ಧಾರ್ಮಿಕೇತರ ಕಾನೂನಿನಡಿ ಮಕ್ಕಳನ್ನು ದತ್ತು ಕೊಡಲು ಯೋಗ್ಯವೆಂದು ಘೋಷಿಸಿದಮೇಲೆ ಅವರ ಜೈವಿಕ ತಂದೆ-ತಾಯಿಯರ ಜೊತೆಗಿನ ಕಾನೂನಾತ್ಮಕ ಸಂಬಂಧ ಅಂತ್ಯಗೊಳ್ಳುತ್ತದೆ. ಮಕ್ಕಳ ಕಲ್ಯಾಣ ಸಮಿತಿಯು, ಕೆಳಗಿನ ವಿಚಾರಣೆ ನಡೆಸಿ, ಮಕ್ಕಳನ್ನು ದತ್ತು ಕೊಡಲು ಯೋಗ್ಯವೆಂದು ಘೋಷಿಸುತ್ತದೆ:
- ಪ್ರೊಬೇಷನರಿ ಅಧಿಕಾರಿ ಅಥವಾ ಸಾಮಾಜಿಕ ಕಾರ್ಯಕರ್ತರು ತಯಾರಿಸಿದ ವರದಿಯ ಆಧಾರದ ಮೇಲೆ
- ಮಗುವಿನ ಒಪ್ಪಿಗೆಯಿದ್ದಲ್ಲಿ (ಸಮಂಜಸ ವಯಸ್ಸನ್ನು ಹೊಂದಿದ್ದರೆ)
- ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಆರೈಕೆ ಸಂಸ್ಥೆ, ಅಥವಾ ವಿಶೇಷ ದತ್ತು ಸ್ವೀಕಾರ ಸಂಸ್ಥೆ ಕೊಟ್ಟಿರುವ ಹೇಳಿಕೆಯ ಆಧಾರದ ಮೇಲೆ
ಕೆಳಗಿನ ತರಹಗಳ ಮಕ್ಕಳನ್ನು ದತ್ತು ಕೊಡುವುದಕ್ಕೆ ಯೋಗ್ಯವೆಂದು ಘೋಷಿಸಬಹುದು:
- ಅನಾಥರು: ಜೈವಿಕ/ದತ್ತು ತಂದೆ-ತಾಯಿ, ಅಥವಾ ಪಾಲಕರು/ಪೋಷಕರು ಇಲ್ಲದ ಮಕ್ಕಳು; ಅಥವಾ ಅವರ ಪಾಲಕರು/ಪೋಷಕರು ಮಕ್ಕಳನ್ನು ಆರೈಕೆ ಮಾಡುವ ಇಚ್ಛೆ ಅಥವಾ ಸಾಮರ್ಥ್ಯ ಹೊಂದಿಲ್ಲದಿದ್ದಾಗ
- ತ್ಯಜಿಸಿದ ಮಕ್ಕಳು: ಜೈವಿಕ/ದತ್ತು ತಂದೆ-ತಾಯಿ, ಅಥವಾ ಪಾಲಕರು/ಪೋಷಕರಿಂದ ತ್ಯಜಿಸಲಾದ ಮಕ್ಕಳು
- ಬಿಟ್ಟುಕೊಟ್ಟ ಮಕ್ಕಳು: ತಂದೆ-ತಾಯಿ ಅಥವಾ ಪೋಷಕರಿಂದ ಬಿಟ್ಟುಕೊಟ್ಟ ಮಕ್ಕಳು
- ಬುದ್ಧಿಮಾಂದ್ಯ ತಂದೆ-ತಾಯಿಯರ ಮಕ್ಕಳು
- ಲೈಂಗಿಕ ದೌರ್ಜನ್ಯಕ್ಕೆ ಬಲಿಯಾದ ಮಹಿಳೆಗೆ ಬೇಡವಾದ ಮಗು