ನಿಮ್ಮ ಬಾಡಿಗೆ ಒಪ್ಪಂದ/ಕರಾರನ್ನು ನೋಂದಾಯಿಸಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಬೇಕು. ಬಹುತೇಕ ಸಂದರ್ಭಗಳಲ್ಲಿ ನಿಮ್ಮ ಬ್ರೋಕರ್ ಈ ನಿಟ್ಟಿನಲ್ಲಿ ನಿಮಗೆ ಮಾರ್ಗದರ್ಶನ ಮಾಡುತ್ತಾರೆ.
1. ಒಪ್ಪಂದ ತಯಾರಾದ ನಂತರ, ಅದಕ್ಕೆ ಅನ್ವಯವಾಗುವ ಸೂಕ್ತ ಮುದ್ರಾಂಕ ಶುಲ್ಕವನ್ನು ಪಾವತಿ ಮಾಡಿ.
2. ಸ್ಥಳೀಯ ಉಪನೋಂದಣಾಧಿಕಾರಿಗಳನ್ನು ಭೇಟಿ ಮಾಡಲು ಸಮಯ ನಿಗದಿಪಡಿಸಿಕೊಳ್ಳಿ. ಬಹುತೇಕ ರಾಜ್ಯಗಳು ಆನ್ ಲೈನ್ ಮುಖಾಂತರ ಈ ಸೌಲಭ್ಯವನ್ನು ಒದಗಿಸುತ್ತಿವೆ.
3. ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಮಾಲೀಕರು/ಪರವಾನಗಿ ನೀಡುವವರು, ಬಾಡಿಗೆದಾರರು/ಪರವಾನಗಿ ಪಡೆಯುವವರು ಈ ಕೆಳಕಂಡ ದಾಖಲೆಗಳು ಮತ್ತು ಸಾಕ್ಷಿಗಳೊಂದಿಗೆ ಉಪನೋಂದಣಾಧಿಕಾರಿಗಳ ಕಛೇರಿಯಲ್ಲಿ ಹಾಜರಾಗತಕ್ಕದ್ದು.
ಸೂಕ್ತ ಮುದ್ರಾಂಕ ಶುಲ್ಕ ಪಾವತಿಸಿದ ಒಪ್ಪಂದ
ಬಾಡಿಗೆದಾರರ, ಮಾಲೀಕರ ಮತ್ತು ಸಾಕ್ಷಿಗಳ ಇತ್ತೀಚಿನ ಎರಡು ಪಾಸ್ ಪೋರ್ಟ್ ಭಾವಚಿತ್ರಗಳು
ಬಾಡಿಗೆದಾರರ, ಮಾಲೀಕರ ಮತ್ತು ಸಾಕ್ಷಿಗಳ ಗುರ್ತಿನ ದಾಖಲೆ (ಆಧಾರ್ ಕಾರ್ಡ್, ಚುನಾವಣಾ ಗುರ್ತಿನ ಚೀಟಿ, ಪಾಸ್ ಪೋರ್ಟ್, ಸರ್ಕಾರ ನೀಡಿರುವ ಗುರ್ತಿನ ಚೀಟಿ, ಗೆಜೆಟೆಡ್ ಅಧಿಕಾರಿಗಳು ದೃಢೀಕರಿಸಿರುವ ಗುರ್ತಿನ ದಾಖಲೆ)
4. ಕೊನೆಯದಾಗಿ, ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಈ ಮೇಲ್ಕಂಡ ದಾಖಲೆಗಳನ್ನು ಸಲ್ಲಿಸುವ ಸಂದರ್ಭದಲ್ಲಿ ಅವಶ್ಯಕ ನೋಂದಣಿ ಶುಲ್ಕವನ್ನು ಪಾವತಿಸಿರಿ.