ನಿಮ್ಮ ಮತಕ್ಕಾಗಿ ಯಾರಾದರೂ ಹಣ ನೀಡಿದರೆ, ಅವರು ಅಪರಾಧ ಮಾಡುತ್ತಾರೆ. ಇದು ‘ಲಂಚ’ದ ಕೃತ್ಯ. ನೀವು ಮತ ಚಲಾಯಿಸದ ಯಾರಿಗಾದರೂ ಮತ ಹಾಕುವ ಉದ್ದೇಶದಿಂದ ನೀವು ಯಾವುದೇ ಹಣ ಅಥವಾ ಉಡುಗೊರೆಗಳನ್ನು ಸ್ವೀಕರಿಸಿದರೆ, ನೀವು ಸಹ ಅಪರಾಧ ಮಾಡುತ್ತಿದ್ದೀರಿ.

ಚುನಾವಣೆಯ ಸಮಯದಲ್ಲಿ ನೀವು ಹೇಗೆ ವರದಿ ಮಾಡಬಹುದು ಮತ್ತು ದೂರು ನೀಡಬಹುದು?

ಕೊನೆಯ ಅಪ್ಡೇಟ್ Apr 1, 2024

ಚುನಾವಣೆಯ ಸಮಯದಲ್ಲಿ ವರದಿ ಮಾಡುವ ಮತ್ತು ದೂರು ನೀಡುವ ಆಯ್ಕೆಗಳಿವೆ. ಅಧಿಕಾರಿಗಳಿಂದ ಕ್ರಮಗಳ ಕೊರತೆಯಿಂದಾಗಿ ನಿಮಗೆ ಯಾವುದೇ ದೂರುಗಳಿದ್ದರೆ, ಚುನಾವಣಾ ಅಧಿಕಾರಿಗಳನ್ನು ಸಂಪರ್ಕಿಸಲು ಹಲವು ಮಾರ್ಗಗಳಿವೆ:

ಅಧಿಕಾರಿಯ ಬಳಿಗೆ ಹೋಗುವುದು
ನೀವು ಚುನಾವಣಾ ಪ್ರಾದೇಶಿಕ ಅಧಿಕಾರಿ, ಮುಖ್ಯ ಚುನಾವಣಾ ಅಧಿಕಾರಿ ಅಥವಾ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ಪತ್ರ ಕಳುಹಿಸಬಹುದು ಮತ್ತು ದೂರು ಸಲ್ಲಿಸಬಹುದು. ಕಚೇರಿಗಳ ಸ್ಥಳವನ್ನು ನೀವು ಇಲ್ಲಿ ಕಾಣಬಹುದು.

ಆನ್‌ಲೈನ್ ವೆಬ್‌ಸೈಟ್‌ಗಳು
ಚುನಾವಣಾ ಆಯೋಗದ ರಾಷ್ಟ್ರೀಯ ಕುಂದುಕೊರತೆ ಸೇವೆ ವೆಬ್ಸೈಟ್ ನಲ್ಲಿ ನೀವು ಎಲ್ಲಾ ದೂರುಗಳು, ಸಲಹೆಗಳನ್ನು ಸಲ್ಲಿಸಬಹುದು ಅಥವಾ ಮಾಹಿತಿಯನ್ನು ಪಡೆಯಬಹುದು.

ಈ- ಮೇಲ್
ನೀವು ಭಾರತೀಯ ನಾಗರಿಕರಾಗಿದ್ದರೆ, ನೀವು complaints@eci.gov.in ಗೆ ಇಮೇಲ್ ಕಳುಹಿಸಬಹುದು ಮತ್ತು ನೀವು ಓವರ್ಸೀಸ್ ಮತದಾರರಾಗಿದ್ದರೆ ನೀವು overseas.elector@eci.gov.in ಗೆ ಇಮೇಲ್ ಕಳುಹಿಸಬಹುದು. ಯಾವುದೇ ಸಲಹೆಗಳು ಅಥವಾ ದೂರುಗಳಿಗೆ ಸಂಬಂಧಿಸಿದಂತೆ ನೀವು ಈ-ಮೇಲ್ ಕಳುಹಿಸಬಹುದು ಮತ್ತು ಯಾವುದೇ ಮಾಹಿತಿಯನ್ನು ಕೋರಬಹುದು.

ಮೊಬೈಲ್ ಅಪ್ಲಿಕೇಶನ್‌ಗಳು
ನೀವು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರಾಗಿದ್ದರೆ, ಪ್ಲೇ ಸ್ಟೋರ್‌ಗೆ ಹೋಗಿ ಮತದಾರರ ಸಹಾಯವಾಣಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ. ಮೊಬೈಲ್ ಅಪ್ಲಿಕೇಶನ್ ಬಳಸಿ ನಿಮ್ಮ ದೂರನ್ನು ದಾಖಲಿಸಬಹುದು. ಅಪ್ಲಿಕೇಶನ್ ಬಗ್ಗೆ ಇನ್ನಷ್ಟು ತಿಳಿಯಲು ಸಿ-ವಿಜಿಲ್ ಕೈಪಿಡಿ ನೋಡಿ.

ಅಂಚೆಯ ಮೂಲಕ
ನೀವು ಚುನಾವಣಾ ಪ್ರಾದೇಶಿಕ ಅಧಿಕಾರಿ, ಮುಖ್ಯ ಚುನಾವಣಾ ಅಧಿಕಾರಿ ಅಥವಾ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ಪತ್ರ ಕಳುಹಿಸಬಹುದು ಮತ್ತು ದೂರು ಸಲ್ಲಿಸಬಹುದು. ನೀವು ಇಲ್ಲಿ ಕಚೇರಿಗಳನ್ನು ಕಾಣಬಹುದು.

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.