಂದು ಸಂತ್ರಸ್ತರಿಗೆ ವಿವರಿಸುವುದು.
- ಕ್ಷ-ಕಿರಣಗಳಂತಹ ಹೆಚ್ಚುವರಿ ಕಾರ್ಯವಿಧಾನಗಳನ್ನು ಕೈಗೊಳ್ಳುವ ಅಗತ್ಯತೆಯ ಬಗ್ಗೆ ಸಂತ್ರಸ್ತರಿಗೆ ತಿಳಿಸಿ, ಈ ಕಾರಣದಿಂದ ಅವರು ವೈದ್ಯಕೀಯ ಸೌಲಭ್ಯದಲ್ಲಿರುವ ಇತರ ವಿಭಾಗಗಳಿಗೆ ಭೇಟಿ ನೀಡಬೇಕಾಗಬಹುದು ಎಂದು ತಿಳಿಸುವುದು.
ಆಸ್ಪತ್ರೆಗಳ ಕರ್ತವ್ಯಗಳೇನು?
ಪ್ರತಿ ಆಸ್ಪತ್ರೆಯು ಲೈಂಗಿಕ ದೌರ್ಜನ್ಯದ ಪ್ರಕರಣಗಳ ನಿರ್ವಹಣೆಗಾಗಿ ಪ್ರಮಾಣಿತ ಕಾರ್ಯಾಚರಣೆಯ ಕಾರ್ಯವಿಧಾನವನ್ನು (SOP) ಹೊಂದಿರಬೇಕು:
-
- ಮಹಿಳಾ ವೈದ್ಯರ ಅನುಪಸ್ಥಿತಿಯ ಕಾರಣದಿಂದ ಪರೀಕ್ಷೆಯನ್ನು ನಿರಾಕರಿಸಬಾರದು ಅಥವಾ ವಿಳಂಬ ಮಾಡಬಾರದು. ಪುರುಷ ವೈದ್ಯರು ಪರೀಕ್ಷಿಸುತ್ತಿದ್ದರೆ, ಅಲ್ಲಿ ಮಹಿಳಾ ಅಟೆಂಡರ್ ಉಪಸ್ಥಿತಿಯಲ್ಲಿ ಇರಬೇಕು. ಅಪ್ರಾಪ್ತ ವಯಸ್ಕರಿಗೆ/ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ಅವನ/ಅವಳ ಪೋಷಕರು/ಪಾಲಕರು/ಸಂತ್ರಸ್ತರು ನಂಬುವಂತಹ ಯಾವುದೇ ವ್ಯಕ್ತಿ ಹಾಜರಿರಬಹುದು.
- ಮಂಗಳಮುಖಿ/ಇಂಟರ್ಸೆಕ್ಸ್ ವ್ಯಕ್ತಿಯ ಸಂದರ್ಭದಲ್ಲಿ, ಸಂತ್ರಸ್ತರು ಮಹಿಳಾ ವೈದ್ಯರಿಂದ ಪರೀಕ್ಷಿಸಲು ಬಯಸುತ್ತಾರೆಯೇ ಅಥವಾ ಮಹಿಳಾ ಅಟೆಂಡೆಂಟ್ ಸಮ್ಮುಖದಲ್ಲಿ ಪುರುಷ ವೈದ್ಯರಿಂದ ಪರೀಕ್ಷಿಸಲು ಬಯಸುತ್ತಾರೆಯೇ ಎಂದು ಆಯ್ಕೆ ಮಾಡಿಕೊಳ್ಳಬಹುದು.
- ಸಂತ್ರಸ್ತರೊಂದಿಗೆ ಸಮಾಲೋಚನೆಯ ಸಮಯದಲ್ಲಿ ಪೊಲೀಸ್ ಸಿಬ್ಬಂದಿ ಪರೀಕ್ಷಾ ಕೊಠಡಿಯಲ್ಲಿ ಇರುವಂತಿಲ್ಲ. ಸಂತ್ರಸ್ತರು ವಿನಂತಿಸಿದರೆ, ಆಕೆಯ ಸಂಬಂಧಿ ಪರೀಕ್ಷೆಯ ಸಮಯದಲ್ಲಿ ಉಪಸ್ಥಿತರಿರಬಹುದು.
- ಪರೀಕ್ಷೆ ನಡೆಸಲು ಮತ್ತು ಸಾಕ್ಷ್ಯ ಸಂಗ್ರಹಿಸಲು ವಿಳಂಬ ಮಾಡಬಾರದು.
- ಚಿಕಿತ್ಸೆ ಮತ್ತು ಅಗತ್ಯ ವೈದ್ಯಕೀಯ ತನಿಖೆಗಳನ್ನು ಒದಗಿಸುವುದು ಪರೀಕ್ಷಿಸುವ ವೈದ್ಯರ ಪ್ರಧಾನ ಜವಾಬ್ದಾರಿಯಾಗಿರುತ್ತದೆ. ಚಿಕಿತ್ಸೆ ನೀಡಲು ದಾಖಲಾತಿ, ಸಾಕ್ಷ್ಯ ಸಂಗ್ರಹ ಅಥವಾ ಪೊಲೀಸ್ ದೂರು ದಾಖಲಿಸುವುದು ಕಡ್ಡಾಯವಲ್ಲ.
- ಲೈಂಗಿಕ ಹಿಂಸಾಚಾರದಿಂದ ಸಂತ್ರಸ್ತರ ಪರೀಕ್ಷೆಗಾಗಿ ಆಸ್ಪತ್ರೆಯಲ್ಲಿ ಸ್ಥಾಪಿಸಲಾದ ಗೌಪ್ಯ ಕೋಣೆಯಲ್ಲಿ ಇತಿಹಾಸ ತೆಗೆದುಕೊಳ್ಳುವುದು ಮತ್ತು ಪರೀಕ್ಷೆಯನ್ನು ಸಂಪೂರ್ಣ ಗೌಪ್ಯವಾಗಿ ನಡೆಸಬೇಕು.
- ಪರೀಕ್ಷೆಯು ಪೂರ್ಣಗೊಂಡ ನಂತರ ಸಂತ್ರಸ್ತರ ಸ್ವಂತ ಬಟ್ಟೆಗಳನ್ನು ಸಾಕ್ಷಿಯಾಗಿ ತೆಗೆದುಕೊಂಡಿದ್ದರೆ ಆಸ್ಪತ್ರೆಯಿಂದ ನೀಡಿದ ಪ್ರಸಾಧನ ಸಾಮಗ್ರಿ ಮತ್ತು ಬಟ್ಟೆಗಳನ್ನು ಬಳಸಿ ಶುಭ್ರಗೊಳಿಸಿಕೊಳ್ಳಲು ಅನುಮತಿ ನೀಡಬೇಕು. ಯಾವುದೇ ಶುಲ್ಕವಿಲ್ಲದೆ ಅಂತಹ ಬಟ್ಟೆಗಳನ್ನು ನೀಡಲು ಆಸ್ಪತ್ರೆಯು ಬದ್ಧವಾಗಿದೆ.
- ಸಂತ್ರಸ್ತರಿಗೆ ವೀಕ್ಷಣೆ ಅಥವಾ ಚಿಕಿತ್ಸೆಗಾಗಿ ಒಳಾಂಗಣದಲ್ಲಿ ಉಳಿಯುವ ಅಗತ್ಯವಿಲ್ಲದಿದ್ದರೆ, ದಾಖಲಾತಿ ಅನಗತ್ಯವಾಗಿರುತ್ತದೆ
- ಮಹಿಳಾ ವೈದ್ಯರ ಅನುಪಸ್ಥಿತಿಯ ಕಾರಣದಿಂದ ಪರೀಕ್ಷೆಯನ್ನು ನಿರಾಕರಿಸಬಾರದು ಅಥವಾ ವಿಳಂಬ ಮಾಡಬಾರದು. ಪುರುಷ ವೈದ್ಯರು ಪರೀಕ್ಷಿಸುತ್ತಿದ್ದರೆ, ಅಲ್ಲಿ ಮಹಿಳಾ ಅಟೆಂಡರ್ ಉಪಸ್ಥಿತಿಯಲ್ಲಿ ಇರಬೇಕು. ಅಪ್ರಾಪ್ತ ವಯಸ್ಕರಿಗೆ/ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ಅವನ/ಅವಳ ಪೋಷಕರು/ಪಾಲಕರು/ಸಂತ್ರಸ್ತರು ನಂಬುವಂತಹ ಯಾವುದೇ ವ್ಯಕ್ತಿ ಹಾಜರಿರಬಹುದು.
ನೆನಪಿರಲಿ…
ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತರು ಎಲ್ಲಾ ಸೇವೆಗಳನ್ನು ಸಂಪೂರ್ಣವಾಗಿ ಉಚಿತವಾಗಿ ಪಡೆಯತ್ತಕ್ಕದ್ದು. ಸಂತ್ರಸ್ತರು ಎಲ್ಲಾ ದಾಖಲೆಗಳ ನಕಲನ್ನು ಉಚಿತವಾಗಿ ಪಡೆಯಬಹುದು (ವೈದ್ಯಕೀಯ-ಕಾನೂನಿನ ಪರೀಕ್ಷೆ ಮತ್ತು ಚಿಕಿತ್ಸೆ ಸೇರಿದಂತೆ). |
ಸಂತ್ರಸ್ತರು ಮೊದಲು ಪೊಲೀಸರಿಗೆ ಹೋಗದೆ ಆಸ್ಪತ್ರೆಗೆ ವರದಿ ಮಾಡಿದಾಗ ಮಾರ್ಗಸೂಚಿಗಳು.
ಅಂತಹ ಸಂದರ್ಭಗಳಲ್ಲಿ ಆರೋಗ್ಯ ವೃತ್ತಿಪರರು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಮಾರ್ಗಸೂಚಿಗಳನ್ನು ಕೆಳಗೆ ನೀಡಲಾಗಿದೆ:
- ಸಂತ್ರಸ್ತರು ಪೊಲೀಸರಿಲ್ಲದೆ ಆಸ್ಪತ್ರೆಗೆ ಬಂದಿದ್ದರೆ, ಸಂತ್ರಸ್ತ ರು/ಪೋಷಕರು/ಪಾಲಕರ (ವಯಸ್ಸಿಗೆ ಅನುಗುಣವಾಗಿ) ಒಪ್ಪಿಗೆಯೊಂದಿಗೆ ಚಿಕಿತ್ಸೆ ನೀಡಲು ಮತ್ತು ವೈದ್ಯಕೀಯ ಪರೀಕ್ಷೆಯನ್ನು ನಡೆಸಲು ಆಸ್ಪತ್ರೆಯು ಬದ್ಧವಾಗಿದೆ.
- ಪೊಲೀಸರು ಬಂದರೂ ಬಾರದಿದ್ದರೂ ಆಸ್ಪತ್ರೆಯವರು ತಡಮಾಡದೆ ತಕ್ಷಣ ಸಂತ್ರಸ್ತರಿಗೆ ಚಿಕಿತ್ಸೆ ನೀಡಬೇಕು. ವೈದ್ಯಕೀಯ ಸಾಕ್ಷ್ಯಗಳ ಸಂಗ್ರಹವು ಸಾಧ್ಯವಾದಷ್ಟು ಬೇಗ ನಡೆಯಬೇಕು.
- ಒಬ್ಬ ವ್ಯಕ್ತಿಯು ಎಫ್‌ಐಆರ್ ಇಲ್ಲದೆ ಸ್ವಂತವಾಗಿ ಬಂದಿದ್ದರೆ, ಅವರು ದೂರು ಸಲ್ಲಿಸಲು ಬಯಸಬಹುದು ಅಥವಾ ಬಯಸದೇ ಇರಬಹುದು ಆದರೆ ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸೆಯ ಅಗತ್ಯವಿರುತ್ತದೆ. ಅಂತಹ ಸಂದರ್ಭಗಳಲ್ಲಿಯೂಸಹ ವೈದ್ಯರು ಕಾನೂನಿನ ಪ್ರಕಾರ ಪೊಲೀಸರಿಗೆ ತಿಳಿಸಲು ಬದ್ಧರಾಗಿರುತ್ತಾರೆ.
- ನ್ಯಾಯಾಲಯ ಅಥವಾ ಪೊಲೀಸರು ಸಂತ್ರಸ್ತರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ಒತ್ತಾಯಿಸಲು ಸಾಧ್ಯವಿಲ್ಲ. ಜೀವಕ್ಕೆ ಅಪಾಯವಿರುವ ಸಂದರ್ಭಗಳಲ್ಲಿ ಮಾತ್ರ ವೈದ್ಯರು IPC ಯ ಸೆಕ್ಷನ್ 92 (BNS ಸೆಕ್ಷನ್ 30)ರ ಪ್ರಕಾರ ಒಪ್ಪಿಗೆಯಿಲ್ಲದೆ ಚಿಕಿತ್ಸೆಯನ್ನು ಪ್ರಾರಂಭಿಸಬಹುದು.
- ಸಂತ್ರಸ್ತರು ಪೊಲೀಸ್ ಪ್ರಕರಣವನ್ನು ಮುಂದುವರಿಸಲು ಬಯಸದಿದ್ದರೆ, ವ್ಯೆದ್ಯಕೀಯ-ಕಾನೂನಿನ ಪ್ರಕರಣವನ್ನು (MLC) ದಾಖಲಿಸಲಾಗುತ್ತದೆ. ಎಫ್‌ಐಆರ್ ದಾಖಲಿಸಲು ನಿರಾಕರಿಸುವ ಸಂತ್ರಸ್ತರ ಹಕ್ಕಿನ ಬಗ್ಗೆ ಪೊಲೀಸರು ಅಥವಾ ವೈದ್ಯಕೀಯ ವೃತ್ತಿಪರರು ಸಂತ್ರಸ್ತರಿಗೆ ತಿಳಿಸಬೇಕು. ಅಂತಹ ಸಂದರ್ಭಗಳಲ್ಲಿ ತಿಳುವಳಿಕೆಯುಳ್ಳ ನಿರಾಕರಣೆಯನ್ನು ದಾಖಲಿಸಬೇಕು.
- ಪೊಲೀಸರು ವೈದ್ಯಕೀಯ-ಕಾನೂನಿನ ಪ್ರಕರಣವನ್ನು ದಾಖಲಿಸಿಕೊಳ್ಳಬೇಕು ಮತ್ತು ದೂರು ದಾಖಲಿಸಬಹುದಾದ ಪೊಲೀಸ್ ಠಾಣೆಯ ವಿವರಗಳೊಂದಿಗೆ ಸಂತ್ರಸ್ತರಿಗೆ ಪ್ರಕರಣದ ಸಂಖ್ಯೆಯನ್ನು ಒದಗಿಸಬೇಕು. ಸಂತ್ರಸ್ತರು ಪೊಲೀಸ್ ಅಪ್ಪಣೆ/ಕೋರಿಕೆ ಮಾಡಿರುವುದನ್ನು ಹೊಂದಿದ್ದರೆ ಅಥವಾ ನಂತರ ದೂರು ನೀಡಲು ಬಯಸಿದರೆ ಈ ವೈದ್ಯಕೀಯ-ಕಾನೂನಿನ ಪ್ರಕರಣ ಸಂಖ್ಯೆ ಉಪಯುಕ್ತವಾಗಿರುತ್ತದೆ.
- ಎಲ್ಲಾ ಮೂರು ಸಂದರ್ಭಗಳಲ್ಲಿ, ಪರೀಕ್ಷೆ ಮತ್ತು ಸಾಕ್ಷ್ಯ ಸಂಗ್ರಹಣೆಗಾಗಿ ತಿಳುವಳಿಕೆಯುಳ್ಳ ಒಪ್ಪಿಗೆ/ನಿರಾಕರಣೆಯನ್ನು ಪಡೆಯುವುದು ಕಡ್ಡಾಯವಾಗಿದೆ. ಕೆಳಗಿನ ಉದ್ದೇಶಗಳಿಗಾಗಿ ಒಪ್ಪಿಗೆಯನ್ನು ತೆಗೆದುಕೊಳ್ಳಬೇಕು: ಪರೀಕ್ಷೆ, ನೈದಾನಿಕ ಮತ್ತು ವಿಧಿವಿಜ್ಞಾನದ ಪರೀಕ್ಷೆಗಾಗಿ ಮಾದರಿ ಸಂಗ್ರಹಣೆ, ಚಿಕಿತ್ಸೆ ಮತ್ತು ಪೋಲೀಸ್ ಸೂಚನೆ. ಒಪ್ಪಿಗೆಯ ನಮೂನೆಯಲ್ಲಿ ಸಂತ್ರಸ್ತರು , ಒಬ್ಬ/ಒಬ್ಬಳು ಸಾಕ್ಷಿ ಮತ್ತು ಪರೀಕ್ಷಿಸುವ ವೈದ್ಯರು ಸಹಿ ಮಾಡಬೇಕು.
ಸಂತ್ರಸ್ತರ ಹಕ್ಕುಗಳು ಮತ್ತು ಆರೈಕೆದಾರರ ಕರ್ತವ್ಯಗಳು
ಸಂತ್ರಸ್ತರ ವಿರುದ್ಧ ಮಾಡಿದ ಲೈಂಗಿಕ ಅಪರಾಧಗಳ ತನಿಖೆ ಮತ್ತು ವಿಚಾರಣೆಯ ಸಮಯದಲ್ಲಿ ಸಂತ್ರಸ್ತರ ಹಕ್ಕುಗಳು ಮತ್ತು ಆರೈಕೆದಾರರ ಕರ್ತವ್ಯಗಳನ್ನು ಕೆಳಗೆ ನೀಡಲಾಗಿದೆ:
1. ಸಂತ್ರಸ್ತರ ಗೌಪ್ಯತೆಯ ಹಕ್ಕು
ಅತ್ಯಾಚಾರ ಸಂತ್ರಸ್ತರ ಹೆಸರನ್ನು ಯಾವುದೇ ವ್ಯಕ್ತಿ ಬಹಿರಂಗಪಡಿಸುವಂತಿಲ್ಲ. ಯಾರಾದರೂ ಹೆಸರನ್ನು ಬಹಿರಂಗಪಡಿಸಿದರೆ, ಶಿಕ್ಷೆಯು ಎರಡು ವರ್ಷಗಳವರೆಗೆ ವಿಸ್ತರಿಸಬಹುದು ಮತ್ತು ದಂಡದೊಂದಿಗೆ ಇರುತ್ತದೆ. ಇದಲ್ಲದೆ, ಎಲ್ಲಾ ಅತ್ಯಾಚಾರ ಸಂತ್ರಸ್ತರಿಗೆ ಇನ್‌ಕ್ಯಾಮೆರಾ ವಿಚಾರಣೆ ಇರಬೇಕು. ಉದಾಹರಣೆಗೆ, ಸಂತ್ರಸ್ತರ ಹೆಸರನ್ನು ಮಾಧ್ಯಮವು ಬಿಡುಗಡೆ ಮಾಡುವಂತಿಲ್ಲ. ( ಕಲಂ 228 A IPC ಮತ್ತು ಕಲಂ327(2) CrPC ಹೊಸ ಕ್ರಿಮಿನಲ್ ಕಾನೂನಿನಡಿ ಕಲಂ 72 BNS ಮತ್ತು ಕಲಂ 366(2) BNSS)
2. ಉಚಿತ ವೈದ್ಯಕೀಯ ಚಿಕಿತ್ಸೆಯ ಹಕ್ಕು/ ವೈದ್ಯಕೀಯ ಸಂಸ್ಥೆಗಳ ಕರ್ತವ್ಯ
ಲೈಂಗಿಕ ದೌರ್ಜನ್ಯದ ಘಟನೆಯ ಬಗ್ಗೆ ಪೊಲೀಸರಿಗೆ ತಿಳಿಸುವ ಕರ್ತವ್ಯದ ಜೊತೆಗೆ, ಈ ಕಾನೂನು ಸಂತ್ರಸ್ತರಿಗೆ ಉಚಿತವಾಗಿ ವೈದ್ಯಕೀಯ ಚಿಕಿತ್ಸೆ ನೀಡಲು ಸಾರ್ವಜನಿಕ ಅಥವಾ ಖಾಸಗಿ ಎರಡೂ ವೈದ್ಯಕೀಯ ಸಂಸ್ಥೆಗಳ ಮೇಲೆ ಹೊಣೆಗಾರಿಕೆಯನ್ನು ನಿಗದಿಪಡಿಸುತ್ತದೆ. ಮೇಲಿನ ನಿಬಂಧನೆಯನ್ನು ಅನುಸರಿಸಲು ವಿಫಲವಾಗುವುದು ಶಿಕ್ಷಾರ್ಹ ಅಪರಾಧವಾಗಿದೆ.(ಕಲಂ 357C CrPC ಮತ್ತು ಕಲಂ 166B IPC ಅಥವಾ ಹೊಸ ಕ್ರೀಮಿನಲ್ ಕಾನೂನಿನಡಿ ಕಲಂ 397 BNSS ಮತ್ತು ಕಲಂ 200 BNS )
3. ಮಹಿಳಾ ವೈದ್ಯರಿಂದ ಪರೀಕ್ಷೆಯ ಹಕ್ಕು
ನೋಂದಾಯಿತ ಮಹಿಳಾ ವೈದ್ಯಕೀಯ ವೈದ್ಯರು ಮಾತ್ರ ಸಂತ್ರಸ್ತ ಮಹಿಳೆಯ ಪರೀಕ್ಷೆಯನ್ನು ನಡೆಸಬೇಕು. ಯಾವುದೇ ಮಹಿಳಾ ವೈದ್ಯರು ಲಭ್ಯವಿಲ್ಲದಿದ್ದರೆ ಮತ್ತು ಸಂತ್ರಸ್ತರು ಒಪ್ಪಿಗೆ ನೀಡಿದರೆ ಪುರುಷ ನೋಂದಾಯಿತ ವೈದ್ಯರ ಪರೀಕ್ಷೆಗೆ ಒಪ್ಪಿಗೆ ನೀಡಬಹುದು. [ಕಲಂ 53A[5] CrPC ಅಥವಾ ಹೊಸ ಕ್ರೀಮಿನಲ್ ಕಾನೂನಿನಡಿ ಕಲಂ 52(5) BNSS]
4. ಅಪರಾಧಿಯ ವಿವರವಾದ ಪರೀಕ್ಷೆಯ ಹಕ್ಕು
ಕಾನೂನುಬದ್ಧವಾಗಿ, ಆರೋಪಿಗೆ ಯಾವುದೇ ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರದಿಂದ ನಡೆಸಲ್ಪಡುವ ಆಸ್ಪತ್ರೆಯಲ್ಲಿ ಉದ್ಯೋಗ ಹೊಂದಿರುವ ನೋಂದಾಯಿತ ವೈದ್ಯರಿಂದ ವಿವರವಾದ ವೈದ್ಯಕೀಯ ಪರೀಕ್ಷೆಗೆ ಒಳಗಾಗಲು ಆದೇಶಿಸಬಹುದು. ಸಂತ್ರಸ್ತರ ಕಥೆಯನ್ನು ದೃಢೀಕರಿಸುವ ಇತರ ಭೌತಿಕ ಸಾಕ್ಷ್ಯಗಳನ್ನು ಸಂಗ್ರಹಿಸಲು ಈ ಪರೀಕ್ಷೆಯನ್ನು ಮಾಡಲಾಗುತ್ತದೆ. (ಕಲಂ 53A CrPC ಅಥವಾ ಹೊಸ ಕ್ರೀಮಿನಲ್ ಕಾನೂನಿನಡಿ ಕಲಂ 52 BNSS)
5. ವೇಗದ ವಿಚಾರಣೆಯ ಹಕ್ಕು
ಪೊಲೀಸ್ ಠಾಣೆಯ ಉಸ್ತುವಾರಿ ಪೊಲೀಸ್ ಅಧಿಕಾರಿಯು ಮಾಹಿತಿಯನ್ನು ದಾಖಲಿಸಿದ ದಿನಾಂಕದಿಂದ ಎರಡು ತಿಂಗಳೊಳಗೆ ತನಿಖೆಯನ್ನು ಪ್ರಾರಂಭಿಸಬೇಕು ಮತ್ತು ಕೊನೆಗೊಳಿಸಬೇಕು. ಇದಕ್ಕಾಗಿ ವಿಶೇಷ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. (ಕಲಂ 173(1A) CrPC, ಅಥವಾ ಹೊಸ ಕ್ರೀಮಿನಲ್ ಕಾನೂನಿನಡಿ ಕಲಂ 193(2) BNSS)
6. ಸಾರ್ವಜನಿಕ ಸೇವಕನ ಕರ್ತವ್ಯ
ಈ ಕಾನೂನು ಸಾರ್ವಜನಿಕ ಸೇವಕನು ಅಂತಹ ಅಪರಾಧಗಳ ಯಾವುದೇ ಮಾಹಿತಿಯನ್ನು ದಾಖಲಿಸಲು ವಿಫಲರಾಗುವುದನ್ನು ಶಿಕ್ಷಾರ್ಹ ಅಪರಾಧವೆಂದು ಖಚಿತಪಡಿಸುತ್ತದೆ, ತಪ್ಪಿತಸ್ಥರಿಗೆ ಕಠಿಣ ಸೆರೆವಾಸ ಮತ್ತು ದಂಡ ಎರಡನ್ನೂ ವಿಧಿಸುತ್ತದೆ. (ಕಲಂ 166A IPC ಅಥವಾ ಹೊಸದಾಗಿ ಕಲಂ 199 BNS ಮತ್ತು ಕಲಂ 154 (1) CrPC ಅಥವಾ ಹೊಸ ಕ್ರೀಮಿನಲ್ ಕಾನೂನಿನಡಿ ಕಲಂ 173(1) BNSS )
7. ಒಪ್ಪಿಗೆಯ ಅನುಪಸ್ಥಿತಿಯನ್ನು ಊಹಿಸಲು ನ್ಯಾಯಾಲಯದ ಕರ್ತವ್ಯ
ಅತ್ಯಾಚಾರದ ಯಾವುದೇ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು ಸಂತ್ರಸ್ತರ ಒಪ್ಪಿಗೆಯ ಅನುಪಸ್ಥಿತಿಯನ್ನು ಊಹಿಸುತ್ತದೆ. (ಕಲಂ 114-A, ಭಾರತೀಯ ಸಾಕ್ಷಿ ಕಾಯಿದೆ ಅಥವಾ ಹೊಸ ಕ್ರಿಮಿನಲ್ ಕಾನೂನಿನಡಿ ಕಲಂ 120 BSA)
ಸಂಪನ್ಮೂಲಗಳು :
ಸಹಾಯವಾಣಿಗಳು:
ಮಹಿಳಾ ಸಹಾಯವಾಣಿ – 1091
ಮಹಿಳಾ ಸಹಾಯವಾಣಿಯು ಖಾಸಗಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹಿಂಸೆಯಿಂದ ಪೀಡಿತ ಮಹಿಳೆಯರಿಗೆ 24/7 ತಕ್ಷಣದ ಮತ್ತು ತುರ್ತು ಉತ್ತರವನ್ನು ನೀಡುತ್ತದೆ. ಅವರು ದೂರುಗಳನ್ನು ಸಲ್ಲಿಸಲು ಸಹಾಯ ಮಾಡುತ್ತಾರೆ. ಅವರು ಸಂತ್ರಸ್ತರ ನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಯ ಕಡೆಗೆ ಮಾರ್ಗದರ್ಶನ ಮಾಡಬಹುದು.
ಪೊಲೀಸ್ – 100
ತುರ್ತು ಸಂದರ್ಭದಲ್ಲಿ ಪೊಲೀಸರು ಆಗಮಿಸುತ್ತಾರೆ.
ಪರಿಶೀಲನಾಪಟ್ಟಿ:
- ಸಂಪೂರ್ಣ ವೈದ್ಯಕೀಯ ವರದಿಯ ಪ್ರತಿಯನ್ನು ಉಚಿತವಾಗಿ ತೆಗೆದುಕೊಳ್ಳಿರಿ.
- ಎಫ್‌ಐಆರ್ ಪ್ರತಿಯನ್ನು ಉಚಿತವಾಗಿ ತೆಗೆದುಕೊಳ್ಳಿರಿ.
- ನೀವು ವೈದ್ಯಕೀಯ ಪರೀಕ್ಷೆಗೆ ಹೋಗುವಾಗ ಬದಲಾವಣೆಯ ಬಟ್ಟೆಯನ್ನು ತೆಗೆದುಕೊಂಡು ಹೋಗಿ.
- ಸಾಧ್ಯವಾದರೆ, ಪರೀಕ್ಷೆಯ ಮೊದಲು ಹಲ್ಲುಜ್ಜುವುದು, ಸ್ನಾನ ಮಾಡುವುದು, ಮೂತ್ರ ವಿಸರ್ಜನೆ, ಮಲವಿಸರ್ಜನೆ, ಬಟ್ಟೆ ಬದಲಾಯಿಸುವುದು, ಕೂದಲು ಬಾಚುವುದು, ಬಾಯಿ ತೊಳೆಯುವುದು ಅಥವಾ ಜನನಾಂಗದ ಸ್ಥಳವನ್ನು ಸ್ವಚ್ಛಗೊಳಿಸುವುದನ್ನು ತಪ್ಪಿಸಿ.
- ಪರೀಕ್ಷೆಗೆ ಎಫ್‌ಐಆರ್ ದಾಖಲಿಸುವುದು ಕಡ್ಡಾಯವಲ್ಲ.
- ವಿಧಿವಿಜ್ಞಾನದ ಸಾಕ್ಷ್ಯವನ್ನು ಸಂರಕ್ಷಿಸಲು ಪರೀಕ್ಷೆಯನ್ನು ಉಚಿತವಾಗಿ ಮತ್ತು ಸಾಧ್ಯವಾದಷ್ಟು ಬೇಗ ನಡೆಸಲಾಗುತ್ತದೆ.
- ಸಂತ್ರಸ್ತರು ಬಯಸಿದಲ್ಲಿ ಪ್ರಕ್ರಿಯೆಯ ಯಾವುದೇ ಭಾಗವನ್ನು ಬಿಟ್ಟುಬಿಡಬಹುದು, ಕಾರ್ಯವಿಧಾನದ ಎಲ್ಲಾ ಅಂಶಗಳು ಸಂತ್ರಸ್ತರ ಒಪ್ಪಿಗೆಯೊಂದಿಗೆ ನಡೆಯಬೇಕು.
- ಸಂತ್ರಸ್ತರು ಭಾವನಾತ್ಮಕ ಆಸರೆಗಾಗಿ ವೈದ್ಯಕೀಯ ಪರೀಕ್ಷೆಗೆ ತಮ್ಮೊಂದಿಗೆ ಒಬ್ಬ ವ್ಯಕ್ತಿಯನ್ನು ಕರೆದುಕೊಂಡು ಹೋಗಬಹುದು.
- ಸಂತ್ರಸ್ತರು ಒಪ್ಪಿಗೆ ನೀಡಿದರೆ ಮಾತ್ರ ಮಹಿಳಾ ವೈದ್ಯರ ಹೊರತು ಬೇರೊಬ್ಬರು ಪರೀಕ್ಷೆ ಮಾಡಬಹುದು
- ಗರ್ಭಧಾರಣೆ ಮತ್ತು ಲೈಂಗಿಕವಾಗಿ ಹರಡುವ ರೋಗಗಳಿಗೆ ವೈದ್ಯಕೀಯ ಪರೀಕ್ಷೆಗಳಿಗೆ ವಿನಂತಿಸಿ
ಮಾಹಿತಿಯ ಮೂಲಗಳು :
ಮಾರ್ಗಸೂಚಿಗಳು
- ಸಂತ್ರಸ್ತ ಸ್ನೇಹಿ: ಪ್ರತಿಕ್ರಿಯೆಗಳು ಮತ್ತು ಕಾರ್ಯವಿಧಾನಗಳ ಕಡೆಗೆ – ಕಾನೂನು ಮತ್ತು ಅಭಿವೃದ್ಧಿ, ನ್ಯಾಯ ಇಲಾಖೆ (ಕಾನೂನು ಮತ್ತು ನ್ಯಾಯ ಸಚಿವಾಲಯ) ಮತ್ತು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಪಾಲುದಾರರು
- ರಾಷ್ಟ್ರೀಯ ಮಹಿಳಾ ಆಯೋಗ – ಅತ್ಯಾಚಾರ
- ಮಾರ್ಗಸೂಚಿಗಳು ಮತ್ತು ಪ್ರೋಟೋಕಾಲ್ಗಳು, ಲೈಂಗಿಕ ಹಿಂಸಾಚಾರದ ಸಂತ್ರಸ್ತರ ರು/ಸಂತ್ರಸ್ತರಿಗೆ ವ್ಯೆದ್ಯ-ಕಾನೂನಿನ ಆರೈಕೆ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (2014).
ಶಾಸನಗಳು
ಅಪರಾಧ ಕಾನೂನು ತಿದ್ದುಪಡಿ ಕಾಯಿದೆ, 2013
ಅಪರಾಧ ಪ್ರಕ್ರಿಯಾ ಸಂಹಿತೆ, 1973
ಭಾರತೀಯ ದಂಡ ಸಂಹಿತೆ, 1860
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ(POCSO), 2012
ಭಾರತೀಯ ನ್ಯಾಯ ಸಂಹಿತೆ, 2023
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023
ಭಾರತೀಯ ಸಕ್ಷ್ಯ ಅಧಿನಿಯಮ, 2023
ಮಾದರಿ ಫಾರ್ಮ್‌ಗಳು
ಪರೀಕ್ಷೆಯನ್ನು ನಡೆಸುವ ವೈದ್ಯಕೀಯ ಸಿಬ್ಬಂದಿಯಿಂದ ಭರ್ತಿ ಮಾಡಬೇಕಾದ ಫಾರ್ಮ್.
ಪದಕೋಶ
ವಿಧಿವಿಜ್ಞಾನ ಸಾಕ್ಷ್ಯ – ವಿಧಿವಿಜ್ಞಾನ ಸಾಕ್ಷ್ಯಗಳು ಬ್ಯಾಲಿಸ್ಟಿಕ್ಸ್, ರಕ್ತ ಪರೀಕ್ಷೆ ಮತ್ತು ಡಿಎನ್ಎ ಪರೀಕ್ಷೆಯಂತಹ ವೈಜ್ಞಾನಿಕ ವಿಧಾನಗಳಿಂದ ಪಡೆದ ಮತ್ತು ನ್ಯಾಯಾಲಯದಲ್ಲಿ ಬಳಸಲಾಗುವ ಸಾಕ್ಷ್ಯವಾಗಿದೆ. ವಿಧಿವಿಜ್ಞಾನ ಸಾಕ್ಷ್ಯವು ಶಂಕಿತರ ಅಪರಾಧ ಅಥವಾ ನಿರ್ದೋಷತೆಯನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ.
ಜನನಾಂಗಗಳ ಪರೀಕ್ಷೆ – ವೈದ್ಯರಿಂದ ಜನನಾಂಗದ ದೃಶ್ಯ ಮತ್ತು ಕೈಯಿಂದ ಪರೀಕ್ಷೆ. ಯೋನಿ ಗೋಡೆ ಮತ್ತು ಗರ್ಭಕಂಠದ ಮೇಲೆ ಡಿಎನ್ಎ ಪರೀಕ್ಷಿಸಲು ಕುಹರವರ್ಧಕವನ್ನು (ಸ್ಪೆಕ್ಯುಲಮ್) ಅನ್ನು ಬಳಸಬಹುದು. ವೈದ್ಯರು “ಬೈಮ್ಯಾನುಯಲ್” ಪರೀಕ್ಷೆಯನ್ನು ಮಾಡುತ್ತಾರೆ, ಅಂದರೆ ಅವನು ಅಥವಾ ಅವಳು ಆಂತರಿಕ ಸಂತಾನೋತ್ಪತ್ತಿ ಅಂಗಗಳನ್ನು ಪರೀಕ್ಷಿಸಲು ತನ್ನ ಕೈಗಳನ್ನು ಬಳಸುತ್ತಾರೆ. ಪರೀಕ್ಷಕರ ಕೈಗಳಿಗೆ ಬೈಮ್ಯಾನುಯಲ್ ಪರೀಕ್ಷೆಗೆ ಕೈಗವಸು ಹಾಕಲಾಗುತ್ತದೆ ಮತ್ತು ಅವುಗಳ ಮೇಲೆ ಲೂಬ್ರಿಕೇಟಿಂಗ್ ಜೆಲ್ಲಿಯನ್ನು ಹಾಕಿರಬಹುದು, ಇದರಿಂದಾಗಿ ಅವರು ತಣ್ಣಗಾಗಿರುತ್ತವೆ.
ಡಿಎನ್ಎ – ಮಾನವರಲ್ಲಿ ಮತ್ತು ಬಹುತೇಕ ಎಲ್ಲಾ ಇತರ ಜೀವಿಗಳಲ್ಲಿ ಆನುವಂಶಿಕ ವಸ್ತು. ವ್ಯಕ್ತಿಯ ದೇಹದಲ್ಲಿನ ಪ್ರತಿಯೊಂದು ಜೀವಕೋಶವೂ ಒಂದೇ ಡಿಎನ್‌ಎಯನ್ನು ಹೊಂದಿರುತ್ತದೆ. ವ್ಯಕ್ತಿಗಳನ್ನು ಗುರುತಿಸಲು ಮತ್ತು ಅವರನ್ನು ಅಪರಾಧಗಳಿಗೆ ಸಂಬಂಧಿಸಲು ಇದನ್ನು ಬಳಸಲಾಗುತ್ತದೆ.
STI (ಎಸ್ . ಟಿ . ಐ) – ಬ್ಯಾಕ್ಟೀರಿಯಾ, ವೈರಸ್‌ಗಳು ಅಥವಾ ಪರಾವಲಂಬಿಗಳಿಂದ ಉಂಟಾಗುವ ಲೈಂಗಿಕ ಸಂಪರ್ಕದ ಮೂಲಕ ಹರಡುವ ಸೋಂಕು. ಈ ಸೋಂಕುಗಳು ಸಾಮಾನ್ಯವಾಗಿ ಯೋನಿ ಸಂಭೋಗದ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತವೆ. ಗುದ ಸಂಭೋಗ, ಮೌಖಿಕ ಸಂಭೋಗ ಅಥವಾ ಚರ್ಮದಿಂದ ಚರ್ಮದ ಸಂಪರ್ಕದ ಮೂಲಕವೂ ಅವುಗಳನ್ನು ರವಾನಿಸಬಹುದು. ವೈರಸ್‌ಗಳಿಂದ ಉಂಟಾಗುವ STIಗಳಲ್ಲಿ ಹೆಪಟೈಟಿಸ್ ಬಿ, ಹರ್ಪಿಸ್, ಎಚ್‌ಐವಿ ಮತ್ತು ಹ್ಯೂಮನ್ ಪ್ಯಾಪಿಲೋಮ ವೈರಸ್ (ಎಚ್‌ಪಿವಿ) ಸೇರಿವೆ.
ವೈದ್ಯಕೀಯ-ಕಾನೂನಿನ ಪ್ರಕರಣ – ವೈದ್ಯಕೀಯ-ಕಾನೂನಿನ ಪ್ರಕರಣ ಎಂಬುದು ಗಾಯ ಅಥವಾ ಅನಾರೋಗ್ಯದ ಪ್ರಕರಣವನ್ನು ಸೂಚಿಸುತ್ತದೆ, ಇದು ದೇಶದ ಕಾನೂನಿನ ಪ್ರಕಾರ ಪ್ರಕರಣಕ್ಕೆ ಕ್ರಿಮಿನಲ್ ಜವಾಬ್ದಾರಿಯನ್ನು ಸ್ಥಾಪಿಸಲು ಮತ್ತು ಸರಿಪಡಿಸಲು ಕಾನೂನು ಜಾರಿ ಸಂಸ್ಥೆಗಳ ತನಿಖೆಯನ್ನು ಸೂಚಿಸುತ್ತದೆ.
ಎಫ್ಐಆರ್ – ಪ್ರಥಮ ಮಾಹಿತಿ ವರದಿಯನ್ನು ಸೂಚಿಸುತ್ತದೆ. ಇದು ಕಾಗ್ನಿಜಬಲ್ ಅಪರಾಧದ ಸಂತ್ರಸ್ತ ಅಥವಾ ಅವನ/ಅವಳ ಪರವಾಗಿ ಯಾರಾದರೂ ಪೊಲೀಸರಿಗೆ ನೀಡಿದ ದೂರು. ಇದು ಕಾಗ್ನಿಜಬಲ್ ಅಪರಾಧ ಮಾಡಿದ ಬಗ್ಗೆ ಮಾಹಿತಿಯನ್ನು ಸ್ವೀಕರಿಸಿದಾಗ ಪೊಲೀಸರು ಸಿದ್ಧಪಡಿಸುವ ಲಿಖಿತ ದಾಖಲೆಯಾಗಿದೆ.
ಒಪ್ಪಿಗೆ – ಒಬ್ಬ ವ್ಯಕ್ತಿಯು ಇನ್ನೊಬ್ಬರ ಪ್ರಸ್ತಾಪ ಅಥವಾ ಆಸೆಗಳನ್ನು ಸ್ವಯಂಪ್ರೇರಣೆಯಿಂದ ಒಪ್ಪಿಕೊಳ್ಳುವುದು.
ಎರಡು – ಬೆರಳಿನ ಪರೀಕ್ಷೆ – ಯೋನಿ ಸಡಿಲತೆ ಮತ್ತು ಇತ್ತೀಚಿನ ಲೈಂಗಿಕ ಸಂಭೋಗದ ಮಟ್ಟವನ್ನು ಪರೀಕ್ಷಿಸಲು ವೈದ್ಯರು ಬೆರಳನ್ನು ಸ್ತ್ರೀಯ ಯೋನಿಯೊಳಗೆ ಸೇರಿಸುವ ಮೂಲಕ ಪರೀಕ್ಷೆಯನ್ನು ಮಾಡುತ್ತಾರೆ. ಈ ಪರೀಕ್ಷೆಯು ಕಾನೂನುಬಾಹಿರವಾಗಿದೆ.