ನೀವು ಹಿಂದೂ ಕಾನೂನಿನ ಅಡಿಯಲ್ಲಿ ಮದುವೆಯಾಗಿದ್ದರೆ, ನಿಮ್ಮ ವಿಚ್ಛೇದನದ ಸಂದರ್ಭದಲ್ಲಿ ಅದೇ ಕಾನೂನು ಅನ್ವಯಿಸುತ್ತದೆ. ಆ ಕಾನೂನಿನಲ್ಲಿರುವ ಕಾರಣಗಳ ಆಧಾರದ ಮೇಲೆ ಮಾತ್ರ ನೀವು ನಿಮ್ಮ ಸಂಗಾತಿಗೆ ವಿಚ್ಛೇದನ ನೀಡಬಹುದು. ನೀವು ಇನ್ನು ಮುಂದೆ ಮದುವೆಯನ್ನು ಮುಂದುವರಿಸಲು ಬಯಸುವುದಿಲ್ಲ ಎಂಬ ಒಂದೇ ಆಧಾರದ ಮೇಲೆ ವಿಚ್ಛೇದನ ಪಡೆಯುವುದು ಕಷ್ಟ.

ಹಿಂದೂ ವಿವಾಹಗಳು ಹಿಂದೂ ವಿವಾಹ ವಿಚ್ಛೇದನ

ಭಾರತದಲ್ಲಿ ಹಿಂದೂಗಳು ತಮ್ಮ ವಿವಾಹವನ್ನು ಹಿಂದೂ ಧಾರ್ಮಿಕ ಕಾನೂನುಗಳಡಿ ಅಥವಾ “ವಿಶೇಷ ವಿವಾಹ ಕಾಯಿದೆ, ೧೯೫೪”ರ (Special Marriage Act, 1954) ಅಡಿ ನೋಂದಾಯಿಸಬಹುದು. ನೀವು ಹಿಂದೂ ಕಾಯಿದೆಯಡಿ ಮದುವೆಯಾದಲ್ಲಿ, ನಿಮ್ಮ ವಿಚ್ಛೇದನವೂ ಸಹ ಅದರಡಿಯೇ ಆಗಬಲ್ಲದು. ಮತ್ತಲ್ಲದೇ, ನೀವು ನಿಮ್ಮ ಪತಿ/ಪತ್ನಿಯನ್ನು ಕಾನೂನಿನಡಿಯಲ್ಲಿ ನಿರ್ದಿಷ್ಟಪಡಿಸಿದ ಕಾರಣಗಳಿಗೆ ಮಾತ್ರ ವಿಚ್ಛೇದಿಸಬಹುದು. ವಿನಾ ಕಾರಣ, “ನನಗೆ ನನ್ನ ಪತಿ/ಪತ್ನಿಯ ಜೊತೆ ಮದುವೆ ಆಗಿರಲು ಇನ್ನು ಸೇರುತ್ತಿಲ್ಲ” ಎಂದು ವಿಚ್ಛೇದನ ಪಡೆಯುವುದು ಸುಲಭಸಾಧ್ಯವಲ್ಲ. ಆದರೆ, ನೀವು ಹಾಗು ನಿಮ್ಮ ಸಂಗಾತಿ ಇಬ್ಬರೂ ಒಪ್ಪಿದ್ದಲ್ಲಿ, “ಪರಸ್ಪರ ಒಪ್ಪಿಗೆಯ” (mutual consent) ವಿಚ್ಛೇದನ ಪಡೆಯಬಹುದಾಗಿದೆ. ಪತಿ ಅಥವಾ ಪತ್ನಿ, ಕಾನೂನಿನಡಿ ನಿರ್ದಿಷ್ಟ ಪಡಿಸಿದ ಕಾರಣದ ಮೇಲೆ, ಕೋರ್ಟಿನಲ್ಲಿ ಮನವಿ ಸಲ್ಲಿಸಿದರೆ ವಿಚ್ಛೇದನ ಪಡೆಯಬಹುದು.