ಸೇವಾ ಮತದಾರರು ಮತ ಚಲಾಯಿಸಲು ಹೇಗೆ ನೋಂದಾಯಿಸಿಕೊಳ್ಳಬಹುದು?

ಕೊನೆಯ ಅಪ್ಡೇಟ್ Apr 1, 2024

ನಿಮ್ಮ ಮನೆ ಕ್ಷೇತ್ರದ, ಅಂದರೆ ನಿಮ್ಮ ಶಾಶ್ವತ ನಿವಾಸ ಇರುವ ಕಡೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಸೇವಾ ಮತದಾರರಾಗಿ ನೋಂದಾಯಿಸಿಕೊಳ್ಳಬಹುದು.

ಮಿಲಿಟರಿ ಕಂಟೋನ್ಮೆಂಟ್ ಪ್ರದೇಶದಂತೆ ನಿಮ್ಮ ಪೋಸ್ಟಿಂಗ್ ಆಗಿರುವ ಸ್ಥಳದಲ್ಲಿ ಸಾಮಾನ್ಯ ಮತದಾರರಾಗಿ ನೋಂದಾಯಿಸಲು ನಿಮಗೆ ಅವಕಾಶವಿದೆ, ಆದರೆ ಈ ಕೆಳಗಿನ ಷರತ್ತುಗಳಿಗೆ ಒಳಪಟ್ಟಿರುತ್ತದೆ:

  • ನಿಮ್ಮ ಕುಟುಂಬದೊಂದಿಗೆ ಸಾಕಷ್ಟು ಸಮಯದವರೆಗೆ ಪೋಸ್ಟ್ ಆಗಿರುವ ಸ್ಥಳದಲ್ಲಿ ನೀವು ವಾಸಿಸುತ್ತಿರಬೇಕು, ಅಥವಾ
  • ನೀವು ಪೋಸ್ಟ್ ಆಗಿರುವ ಸ್ಥಳದಲ್ಲಿ 3 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿ ಪೋಸ್ಟ್ ಆಗಿದ್ದೀರಿ.

ನೀವು ಒಂದು ಸಮಯದಲ್ಲಿ ಒಂದು ಸ್ಥಳದಲ್ಲಿ / ಕ್ಷೇತ್ರದಲ್ಲಿ ಮಾತ್ರ ನೋಂದಾಯಿಸಿಕೊಳ್ಳಬಹುದು. ಆದ್ದರಿಂದ, ನೀವು ಅರ್ಜಿಯನ್ನು ಸಲ್ಲಿಸುವಾಗ, ನೀವು ಬೇರೆ ಯಾವುದೇ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಿಲ್ಲ ಎಂದು ದೃಢೀಕರಿಸುವ ಘೋಷಣೆಯನ್ನು ಮಾಡಬೇಕಾಗುತ್ತದೆ.

ನೋಂದಾಯಿಸುವುದು ಹೇಗೆ
ನೀವು ಸೇವಾ ಮತದಾರರಾಗಿದ್ದರೆ ಅಥವಾ ಸೇವಾ ಮತದಾರರ ಹೆಂಡತಿಯಾಗಿದ್ದರೆ, ಮತ ಚಲಾಯಿಸಲು ನೋಂದಾಯಿಸಲು ನೀವು ಈ ಹಂತಗಳನ್ನು ಅನುಸರಿಸಬೇಕು:

ಹಂತ 1
ನೀವು ಸೇರಿರುವ ಸೇವೆಯ ವರ್ಗದ ಸಂಬಂಧಿತ ಅರ್ಜಿ ನಮೂನೆಯ 2 ಪ್ರತಿಗಳನ್ನು ಭರ್ತಿ ಮಾಡಿ:
ಸಶಸ್ತ್ರ ಪಡೆ (ಫಾರ್ಮ್ 2)
ಸಶಸ್ತ್ರ ಪೊಲೀಸ್ (ಫಾರ್ಮ್ 2 ಎ)
ರಾಯಭಾರ ಕಚೇರಿಗಳು ಮತ್ತು ನಿಯೋಗಗಳಲ್ಲಿ ಕೆಲಸ ಮಾಡುವ ರಾಜತಾಂತ್ರಿಕರು / ಅಧಿಕಾರಿಗಳು (ಫಾರ್ಮ್ 3)

ಹಂತ 2
ಅಗತ್ಯ ದಾಖಲೆಗಳೊಂದಿಗೆ ನೀವು ಅರ್ಜಿ ಸಲ್ಲಿಸುತ್ತಿರುವ ಸ್ಥಳ / ಕ್ಷೇತ್ರದ ರೆಕಾರ್ಡ್ ಆಫೀಸ್ ಅಥವಾ ನೋಡಲ್ ಅಧಿಕಾರಿಗೆ ಸಲ್ಲಿಸಿ.

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.