ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ಜರುಗುವ ವಿವಾಹಗಳಿಗೆ ಯಾವುದೇ ನಿರ್ದಿಷ್ಟ ವಿಧಿ-ವಿಧಾನಗಳ ಅಗತ್ಯವಿಲ್ಲ. ಆದರೆ, ಇಲ್ಲಿ ಎರಡು ಸಾಧ್ಯತೆಗಳಿವೆ:
ನೀವು ಮತ್ತು ನಿಮ್ಮ ಜೊತೆಗಾರ/ಜೊತೆಗಾರ್ತಿ ಯಾವುದೇ ಧಾರ್ಮಿಕ ವಿಧಿವಿಧಾನಗಳನ್ನು ಇಚ್ಛಿಸದಿದ್ದಲ್ಲಿ: ಉಭಯ ಪಕ್ಷಗಾರರು ಯಾವುದೇ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸದೆ, ವಿವಾಹ ಅಧಿಕಾರಿಯ ಸಮ್ಮುಖದಲ್ಲಿ ತಮ್ಮ ವಿವಾಹವನ್ನು ನೋಂದಾಯಿಸಬಹುದು. ವಿವಾಹ ಹೇಗೆ ನೆರವೇರಬೇಕೆಂಬುದನ್ನು ತೀರ್ಮಾನಿಸುವ ಹಕ್ಕು ನಿಮಗಿದೆಯಾದರೂ, ನೀವು ಮತ್ತು ನಿಮ್ಮ ಜೊತೆಗಾರ/ಜೊತೆಗಾರ್ತಿ ವಿವಾಹ ಅಧಿಕಾರಿ ಮತ್ತು ಮೂವರು ಸಾಕ್ಷಿಗಳ
ಸಮ್ಮುಖದಲ್ಲಿ ಈ ಕೆಳಕಂಡ ವಾಕ್ಯಗಳನ್ನು ಪರಸ್ಪರ ಹೇಳತಕ್ಕದ್ದು. “ನಾನು (ನಿಮ್ಮ ಹೆಸರು) ನಿಮ್ಮನ್ನು (ನಿಮ್ಮ ಜೊತೆಗಾರ/ಜೊತೆಗಾರ್ತಿಯ ಹೆಸರು) ನನ್ನ ಶಾಸನಬದ್ಧ ಗಂಡ/ಹೆಂಡತಿ ಎಂದು ಸ್ವೀಕರಿಸುತ್ತೇನೆ”.
ನೀವು ಮತ್ತು ನಿಮ್ಮ ಜೊತೆಗಾರ/ಜೊತೆಗಾರ್ತಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿವಾಹ ನೆರವೇರಬೇಕೆಂದು ಇಚ್ಛಿಸಿದಲ್ಲಿ: ನೀವು ಯಾವುದೇ ಧಾರ್ಮಿಕ ವಿಧಿವಿಧಾನವನ್ನು (ನಿಮ್ಮ ವೈಯುಕ್ತಿಕ ಕಾನೂನಿನ ಪ್ರಕಾರ) ನೆರವೇರಿಸಬಹುದು ಮತ್ತು ನಂತರ ನಿಮ್ಮ ವಿವಾಹವನ್ನು ವಿಶೇಷ ವಿವಾಹ ಕಾಯ್ದೆ ಅಡಿ ನೋಂದಾಯಿಸಬಹುದು. ಆದರೆ ಹೀಗೆ ಮಾಡಲು ನೀವು ಮತ್ತು ನಿಮ್ಮ
ಜೊತೆಗಾರ/ಜೊತೆಗಾರ್ತಿ ಮೇಲ್ಕಂಡಂತೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ ದಿನಾಂಕದಿಂದ ನಿಮ್ಮ ವಿವಾಹವನ್ನು ನೋಂದಾಯಿಸುವ ದಿನಾಂಕವರೆಗೆ ಪತಿ-ಪತ್ನಿಯರಂತೆ ವಾಸಮಾಡುತ್ತಿರಬೇಕು.