ನೀವು ಮತದಾನ ಕಾರ್ಡ್ ಇಲ್ಲದೆ ಮತ ಚಲಾಯಿಸಬಹುದು. ನಿಮ್ಮ ಮತ ಚಲಾಯಿಸಲು ನೀವು ಈ ಕೆಳಗಿನ ಯಾವುದೇ ದಾಖಲೆಗಳನ್ನು ಮತಗಟ್ಟೆಗೆ ಕೊಂಡೊಯ್ಯಬಹುದು:
- ಮತದಾರರ ಗುರುತಿನ ಚೀಟಿ / ಇಪಿಐಸಿ
- ಆಧಾರ್ ಕಾರ್ಡ್
- MNREGA ಜಾಬ್ ಕಾರ್ಡ್
- ಫೋಟೋದೊಂದಿಗೆ ಬ್ಯಾಂಕ್ / ಪೋಸ್ಟ್ ಆಫೀಸ್ ನೀಡಿದ ಪಾಸ್ಬುಕ್
- ಡ್ರೈವಿಂಗ್ ಲೈಸೆನ್ಸ್
- ಸೇವಾ ಗುರುತಿನ ಚೀಟಿಗಳು (ಕೇಂದ್ರ ಅಥವಾ ರಾಜ್ಯ ಸರ್ಕಾರ / ಪಿಎಸ್ಯುಗಳು / ಪಬ್ಲಿಕ್ ಲಿಮಿಟೆಡ್ ಕಂಪೆನಿ ನೌಕರರಿಗೆ ನೀಡಲಾಗುತ್ತದೆ)
- ಪ್ಯಾನ್ ಕಾರ್ಡ್
- ಪಾಸ್ಪೋರ್ಟ್
- ಪಿಂಚಣಿ ದಾಖಲೆ (ಫೋಟೋದೊಂದಿಗೆ)
- NPR ಎನ್.ಪಿ.ಆರ್. ಅಡಿಯಲ್ಲಿ ಆರ್.ಜಿ.ಐ. RGI ನೀಡಿದ ಸ್ಮಾರ್ಟ್ ಕಾರ್ಡ್
- ಕಾರ್ಮಿಕ ಸಚಿವಾಲಯದ ಯೋಜನೆಯಡಿ ನೀಡಲಾದ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್
- ಸಂಸದರು / ಶಾಸಕರಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿ