ಸಂಧಾನದ ಉದ್ದೇಶ
ಮಾತುಕತೆ ಮಾಡುವಾಗ ನೀವು ಯಾವ ವ್ಯಕ್ತಿಯೊಡನೆ ಒಪ್ಪಂದ ಮಾಡಿಕೊಳ್ಳಲು ಉದ್ದೇಶಿಸಿರುವಿರೋ ಆ ವ್ಯಕ್ತಿಯ ಗುರ್ತು- ವ್ಯಕ್ತಿತ್ವ ವನ್ನು ಪತ್ತೆ ಹಚ್ಚಲು ಪ್ರಯತ್ನಿಸಿರಿ. ನಿಮ್ಮ ಹಕ್ಕುಗಳು ಸಾಧಿಸಲು ಮತ್ತು ಒಪ್ಪಂದ ಕುರಿತು ಸಂಧಾನ-ಮಾತುಕತೆ ಮಾಡಲು ಈ ಅಂಶ ಬಹಳ ಮುಖ್ಯ. ಈ ಮಾಹಿತಿ ನಿಮ್ಮ ಬಳಿ ಇದ್ದಲ್ಲಿ – ಒಪ್ಪಂದ ಸಹಿ ಮಾಡುವ ಮುನ್ನವೇ ಯಾವುದೇ ರೀತಿಯ ವಂಚನೆ, ಮೋಸ ಅಥವಾ ಒಪ್ಪಂದ/ಹಣ ಸಂದಾಯ ಕುರಿತು ಯಾವುದೇ ವಿವಾದ ಉದ್ಭವಿಸಿದಾಗ ನೀವು ಸುಲಭವಾಗಿ ಪೋಲೀಸ್/ನ್ಯಾಯಾಲಯದ ನೆರವನ್ನು ಪಡೆಯಬಹುದು.
ಒಪ್ಪಂದ ಕುರಿತು ಮಾತುಕತೆ ಮಾಡುವಾಗ ನಿಮ್ಮ ಷರತ್ತುಗಳನ್ನು ಸ್ಪಷ್ಟವಾಗಿ ತಿಳಿಸುವುದು ಅತಿಮುಖ್ಯ ಮತ್ತು ಅವುಗಳನ್ನು ತಪ್ಪದೇ ಬರವಣಿಗೆ ರೂಪದಲ್ಲಿ ಹೊಂದಿರತಕ್ಕದ್ದು. ಒಂದು ಬಾರಿ ಬಾಡಿಗೆ ಒಪ್ಪಂದವನ್ನು ಸಹಿ ಮಾಡಿದ ತರುವಾಯ:
ಒಪ್ಪಂದವನ್ನು ಅಲ್ಲಗೆಳೆಯುವುದು ಸುಲಭಸಾಧ್ಯವಲ್ಲ. ಆದುದರಿಂದ ನಿಮ್ಮ ಒಪ್ಪಂದ ಕುರಿತು ಕೂಲಂಕಷವಾಗಿ ಮಾತುಕತೆಯಾಡಿ, ಸಹಿ ಮಾಡುವ ಮುನ್ನ ಒಪ್ಪಂದವನ್ನು ಸ್ಪಷ್ಟವಾಗಿ ಅರ್ಥೈಸಿಕೊಳ್ಳಿರಿ.
ನಿಮ್ಮ ಮಾಲೀಕರು/ಬಾಡಿಗೆದಾರರು ಒಪ್ಪಂದದಲ್ಲಿರುವುದನ್ನು ಹೊರತುಪಡಿಸಿ ಹೆಚ್ಚುವರಿಯಾದುದನ್ನು ತೆರುವಂತೆ/ಒದಗಿಸುವಂತೆ ಕೋರಿದಲ್ಲಿ, ಆ ಬೇಡಿಕೆಯನ್ನು ನೀವು ಸಾರಾಸಗಟಾಗಿ ನಿರಾಕರಿಸಬಹುದಾಗಿದೆ.