ಹೊಸ ಕಾನೂನಿನ ಮೊದಲು, ಭಾರತದಲ್ಲಿ ಉತ್ಪನ್ನದ ಹೊಣೆಗಾರಿಕೆಯನ್ನು ನಿರ್ದಿಷ್ಟವಾಗಿ ಒಪ್ಪಂದದ ಕಾನೂನು ಮತ್ತು ಸಾಮಾನ್ಯವಾಗಿ ಹಳೆಯ ಗ್ರಾಹಕ ಸಂರಕ್ಷಣಾ ಕಾಯಿದೆ, ಸರಕುಗಳ ಮಾರಾಟ ಕಾಯಿದೆ, ಭಾರತೀಯ ದಂಡ ಸಂಹಿತೆ ಮತ್ತು ನಿರ್ದಿಷ್ಟ ಸರಕುಗಳು ಮತ್ತು ಪ್ರಮಾಣೀಕರಣದ ಕುರಿತು ಕೆಲವು ಇತರ ಕಾನೂನುಗಳ ಅಡಿಯಲ್ಲಿ ನಿರ್ವಹಿಸಲಾಗುತ್ತದೆ.

ಉತ್ಪನ್ನದ ಹೊಣೆಗಾರಿಕೆ (product liability) ಎಂದರೇನು?

ಕೊನೆಯ ಅಪ್ಡೇಟ್ Oct 6, 2022

ಉತ್ಪನ್ನದ ಹೊಣೆಗಾರಿಕೆ ಎಂದರೆ ಉತ್ಪನ್ನದಲ್ಲಿನ ದೋಷ ಅಥವಾ ಸೇವೆಯಲ್ಲಿನ ಕೊರತೆಯಿಂದಾಗಿ ಗ್ರಾಹಕರಿಗೆ ಉಂಟಾದ ಹಾನಿಯನ್ನು ಸರಿದೂಗಿಸಲು ಉತ್ಪನ್ನ ತಯಾರಕ ಅಥವಾ ಮಾರಾಟಗಾರರ ಜವಾಬ್ದಾರಿ. ಉಂಟಾದ ಹಾನಿಯು ವೈಯಕ್ತಿಕ ಗಾಯ, ಮಾನಸಿಕ ಯಾತನೆ, ಸಾವು, ಆಸ್ತಿ ಹಾನಿ, ಒಪ್ಪಂದದ ಉಲ್ಲಂಘನೆ ಇತ್ಯಾದಿ ಸಮಸ್ಯೆಗಳನ್ನು ಒಳಗೊಂಡಿರಬಹುದು. ಉದಾಹರಣೆಗೆ, ಆನ್‌ಲೈನ್ ಆಹಾರ ಉತ್ಪನ್ನವು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಿದರೆ ಅಥವಾ ಹೆಚ್ಚು ಕಲಬೆರಕೆ ಹೊಂದಿದ್ದರೆ, ಮಾರಾಟಗಾರರ ವಿರುದ್ಧ ಉತ್ಪನ್ನ ಹೊಣೆಗಾರಿಕೆಯ ಕ್ರಮವನ್ನು ತರಲು ಗ್ರಾಹಕರು ದೂರು ಸಲ್ಲಿಸಬಹುದು. ಅಂತಹ ಸಂದರ್ಭಗಳಲ್ಲಿ ಉತ್ಪನ್ನ ತಯಾರಕರು, ಮಾರಾಟಗಾರರು ಮತ್ತು ಸೇವಾ ಪೂರೈಕೆದಾರರ ವಿರುದ್ಧ ದೂರು ಸಲ್ಲಿಸಬಹುದು.

ಉತ್ಪನ್ನ ಹೊಣೆಗಾರಿಕೆಯ ನಿದರ್ಶನಗಳು

  • ಉತ್ಪನ್ನವು ಉತ್ಪಾದನಾ ದೋಷವನ್ನು ಹೊಂದಿರುವಾಗ ಅಥವಾ ಸಾಕಷ್ಟು ಉತ್ತಮವಾಗಿಲ್ಲದಿದ್ದಾಗ
  • ಎಲ್ಲಿ ಉತ್ಪನ್ನದ ತಯಾರಿಕೆಯು ಉತ್ಪಾದನಾ ವಿಶೇಷಣಗಳಿಗೆ ಅನುಗುಣವಾಗಿರುವುದಿಲ್ಲವೋ
  • ಹಾನಿಯನ್ನು ಉಂಟುಮಾಡಿದ ಉತ್ಪನ್ನದಲ್ಲಿ ಮಾರ್ಪಾಡು ಅಥವಾ ಬದಲಾವಣೆ
  • ಉತ್ಪನ್ನವು ವಿನ್ಯಾಸ, ಪರೀಕ್ಷೆ ಅಥವಾ ಪ್ಯಾಕೇಜಿಂಗ್ ದೋಷವನ್ನು ಹೊಂದಿದ್ದಾಗ
  • ಖರೀದಿಸಿದ ಉತ್ಪನ್ನದ ಬಳಕೆಯ ಬಗ್ಗೆ ಅಸಮರ್ಪಕ ಸೂಚನೆಗಳು ಅಥವಾ ಎಚ್ಚರಿಕೆಗಳು ಇದ್ದಾಗ
  • ಉತ್ಪನ್ನ ಸೂಚಿಸಲಾದ ಎಕ್ಸ್‌ಪ್ರೆಸ್ ವಾರಂಟಿ ಅಥವಾ ಗ್ಯಾರಂಟಿಗಳಿಗೆ ಅನುಗುಣವಾಗಿಲ್ಲದ್ದಿದ್ದಾಗ

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.