ವಿಚ್ಛೇದನ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ನಿಮ್ಮ ಸಂಗಾತಿಯಿಂದ ನೀವು ಅನ್ಯಾಯಕ್ಕೊಳಗಾಗಬೇಕಾಗಿಲ್ಲ. ನೀವು ನ್ಯಾಯಾಲಯವನ್ನು ಸಂಪರ್ಕಿಸುವ ಮೂಲಕ ಮತ್ತು ನಿಮ್ಮ ಸಂಗಾತಿಯೊಂದಿಗೆ ಅದನ್ನು ಇತ್ಯರ್ಥಪಡಿಸುವ ಮೂಲಕ ವಿಚ್ಛೇದನದ ಆಯ್ಕೆಗಳನ್ನು ಹೊಂದಿದ್ದೀರಿ.

ಮುಸ್ಲಿಂ ಮದುವೆಯನ್ನು ರದ್ದು ಮಾಡುವುದು

ಕೊನೆಯ ಅಪ್ಡೇಟ್ Oct 16, 2022

ಮುಸ್ಲಿಂ ಕಾನೂನಿನಡಿ, ಮದುವೆಯು ಮೌಖಿಕ ಅಥವಾ ಲಿಖಿತ ಒಪ್ಪಂದವಾಗಿದೆ. ಮದುವೆಯಾದ ಮುಸ್ಲಿಂ ದಂಪತಿಗಳು ಜೊತೆಗೆ ವಾಸಮಾಡುವುದು, ಮತ್ತು ಲೈಂಗಿಕ ಸಂಬಂಧವನ್ನು ಬೆಳೆಸುವುದು, ಎಂಬಂತಹ ಕೆಲವು ವೈವಾಹಿಕ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತದೆ. ವೈವಾಹಿಕ ಜವಾಬ್ದಾರಿಗಳಲ್ಲದೆ, ಈ ಕೆಳಕಂಡಂತಹ ಕಾನೂನಾತ್ಮಕ ಜವಾಬ್ದಾರಿಗಳನ್ನೂ ಸಹ ಅವರು ನೆರವೇರಿಸಬೇಕಾಗುತ್ತದೆ:

  • ಗಂಡ-ಹೆಂಡತಿಯರ ಆಸ್ತಿ ವಿಭಜನೆ (ಭೂಮಿ, ಅಪಾರ್ಟ್ಮೆಂಟ್, ಹೂಡಿಕೆ, ವಿಮೆ)
  • ಹೆಂಡತಿಗೆ ಜೀವನಾಂಶ ಕೊಡುವುದು
  • ಹೆಂಡತಿಯ ಡೊವರ್ / ಮೆಹೆರ್ ನ ಹಕ್ಕು

ಮುಸ್ಲಿಂ ಮದುವೆ ರದ್ದುಗೊಂಡಾಗ, ನಿಮ್ಮ ಗಂಡ/ಹೆಂಡತಿಯ ಜೊತೆಗಿನ ಒಪ್ಪಂದವೂ ಮುಗಿದ ಹಾಗೆ. ಆದ್ದರಿಂದ, ನಿಮ್ಮಿಬ್ಬರ ನಡುವಿನ ವೈವಾಹಿಕ ಜವಾಬ್ದಾರಿಗಳು ಮುಗಿಯುತ್ತವೆ, ಆದರೆ ಕಾನೂನಾತ್ಮಕ ಜವಾಬ್ದಾರಿಗಳು ಮುಗಿಯಲಿಕ್ಕಿಲ್ಲ.

ಮದುವೆಯು ಕೆಳಕಂಡಂತೆ ರದ್ದುಗೊಳ್ಳಬಹುದು:

ಸಂಗಾತಿಯ ನಿಧನ:

ನಿಮ್ಮ ಗಂಡ/ಹೆಂಡತಿಯ ನಿಧನವಾದಲ್ಲಿ ನಿಮ್ಮ ಮದುವೆ ರದ್ದುಗೊಳ್ಳುತ್ತದೆ. ಮುಸ್ಲಿಂ ಮದುವೆ ಒಂದು ಒಪ್ಪಂದವಾಗಿರುವುದರಿಂದ, ಸಂಗಾತಿಯ ನಿಧನದ ಅರ್ಥ, ಅವರು ಆ ಒಪ್ಪಂದದಿಂದ ಹೊರಗೆ ಬಂದಿದ್ದಾರೆ ಎಂದಾಗುತ್ತದೆ.

ವಿಚ್ಛೇದನ:

ಮುಸ್ಲಿಮರಲ್ಲಿ ವಿಚ್ಛೇದನವನ್ನು ನ್ಯಾಯಾಲಯಗಳ ಒಳಗೊಳ್ಳುವಿಕೆಯಿಲ್ಲದೆ ನೀಡಬಹುದು. ಆದರೆ, ವಿಚ್ಛೇದನದ ಸಮಯದಲ್ಲಿ ಏನಾದರೂ ವಿವಾದ ಹುಟ್ಟಿಕೊಂಡರೆ, ಬೇಕೆಂದರೆ ನ್ಯಾಯಾಲಯಗಳ ಮೊರೆ ಹೋಗಬಹುದು. ವಿಚ್ಛೇದನವನ್ನು ನೀವು ಅಥವಾ ನಿಮ್ಮ ಸಂಗಾತಿ ನೀಡಬಹುದು. ನಿಮ್ಮ ಮದುವೆಯು ಕೆಳಕಂಡ ರೀತಿಗಳಂತೆ ಅಂತ್ಯಗೊಳ್ಳಬಹುದು:

  • ಗಂಡ ಮದುವೆಯನ್ನು ಮುರಿಯಲು ಇಚ್ಛಿಸಿದಾಗ
  • ಹೆಂಡತಿ ಮದುವೆಯನ್ನು ಮುರಿಯಲು ಇಚ್ಛಿಸಿದಾಗ
  • ಗಂಡ ಹಾಗು ಹೆಂಡತಿ ಇಬ್ಬರೂ ಸೇರಿ ಮದುವೆಯನ್ನು ಮುರಿದಾಗ

ಬಹಳಷ್ಟು ಸಂದರ್ಭಗಳಲ್ಲಿ, ನ್ಯಾಯಾಲಯಕ್ಕೆ ಹೋಗದೆ, “ನನಗೆ ಇನ್ನು ಮದುವೆಯಲ್ಲಿರಲು ಇಷ್ಟವಿಲ್ಲ” ಎಂದು ಅದನ್ನು ಮುರಿಯಲು ಹೆಂಗಸರಿಗಿಂತ ಗಂಡಸರಿಗೆ ಹೆಚ್ಚುಆಯ್ಕೆಗಳಿವೆ. ಹೆಂಗಸರಿಗೆ ಹೀಗೆ ಮಾಡಲು ಕೇವಲ ಒಂದೇ ರೀತಿ ಇದೆ. ಆದಾಗ್ಯೂ, ಹೆಂಗಸರು ನ್ಯಾಯಾಲಯಕ್ಕೆ ಹೋದರೆ, ಅಲ್ಲಿ ಅವರಿಗೆ ಇನ್ನೂ ಹೆಚ್ಚು ಬಗೆಯ ಆಯ್ಕೆಗಳು ಸಿಗುತ್ತವೆ.

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.