18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ಭಾರತೀಯ ಪ್ರಜೆಗೆ ರಾಷ್ಟ್ರೀಯ, ರಾಜ್ಯ, ಜಿಲ್ಲೆ ಮತ್ತು ಸ್ಥಳೀಯ ಸರ್ಕಾರಿ ಸಂಸ್ಥೆಗಳ ಚುನಾವಣೆಗಳಲ್ಲಿ ಭಾಗವಹಿಸುವ ಮತ್ತು ಮತ ಚಲಾಯಿಸುವ ಹಕ್ಕಿದೆ. ನಿಮ್ಮ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನೀವು ನಿಮ್ಮನ್ನು ಮತದಾರರಾಗಿ ನೋಂದಾಯಿಸಿಕೊಳ್ಳಬೇಕು. ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು:
- ನೀವು ಭಾರತದ ಪ್ರಜೆಯಾಗಿರಬೇಕು.
- ನೀವು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು.
- ನೀವು ಮಾನಸಿಕವಾಗಿ ಸ್ಥಿರವಾಗಿರಬೇಕು.
- ಈ ಕೆಳಗಿನ ಯಾವುದೇ ಅಪರಾಧಗಳಿಗೆ ನೀವು ನ್ಯಾಯಾಲಯದಿಂದ ಶಿಕ್ಷೆಗೊಳಗಾಗಿರಬಾರದು:
- ಭ್ರಷ್ಟಾಚಾರ
- ಬೇರೊಬ್ಬರ ಪರವಾಗಿ ಮತದಾನ ನೀಡುವುದು
- ಬೆದರಿಕೆ ಹಾಕುವ ಮೂಲಕ ಯಾರಾದರೂ ಮತದಾನ ಮಾಡುವುದನ್ನು ತಡೆಯಲು ಪ್ರಯತ್ನಿಸುವುದು
- ಜನರ ನಡುವೆ ದ್ವೇಷ ಮತ್ತು ಹಿಂಸೆಯನ್ನು ಪ್ರಚೋದಿಸುವುದು ಅಥವಾ ಉತ್ತೇಜಿಸುವುದು
- ಚುನಾವಣಾ ಪ್ರಕ್ರಿಯೆಗಳು / ದಾಖಲೆಗಳನ್ನು ತಡೆಯುವುದು ಅಥವಾ ನಾಶಪಡಿಸುವುದು