(ಮುನ್ಸೂಚನೆ: ಕೆಳಗೆ ಕೌಟುಂಬಿಕ ಹಿಂಸೆಯ ಬಗ್ಗೆ ಮಾಹಿತಿ ಇದ್ದು, ಇದು ಕೆಲ ಓದುಗರಲ್ಲಿ ಮಾನಸಿಕ ಗೊಂದಲ ಉಂಟು ಮಾಡಬಹುದು)
ಕೌಟುಂಬಿಕ ಹಿಂಸೆಯ ಮೇರೆಗೆ ನೀವು ಕಾನೂನು ಪರಿಹಾರ ಪಡೆಯಬೇಕಿದ್ದಲ್ಲಿ, ಕಿರುಕುಳ ಕೊಡುತ್ತಿರುವ ವ್ಯಕ್ತಿಯ ಜೊತೆ ನಿಮಗೆ ಕೌಟುಂಬಿಕ ಸಂಬಂಧವಿದೆ ಎಂದು ಸಾಬೀತುಪಡಿಸಬೇಕಾಗುತ್ತದೆ. ಕಿರುಕುಳ ಕೊಡುತ್ತಿರುವ ವ್ಯಕ್ತಿಯ ಜೊತೆ ನಿಮಗೆ ಕೆಳಗಿನ ಯಾವುದೇ ರೀತಿಯ ಸಂಬಂಧವಿದ್ದರೆ ಅದು “ಕೌಟುಂಬಿಕ ಸಂಬಂಧ” ಎಂದು ಪರಿಗಣಿಸಲಾಗುತ್ತದೆ:
- ರಕ್ತ ಸಂಬಂಧಿಕರು: ಉದಾಹರಣೆಗೆ, ನೆಂಟರು – ನಿಮ್ಮ ಮಾವ/ದೊಡ್ಡಪ್ಪ, ಅಕ್ಕ/ತಂಗಿ, ಅಪ್ಪ, ಇತ್ಯಾದಿ.
- ಮದುವೆಯಿಂದ ನೆಂಟರಾದವರು: ಉದಾಹರಣೆಗೆ, ನಿಮ್ಮ ಗಂಡ, ನಾದಿನಿ, ಮೈದುನ, ಇತ್ಯಾದಿ.
- ಮದುವೆಯಂತಹ ಸಂಬಂಧ. ಉದಾಹರಣೆಗೆ, ಲಿವ್-ಇನ್ ರಿಲೇಷನ್ಶಿಪ್
- ದತ್ತು ಸ್ವೀಕೃತಿಯಿಂದ ನೆಂಟರಾದವರು: ಉದಾಹರಣೆಗೆ, ಮಲ-ತಂದೆ, ಮಲ-ಅಣ್ಣ, ಇತ್ಯಾದಿ.
- ಒಟ್ಟಿಗೆ ಅವಿಭಕ್ತ ಕುಟುಂಬದಂತೆ ವಾಸ ಮಾಡುತ್ತಿರುವ ಕಾರಣದಿಂದ ಬೆಳೆದ ನೆಂಟಸ್ಥಿಕೆ: ಉದಾಹರಣೆಗೆ, ನೀವು ಅವಿಭಕ್ತ ಕುಟುಂಬದಲ್ಲಿ ವಾಸ ಮಾಡುತ್ತಿದ್ದಲ್ಲಿ, ಆ ಕುಟುಂಬದ ಎಲ್ಲ ಸದಸ್ಯರ (ನಿಮ್ಮ ಅಪ್ಪ, ಅಣ್ಣ/ಅತ್ತಿಗೆ, ಮಾವ/ದೊಡ್ಡಪ್ಪ, ಅಜ್ಜ/ಅಜ್ಜಿ, ಇತ್ಯಾದಿ) ವಿರುದ್ಧ ದೂರು ಸಲ್ಲಿಸಬಹುದು.
ನ್ಯಾಯಾಲಯಕ್ಕೆ ಹೋಗಲು, ನೀವು ಮತ್ತು ನಿಮಗೆ ಕಿರುಕುಳ ನೀಡುವವರು, ಒಂದೇ ಮನೆಯಲ್ಲಿ ವಾಸ ಮಾಡುತ್ತಿರುವಿರಿ, ಅಥವಾ ಹಿಂದೆ ವಾಸ ಮಾಡುತ್ತಿದ್ದೀರಿ, ಎಂದು ಸಾಬೀತುಪಡಿಸಬೇಕಾಗುತ್ತದೆ.