ನೀವು ಉದ್ಯೋಗದಾತರಾಗಿದ್ದು, ಮಗುವಿನ ವಯಸ್ಸು ೧೪ರ ಮೇಲಿದೆಯೋ ಅಥವಾ ಕೆಳಗಿದೆಯೋ ಎಂಬುದು ನಿಮಗೆ ಖಾತರಿ ಇಲ್ಲದಿದ್ದರೆ, ಕೆಳಗಿನ ೩ ದಾಖಲೆಗಳ ಆಧಾರದ ಮೇಲೆ ವೈದ್ಯಕೀಯ ಅಧಿಕಾರಿಗಳು ಮಗುವಿನ ವಯಸ್ಸನ್ನು ನಿಗದಿ ಪಡಿಸುತ್ತಾರೆ:
- ಮಗು/ಕಿಶೋರನ ಆಧಾರ್ ಕಾರ್ಡ್
- ಶಾಲೆಯಿಂದ ಪಡೆದ ಜನ್ಮ ಪ್ರಮಾಣಪತ್ರ ಅಥವಾ ಪರೀಕ್ಷಾ ಮಂಡಳಿಯಿಂದ ಪಡೆದ ಪ್ರಮಾಣಪತ್ರ
- ಪಂಚಾಯತಿ, ಪುರಸಭೆ, ಅಥವಾ ನಗರ ಪಾಲಿಕೆ ನೀಡಿದ ಮಗುವಿನ ಜನ್ಮ ಪ್ರಮಾಣಪತ್ರ
ಈ ಮೂರು ದಾಖಲೆಗಳು ಇಲ್ಲದಿದ್ದಲ್ಲಿ, ವೈದ್ಯಕೀಯ ಅಧಿಕಾರಿಗಳು ಅಸ್ಥೀಭವನ ಪರೀಕ್ಷೆ ಅಥವಾ ಇನ್ಯಾವುದಾದರೂ ಇತ್ತೀಚಿನ ವಯಸ್ಸು ನಿರ್ಣಯಿಸುವ ಪರೀಕ್ಷೆಯನ್ನು ಮಾಡಿ ಮಗುವಿನ ವಯಸ್ಸನ್ನು ಕಂಡು ಹಿಡಿಯುತ್ತಾರೆ.
ತನಿಖಾಧಿಕಾರಿಗಳಿಗೆ ಮಗುವಿನ ವಯಸ್ಸನ್ನು ನಿರ್ಣಯ ಮಾಡುವುದಿದ್ದಲ್ಲಿ, ನಿಮ್ಮ ಹತ್ತಿರ. ಉದ್ಯೋಗದಾತರಾಗಿ, ಮಗುವಿನ ವಯಸ್ಸಿನ ಪ್ರಮಾಣಪತ್ರ ಇರಬೇಕಾಗುತ್ತದೆ. ನೀವು ಮಗುವಿನ ವಯಸ್ಸಿನ ಪ್ರಮಾಣಪತ್ರ ಪಡೆದಿಲ್ಲ ಎಂದು ತನಿಖಾಧಿಕಾರಿಗಳಿಗೆ ತಿಳಿದು ಬಂದಲ್ಲಿ, ಕೂಡಲೇ ವೈದ್ಯಕೀಯ ಅಧಿಕಾರಿಗಳಿಂದ ಪಡೆಯಲು ನಿಮಗೆ ಸೂಚಿಸಲಾಗುತ್ತದೆ.