ಜೀವನಾಂಶ ಎಂದರೆ ಆಹಾರ, ಬಟ್ಟೆ, ವಸತಿ ಮತ್ತು ಸೌಕರ್ಯಗಳಂತಹ ಮೂಲಭೂತ ಅಗತ್ಯಗಳನ್ನು 'ಅವಲಂಬಿತರಿಗೆ' ಒದಗಿಸುವುದು. ಇದು ಆಸ್ಪತ್ರೆಗಳು ಇತ್ಯಾದಿ ಅಗತ್ಯ ಸೇವೆಗಳ ಪಡೆಯುವಿಕೆಯನ್ನು ಸಹ ಒಳಗೊಂಡಿದೆ.
ತಂದೆತಾಯಿ ಮತ್ತು ಹಿರಿಯ ನಾಗರಿಕರ ಪಾಲನೆ
ಈ ವಿವರಣೆಯು ಹಿರಿಯ ನಾಗರಿಕರು ಅಥವಾ ಪೋಷಕರಿಗೆ ಅವರ ಮಕ್ಕಳಿಂದ ನ್ಯಾಯಾಲಯದ ಮೂಲಕ ನೀಡಲಾದ ಜೀವನಾಂಶವನ್ನು ಚರ್ಚಿಸುತ್ತದೆ. ಇದು ಪ್ರಾಥಮಿಕವಾಗಿ ತಂದೆ-ತಾಯಿ ಮತ್ತು ಹಿರಿಯ ನಾಗರಿಕರ ಪೋಷಣೆ ಮತ್ತು ಕಲ್ಯಾಣ ಕಾಯಿದೆ, ೨೦೦೭ ರಲ್ಲಿ ರೂಪಿಸಲಾದ ಕಾನೂನಿನ ಬಗ್ಗೆ ವಿವರಿಸುತ್ತದೆ.