೧೪ ವರ್ಷಗಳ ಕೆಳಗಿನ ಮಕ್ಕಳು ಮತ್ತು ಕಿಶೋರಾವಸ್ಥೆಯಲ್ಲಿರುವ ವ್ಯಕ್ತಿಗಳಿಗೆ ಕೌಟುಂಬಿಕ ಉದ್ಯಮದಲ್ಲಿ ಕೆಲಸ ಮಾಡುವ ಅನುಮತಿ ಇದೆ.
ಕೌಟುಂಬಿಕ ಉದ್ಯಮ:
ಕುಟುಂಬದ ಸದಸ್ಯರಿಂದ ನಡೆಸಲಾದ/ನಿರ್ವಹಿಸಲಾದ ಯಾವುದೇ ಕೆಲಸ/ಉದ್ಯಮಕ್ಕೆ ಕೌಟುಂಬಿಕ ಉದ್ಯಮ ಎನ್ನುತ್ತಾರೆ. ಈ ಉದ್ಯಮ ಕುಟುಂಬದ ನಿಕಟ ಸದಸ್ಯರಿಂದ (ಅಮ್ಮ, ಅಪ್ಪ, ಅಕ್ಕ, ಅಣ್ಣ), ಅಥವಾ ದೂರದ ಸದಸ್ಯರಿಂದ (ಅಪ್ಪನ ಅಕ್ಕ/ಅಣ್ಣ, ಅಮ್ಮನ ಅಕ್ಕ/ಅಣ್ಣ) ನಡೆಸುತ್ತಿರಬಹುದು, ಅಥವಾ ಅವರಿಗೆ ಸೇರಿರಬಹುದು.
ಕೆಲಸದ ತರಹಗಳು:
- ಅಪಾಯಕಾರಿ ಪದಾರ್ಥಗಳು ಅಥವಾ ಪ್ರಕ್ರಿಯೆಗಳು
- ಗಣಿಗಳು, ದಹಿಸಬಲ್ಲ ಪದಾರ್ಥಗಳು ಮತ್ತು ಸ್ಫೋಟಕ ವಸ್ತುಗಳು
ಮಕ್ಕಳಿಗೆ ಕೌಟುಂಬಿಕ ಉದ್ಯಮದಲ್ಲಿ ಕೆಲಸ ಮಾಡುವ ಹಕ್ಕಿದೆ, ಆದರೆ ಅವರ ಶಿಕ್ಷಣಕ್ಕೆ ಇದರಿಂದ ಕುತ್ತು ಬರಬಾರದು. ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು:
- ಮಕ್ಕಳಿಗೆ ಶಿಕ್ಷಣದ ಹಕ್ಕಿದೆ
- ಕೇವಲ ಶಾಲಾ ವೇಳೆಯ ನಂತರ ಅಥವಾ ರಾಜಾ ದಿನಗಳಲ್ಲಿ ಅವರನ್ನು ಕೆಲಸಕ್ಕೆ ಇಟ್ಟುಕೊಳ್ಳಬೇಕು
- ಕಾನೂನಿನಡಿಯಲ್ಲಿ ಮಕ್ಕಳನ್ನು ಶಾಲೆಗೆ ಕಳಿಸುವುದು ತಂದೆ-ತಾಯಿಯರ ಕರ್ತವ್ಯ.