ವೈದ್ಯಕೀಯ ಸೌಲಭ್ಯಗಳು:
ನಿಮಗೆ ಕೌಟುಂಬಿಕ ಹಿಂಸೆ ಆಗಿದ್ದಲ್ಲಿ, ವೈದ್ಯಕೀಯ ಸಹಾಯ ಪಡೆಯುವುದು ನಿಮ್ಮ ಹಕ್ಕಾಗಿದೆ. ನಿಮಗೆ ಅಥವಾ ನಿಮ್ಮ ಮಗುವಿಗೆ ವೈದ್ಯಕೀಯ ಸಹಾಯ ಬೇಕಾದಲ್ಲಿ, ನಿಮ್ಮ ಜಿಲ್ಲೆಯ ರಕ್ಷಣಾಧಿಕಾರಿಗಳು, ಅಥವಾ ಮಹಿಳಾ ಹಕ್ಕುಗಳ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸೇವಾ ಕಾರ್ಯಕರ್ತರನ್ನು ಸಂಪರ್ಕಿಸಿ. ಇದಾದ ನಂತರ ನಿಮ್ಮ/ನಿಮ್ಮ ಮಗುವಿನ ವೈದ್ಯಕೀಯ ವರದಿಯನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮತ್ತು ನ್ಯಾಯಾಲಯಕ್ಕೆ ಕಳಿಸಲಾಗುತ್ತದೆ.
ವೈದ್ಯಕೀಯ ಸೌಕರ್ಯದ ಪಾತ್ರ:
- ಕೌಟುಂಬಿಕ ಹಿಂಸೆಗೆ ಬಲಿಯಾದ ವ್ಯಕ್ತಿಗೆ ವೈದ್ಯಕೀಯ ಸಹಾಯ ನೀಡುವುದು. ಈ ಸೇವೆಯನ್ನು ಯಾವ ವೈದ್ಯಕೀಯ ಸೌಕರ್ಯವೂ ಕೂಡ ನಿರಾಕರಿಸಲಾಗುವುದಿಲ್ಲ.
- ಡಿ.ಐ.ಆರ್.ಅನ್ನು ಇನ್ನೂ ದಾಖಲಿಸದ್ದಿದ್ದಲ್ಲಿ, ಅದನ್ನು ದಾಖಲಿಸಿ ಸಂಬಂಧಪಟ್ಟ ರಕ್ಷಣಾಧಿಕಾರಿಗಳಿಗೆ ಕಳಿಸುವುದು.
- ವೈದ್ಯಕೀಯ ವರದಿಯ ಉಚಿತ ಪ್ರತಿಯನ್ನು ಆ ಮಹಿಳೆ/ಮಗುವಿಗೆ ಕೊಡುವುದು
ಆಶ್ರಯ ಮನೆಗಳು:
ಆಶ್ರಯ ಮನೆಗಳನ್ನು ರಾಜ್ಯ ಸರ್ಕಾರಗಳು, ಮಹಿಳೆಯರ ಸುರಕ್ಷಿತ ವಾಸಕ್ಕಾಗಿ ನಿರ್ಮಿಸಿವೆ. ಬಲಾತ್ಕಾರ, ಲೈಂಗಿಕ ಅಪರಾಧಗಳು, ಕೌಟುಂಬಿಕ ಹಿಂಸೆ, ಇತ್ಯಾದಿಗಳಂತಹ ಯಾವುದೇ ರೀತಿಯ ದೌರ್ಜನ್ಯಕ್ಕೊಳಗಾದ ಮಹಿಳೆಯರು ಈ ಆಶ್ರಯ ಮನೆಗಳಲ್ಲಿ ಇರಬಹುದು. ನಿಮಗೆ ಕಿರುಕುಳ ಕೊಟ್ಟ ವ್ಯಕ್ತಿ ನಿಮ್ಮ ಮನೆಯಲ್ಲಿ ವಾಸವಾಗಿದ್ದರಿಂದ, ನೀವು ಹಿಂತಿರುಗಿ ನಿಮ್ಮ ಮನೆಗೆ ಹೋಗಲು ಬರಲಾರದಂತಹ ಪರಿಸ್ಥಿತಿಯಲ್ಲಿ ರಕ್ಷಣಾಧಿಕಾರಿಗಳು ಅಥವಾ ಸೇವಾ ಕಾರ್ಯಕರ್ತರು ನಿಮಗೆ ಆಶ್ರಯ ಮನೆಗೆ ಹೋಗಲು ಸಲಹೆ ನೀಡಬಹುದು. ಆಶ್ರಯ ಮನೆಯನ್ನು ಹುಡುಕಲು, ನಿಮ್ಮ ಜಿಲ್ಲೆಯ ರಕ್ಷಣಾಧಿಕಾರಿಗಳನ್ನು ಸಂಪರ್ಕಿಸಿ
ಅವರ ಬಳಿ ಜಿಲ್ಲಾ ಮಟ್ಟದ ಆಶ್ರಯ ಮನೆಗಳ ಪಟ್ಟಿ ಇರುತ್ತದೆ.
ನೀವು ಡಿ.ಐ.ಆರ್.ಅನ್ನು ದಾಖಲಿಸದಿದ್ದರೂ ಕೂಡ, ರಕ್ಷಣಾಧಿಕಾರಿಗಳ ಸಹಾಯದಿಂದ, ಯಾವುದೇ ಸರ್ಕಾರಿ ಆಶ್ರಯ ಮನೆಗೆ ನೀವು ಹೋಗಬಹುದು, ಮಾತು ಆ ಆಶ್ರಯ ಮನೆ, ನೀವು ಡಿ.ಐ.ಆರ್. ದಾಖಲಿಸಿಲ್ಲ ಎಂಬ ಓರ್ವ ಕಾರಣಕ್ಕೆ ನಿಮಗೆ ಆಶ್ರಯ ಕೊಡುವುದಿಲ್ಲ ಎನ್ನಲು ಬರುವುದಿಲ್ಲ. ಬೇಕೆಂದಲ್ಲಿ, ನಿಮಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯಿಂದ ನಿಮ್ಮ ಗುರುತನ್ನು ಆಶ್ರಯ ಮನೆ ಮುಚ್ಚಿಡಬಹುದು.