ದುಡ್ಡಿಗೋಸ್ಕರ ರಸ್ತೆ ಬದಿಗಳಲ್ಲಿ ಮಕ್ಕಳು ಪ್ರದರ್ಶನ ನೀಡುವುದು ಬಾಲ ಕಾರ್ಮಿಕ ಪದ್ಧತಿ ಎಂದು ಪರಿಗಣಿಸಲಾಗುತ್ತದೆ. ಇಂತಹ ನಿದರ್ಶನಗಳನ್ನು ನೀವು ನೋಡಿದಲ್ಲಿ ದಯವಿಟ್ಟು ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ನೀಡಿ.
ಅಪಾಯಕಾರಿ ಅಲ್ಲದ ಕೆಲಸದ ಸ್ಥಳಗಳಲ್ಲಿ ಕಿಶೋರರು ಕೆಲಸ ಮಾಡಬಹುದು. ಇಂತಹ ಅಪಾಯಕಾರಿ ಅಲ್ಲದ ಕೆಲಸದ ಸ್ಥಳಗಳನ್ನು ಸರ್ಕಾರ ಸೂಚಿಸುತ್ತದೆ. ಕಿಶೋರರು ಕೆಳಗಿನ ಕೆಲಸಗಳಲ್ಲಿ ಕೂಡ ತೊಡಗಬಹುದು:
- ಕೌಟುಂಬಿಕ ಉದ್ಯೋಗ: ಉದಾಹರಣೆಗೆ, ಆಭಾರಣಗಳನ್ನು ಮಾರಾಟ ಮಾಡುವ ನಿಮ್ಮ ಕೌಟುಂಬಿಕ ಉದ್ಯೋಗದಲ್ಲಿ ತೊಡಗುವುದು
- ಬಾಲ ಕಲಾವಿದರು: ಉದಾಹರಣೆಗೆ, ಚಲನಚಿತ್ರಗಳಲ್ಲಿ ಅಥವಾ ಜಾಹಿರಾತುಗಳಲ್ಲಿ ನಟಿಸುವುದು
೧೪ರಿಂದ ೧೮ರ ನಡುವಿನ ಕಿಶೋರರು ಕೆಳಗಿನ ಉದ್ಯೋಗಗಳಲ್ಲಿ ತೊಡಗುವಂತಿಲ್ಲ:
- ಗಣಿಗಳು ಅಥವಾ ದಹಿಸಬಲ್ಲ ವಸ್ತುಗಳು/ಸ್ಫೋಟಕಗಳನ್ನು ಉಪಯೋಗಿಸುವ ಸ್ಥಳಗಳು
- ಕಾರ್ಖಾನೆಗಳ ಕಾಯಿದೆ, ೧೯೪೮ರ ಅಡಿಯಲ್ಲಿ ನೀಡಲಾದ ಅಪಾಯಕಾರಿ ಪ್ರಕ್ರಿಯೆಗಳನ್ನು ಉಪಯೋಗಿಸುವ ಕೈಗಾರಿಕೋದ್ಯಮಗಳು. ಉದಾಹರಣೆಗೆ, ಕಲ್ಲಿದ್ದಲು, ವಿದ್ಯುತ್ಶಕ್ತಿಯ ಉತ್ಪಾದನೆ, ಕಾಗದ, ರಾಸಾಯನಿಕ ಗೊಬ್ಬರ, ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳು, ಕಲ್ನಾರಿನ, ಇತ್ಯಾದಿ.