ದತ್ತು ಸ್ವೀಕೃತಿಯ ಪರಿಣಾಮಗಳು

ನೀವು ಯಾವುದೇ ಕಾನೂನಿನಡಿಯಲ್ಲಿ ದತ್ತು ಪಡೆದಿರಲಿ, ಅದರ ಪರಿಣಾಮಗಳು ಹೀಗಿವೆ:

  • ದತ್ತು ತಂದೆ-ತಾಯಿಯ ಮಗು: ಎಲ್ಲ ಉದ್ದೇಶಗಳಿಗೆ, ಮಗು ದತ್ತು ತಂದೆ-ತಾಯಿಯರದ್ದು, ಹಾಗು ದತ್ತು ತಂದೆ-ತಾಯಿಯರು ಮಗುವಿನ ಜೈವಿಕ ತಂದೆ-ತಾಯಿಯರಂತೆ ಕಾನೂನು ಪರಿಗಣಿಸುತ್ತದೆ.
  • ಮಗುವಿನ ಕೌಟುಂಬಿಕ ಸಂಪರ್ಕಗಳು: ಮಗುವಿನ ಹುಟ್ಟು ಕುಟುಂಬದ ನೆಂಟರ ಜೊತೆಗಿನ ಸಂಪರ್ಕಗಳು ಮುರಿದು, ದತ್ತು ಕುಟುಂಬದ ಸದಸ್ಯರೊಡನೆ ಸಂಪರ್ಕಗಳು ಗುರುತಿಸಲಾಗುತ್ತವೆ. ಆದರೆ, ಹಿಂದೂ ಕಾನೂನಿನ ಪ್ರಕಾರ, ದತ್ತು ಕೊಟ್ಟ ವ್ಯಕಿ, ತನ್ನ ಹುಟ್ಟು ಕುಟುಂಬದ ಯಾವುದೇ ನಿಷೇಧಿತ ಸದಸ್ಯರನ್ನು ಮದುವೆಯಾಗಲಾರರು.
  • ಮಗುವಿನ ಆಸ್ತಿ ಹಕ್ಕು: ದತ್ತು ಕೊಡುವುದಕ್ಕೆ ಮುನ್ನ ಆ ವ್ಯಕ್ತಿಯ ಹೆಸರಿನ ಮೇಲಿದ್ದ ಎಲ್ಲ ಆಸ್ತಿ ಅವರದ್ದೇ ಆಗಿರುತ್ತದೆ, ಆ ಆಸ್ತಿಯ ಜೊತೆಗಿದ್ದ ಕಟ್ಟುಪಾಡುಗಳ ಸಹಿತ (ಜೈವಿಕ ಕುಟುಂಬದ ಸದಸ್ಯರ ಆರೈಕೆಯ ಕರ್ತವ್ಯ ಸೇರಿದಂತೆ).

ಆದಾಗ್ಯೂ, ಹಿಂದೂ ದತ್ತು ಸ್ವೀಕಾರ ಕಾನೂನಿನ ಪ್ರಕಾರ, ಮಗುವಿನ ದತ್ತು ಸ್ವೀಕೃತಿ ಆದೇಶ ಹೊರಡಿಸಿದ ದಿನದಿಂದ:

  • ಮಗುವಿನ ಆಸ್ತಿ ಹಕ್ಕು: ಮಗುವಿನ ದತ್ತು ತೆಗೆದುಕೊಳ್ಳುವ ಮುಂಚೆ ಯಾರಿಗೆ ಆಸ್ತಿ ಹಾಕು ಇತ್ತೋ, ಅವರಿಂದ ಆ ದತ್ತುಕ ವ್ಯಕ್ತಿ ಆಸ್ತಿ ಪಾಲು ಕೇಳಲಾರರು. ಹಾಗು, ದತ್ತು ತಂದೆ-ತಾಯಿಯರು ತಮ್ಮ ಉಯಿಲಿನ ಮುಖಾಂತರ ಅಥವಾ ಇನ್ನಿತರ ಕಾನೂನುಗಳ ಸಹಾಯದಿಂದ ತಮ್ಮ ಆಸ್ತಿಯ ಒಡೆತನ ಬೇರೆಯವರ ಹೆಸರಲ್ಲಿ ಕೂಡ ವರ್ಗಾವಣೆ ಮಾಡಬಹುದು.
  • ಮಾನ್ಯ ದತ್ತು ಸ್ವೀಕೃತಿಯನ್ನು ರದ್ದುಪಡಿಸುವುದು: ದತ್ತು ತಂದೆ-ತಾಯಿ ಅಥವಾ ಬೇರೋರ್ವ ವ್ಯಕ್ತಿ ಮಾನ್ಯ ದತ್ತು ಸ್ವೀಕೃತಿಯನ್ನು ರದ್ದು ಪಡಿಸಲು ಸಾಧ್ಯವಿಲ್ಲ. ಒಮ್ಮೆ ದತ್ತು ಪಡೆದ ಮೇಲೆ ಆ ಮಗು ದತ್ತುಕ ಕುಟುಂಬವನ್ನು ತಿರಸ್ಕರಿಸಿ, ಜೈವಿಕ ಕುಟುಂಬಕ್ಕೆ ಹಿಂತಿರುಗಿ ಹೋಗಲು ಸಾಧ್ಯವಿಲ್ಲ.