ಮತದಾನ ದಿನದ ಘೋಷಣೆ
ಮತದಾನ ದಿನಾಂಕದ ಘೋಷಣೆಯನ್ನು ಭಾರತದ ಚುನಾವಣಾ ಆಯೋಗ ತಮ್ಮ ವೆಬ್ಸೈಟ್ನಲ್ಲಿ ಮಾಡಲಿದೆ. ಇದು ನಿಮ್ಮ ರಾಜ್ಯದಲ್ಲಿ ಮತದಾನ ನಡೆಯುವ ದಿನಾಂಕಗಳನ್ನು ಒಳಗೊಂಡಿರುತ್ತದೆ.
ವೇತನದೊಂದಿಗೆ ರಜಾದಿನಗಳು
ನಿಮ್ಮ ಕ್ಷೇತ್ರದಲ್ಲಿ ಮತದಾನ ನಡೆಯುವ ದಿನ, ವೇತನದೊಂದಿಗೆ ರಜಾದಿನವೆಂದು ಘೋಷಿಸಲಾಗುವುದು. ನಿಮ್ಮ ಕೆಲಸದ ಸ್ಥಳದಿಂದ ಯಾವುದೇ ಒತ್ತಡವಿಲ್ಲದೆ ಮುಕ್ತವಾಗಿ ಮತ ಚಲಾಯಿಸಲು ಇದು ನಿಮಗೆ ಅವಕಾಶ ನೀಡುತ್ತದೆ. ನೀವು ಯಾವುದೇ ವ್ಯವಹಾರ, ವ್ಯಾಪಾರ, ಕೈಗಾರಿಕಾ ಉದ್ಯಮ ಅಥವಾ ಇನ್ನಾವುದೇ ಸಂಸ್ಥೆಯಲ್ಲಿ ಅಥವಾ ದೈನಂದಿನ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರೆ, ಮತದಾನದ ದಿನದಂದು ನಿಮ್ಮ ಉದ್ಯೋಗದಾತ ನಿಮಗೆ ವೇತನದೊಂದಿಗೆ ರಜೆ ನೀಡಬೇಕು.
ಉದ್ಯೋಗದಾತರಿಗೆ ಶಿಕ್ಷೆ
ಆ ದಿನ ನಿಮಗೆ ವೇತನದೊಂದಿಗೆ ರಜೆ ಸಿಗದಿದ್ದರೆ, ನಿಮ್ಮ ಉದ್ಯೋಗದಾತರಿಗೆ ಗರಿಷ್ಠ ರೂ. 500 ದಂಡ ವಿಧಿಸಲಾಗುವುದು.