ಯಾವುದೇ ಮೋಟಾರು ವಾಹನವನ್ನು ಚಾಲನೆ ಮಾಡುವಾಗ ನೀವು ಮೊಬೈಲ್ ಫೋನ್ ಬಳಸುವಂತಿಲ್ಲ. ಹಾಗೆ ಮಾಡುವುದು ವಾಹನದ ಚಾಲಕ ಮತ್ತು ಸಾರ್ವಜನಿಕರಿಗೆ ಅಪಾಯಕಾರಿ. ಈ ಕೃತ್ಯವನ್ನು ಅಪಾಯಕಾರವಾಗಿ ವಾಹನ ಚಾಲನೆ ಎಂದು ಪರಿಗಣಿಸಿ, ನಿಮಗೆ ಈ ಕೆಳಕಂಡ ಶಿಕ್ಷೆಯನ್ನು ನೀಡಬಹುದು:
ಮೊದಲ ಬಾರಿ (ಮೊದಲ ಬಾರಿಯ ಅಪರಾಧ): ಆರು ತಿಂಗಳಿನಿಂದ ಒಂದು ವರ್ಷ ಅವಧಿಯವರೆಗಿನ ಜೈಲು ವಾಸ ಅಥವಾ ರೂ.1,000/- ದಿಂದ ರೂ 5,000/-ದ ವರೆಗೆ ಜುಲ್ಮಾನೆ ಅಥವಾ ಎರಡೂ ಶಿಕ್ಷೆಗಳು. ಜುಲ್ಮಾನೆಯ ಮೊತ್ತ ಪ್ರತಿ ರಾಜ್ಯದಲ್ಲಿ ಬೇರೆಯಾಗಿರಬಹುದು.
ಪುನರಾವರ್ತಿತ ಅಪರಾಧ: ಮೊದಲ ಬಾರಿ ಅಪರಾಧವನ್ನು ಎಸಗಿದ ಮೂರು ವರ್ಷಗಳ ಅವಧಿಯೊಳಗೆ ಪುನ: ಅದೇ ಅಪರಾಧವನ್ನು ಎಸಗಿದಲ್ಲಿ, ನಿಮಗೆ ಎರಡು ವರ್ಷಗಳವರೆಗಿನ ಕಾರಾವಾಸ ಅಥವಾ ರೂ.10,000 ದಂಡ ಅಥವಾ ಎರಡೂ ಶಿಕ್ಷೆಗಳನ್ನು ವಿಧಿಸಲಾಗುವುದು. ಜುಲ್ಮಾನೆಯ ಮೊತ್ತ ಪ್ರತಿ ರಾಜ್ಯದಲ್ಲಿ ಬೇರೆಯಾಗಿರಬಹುದು.
ಎರಡು ರಾಜ್ಯಗಳಲ್ಲಿ ಜುಲ್ಮಾನೆಯ ಮೊತ್ತ ಈ ಕೆಳಕಂಡಂತಿದೆ.
ರಾಜ್ಯ | ಅಪರಾಧದ ಪುನರಾವರ್ತನೆ | ಜುಲ್ಮಾನೆಯ ಮೊತ್ತ (ರೂ.ಗಳಲ್ಲಿ) |
ದೆಹಲಿ | ಮೊದಲನೇ ಅಪರಾಧ | 1,000-5,000 |
ಪುನರಾವರ್ತಿತ ಅಪರಾಧ | 10,000 | |
ಕರ್ನಾಟಕ | ಮೊದಲನೇ ಅಪರಾಧ | ದ್ವಿಚಕ್ರ/ತ್ರಿಚಕ್ರ ವಾಹನ: 1,500
ಲಘು ಮೋಟಾರು ವಾಹನ: 3,000 ಇತರೆ ವಾಹನಗಳು: 5,000 |
ಯಾವುದೇ ಪುನರಾವರ್ತಿತ
ಅಪರಾಧ |
10,000 |