ಪರವಾನಗಿ ಪಡೆದ ಧರ್ಮ ಸಚಿವರು ನೆರವೇರಿಸುವ ಮದುವೆಯ ಕಾರ್ಯವಿಧಾನವೇನು?

ಕೊನೆಯ ಅಪ್ಡೇಟ್ Dec 6, 2022

ಪರವಾನಗಿ ಪಡೆದ ಧರ್ಮ ಸಚಿವರು ನೆರವೇರಿಸುವ ಕ್ರಿಶ್ಚಿಯನ್ ವಿವಾಹವನ್ನು ಕೆಳಗಿನ ನಾಲ್ಕು ಹಂತಗಳಲ್ಲಿ ವಿಭಜಿಸಲಾಗಿದೆ:

ಹಂತ ೧: ಪೂರ್ವಭಾವಿ ಸೂಚನೆಯನ್ನು ಹೊರಡಿಸುವುದು:

ಪರವಾನಗಿ ಪಡೆದ ಧರ್ಮ ಸಚಿವರು ವಿವಾಹವನ್ನು ನೆರವೇರಿಸಬೇಕು ಎಂದಲ್ಲಿ, ದಂಪತಿಗಳಲ್ಲಿ ಒಬ್ಬರು ಖುದ್ದಾಗಿ ಆ ಸಚಿವರಿಗೆ ವಿವಾಹ ಉದ್ದೇಶದ ಸೂಚನೆ ನೀಡಬೇಕು. ಆ ಸೂಚನೆಯಲ್ಲಿ ಕೆಳಕಂಡ ಮಾಹಿತಿ ಇರಬೇಕು:

  • ದಂಪತಿಗಳಿಬ್ಬರ ಹೆಸರು, ಅಡ್ಡ ಹೆಸರು, ವೃತ್ತಿ, ಅಥವಾ ಆರ್ಥಿಕ ಸ್ಥಿತಿ
  • ಇಬ್ಬರ ಪ್ರಸ್ತುತ ವಿಳಾಸ
  • ಈ ವಿಳಾಸದಲ್ಲಿ ವಾಸ ಮಾಡುತ್ತಿರುವ ಅವಧಿ. ಒಂದು ತಿಂಗಳಿಗಿಂತ ಹೆಚ್ಚು ಈ ವಿಳಾಸದಲ್ಲಿ ವಾಸಿಸಿದ್ದರೆ, ಅದನ್ನು ಸೂಚನೆಯಲ್ಲಿ ತಿಳಿಸಬೇಕಾಗುತ್ತದೆ.
  • ಮದುವೆಯ ಸ್ಥಳ – ಚರ್ಚು ಅಥವಾ ವೈಯಕ್ತಿಕ ನಿವಾಸ

 

Notice Marriage Registrar

ಇದಾದಮೇಲೆ ಧರ್ಮ ಸಚಿವರು ಈ ಸೂಚನೆಯನ್ನು ಚರ್ಚಿನ ಆವರಣದ, ಎಲ್ಲರಿಗೂ ಕಾಣುವಂತಹ/ಸಾರ್ವಜನಿಕ ಭಾಗದಲ್ಲಿ ಲಗತ್ತಿಸುತ್ತಾರೆ. ಒಂದು ವೇಳೆ ಮದುವೆಯು ವೈಯಕ್ತಿಕ ನಿವಾಸದಲ್ಲಿ ಜರುಗಲಿದ್ದರೆ, ಸಂಬಂಧಪಟ್ಟ ಜಿಲ್ಲಾ ವಿವಾಹ ಕುಲಪತಿಗಳಿಗೆ ಆ ಸೂಚನೆಯನ್ನು ಕಳುಹಿಸಲಾಗುತ್ತದೆ, ಹಾಗು ವಿವಾಹ ಕುಲಪತಿಗಳ ಕಚೇರಿಯ ಆವರಣದಲ್ಲಿ, ಎಲ್ಲರಿಗೂ ಕಾಣುವಂತಹ ಸಾರ್ವಜನಿಕ ಸ್ಥಳದಲ್ಲಿ ಆ ಸೂಚನೆಯನ್ನು ಪ್ರದರ್ಶಿಸಲಾಗುತ್ತದೆ. ಒಂದು ವೇಳೆ ಧರ್ಮ ಸಚಿವರು ಮದುವೆಯನ್ನು ನೆರವೇರಿಸಲು ನಿರಾಕರಿಸಿದರೆ, ಬೇರೋರ್ವ ಸಚಿವರಿಗೆ ವಿವಾಹ ಸೂಚನೆಯನ್ನು ಕಳಿಸಲಾಗುತ್ತದೆ, ಅಥವಾ, ವಿವಾಹ ಆಗಬಯಸುವ ದಂಪತಿಗಳಿಗೆ ಮರಳಿ ಕಳಿಸಲಾಗುತ್ತದೆ.

ಹಂತ ೨: ಸೂಚನಾ ರಶೀದಿ ಪಡೆದ ಪ್ರಮಾಣಪತ್ರ ನೀಡುವುದು:

ವಿವಾಹ ಸೂಚನೆ ಕೊಟ್ಟು ಕನಿಷ್ಟ ೪ ದಿನಗಳ ಬಳಿಕ, ಮದುವೆಯಾಗ ಬಯಸುವ ದಂಪತಿಗಳಲ್ಲಿ ಒಬ್ಬರು, ವಿವಾಹದಲ್ಲಿ ಯಾವ ರೀತಿಯ ಕಾನೂನಾತ್ಮಕ ಸಮಸ್ಯೆಗಳೂ ಇಲ್ಲವೆಂದು, ಧರ್ಮ ಸಚಿವರಲ್ಲಿ ಧೃಢೀಕರಣ ಪತ್ರ ಸಲ್ಲಿಸಬೇಕು. ದಂಪತಿಗಳಲ್ಲಿ ಒಬ್ಬರು ಅಲ್ಪವಯಸ್ಕರಾಗಿದ್ದರೆ, ಅಗತ್ಯವಾದ ಕ್ರಮಗಳನ್ನು ತೆಗೆದುಕೊಂಡಾಗಿದೆ ಎಂದು ಸಚಿವರಲ್ಲಿ ಧೃಢೀಕರಣ ಪತ್ರ ಸಲ್ಲಿಸಬೇಕು.

ಹಂತ ೩: ಮದುವೆಯ ಆಚರಣೆ:

ಇಂತಹ ಧೃಢೀಕರಣ ಪತ್ರಗಳನ್ನು ಸಲ್ಲಿಸಿದ ಬಳಿಕ, ಧರ್ಮ ಸಚಿವರು ಒಂದು ಪ್ರಮಾಣ ಪತ್ರವನ್ನು ನೀಡುತ್ತಾರೆ. ಇದಾದ ಎರಡು ತಿಂಗಳೊಳಗೆ ಸಚಿವರು ದಂಪತಿಗಳ ಮದುವೆ ನೆರವೇರಿಸಬೇಕು. ಧರ್ಮ ಸಚಿವರಲ್ಲದೆ, ಇಬ್ಬರು ಸಾಕ್ಷಿದಾರರು ಮಾಡುವೆ ಸಮಾರಂಭದಲ್ಲಿ ಪಾಲ್ಗೊಳ್ಳಬೇಕು. ಒಂದು ವೇಳೆ ಪ್ರಮಾಣ ಪತ್ರ ಪಡೆದು ಎರಡು ತಿಂಗಳುಗಳಾಗಿಹೋಗಿದ್ದರೆ, ಈ ಸಂಪೂರ್ಣ ಪ್ರಕ್ರಿಯೆ ಮೊದಲಿನಿಂದ ಪುನಃ ಆರಂಭಿಸಬೇಕಾಗುತ್ತದೆ.

ಹಂತ ೪: ಮದುವೆಯ ನೋಂದಣಿ:

ಮದುವೆ ನಡೆದ ಮೇಲೆ ಅದರ ವಿವರಗಳನ್ನು ಧರ್ಮ ಸಚಿವರು ದಾಖಲಾ ಪುಸ್ತಕದಲ್ಲಿ ನಮೂದಿಸಬೇಕಾಗುತ್ತದೆ. ಈ ದಾಖಲೆಗೆ ಆ ಸಚಿವರು, ನವ ದಂಪತಿಗಳು, ಹಾಗು ಮದುವೆ ಸಮಾರಂಭದಲ್ಲಿ ಹಾಜರಿರುವ ಇಬ್ಬರು ಸಾಕ್ಷಿದಾರರು ಸಹಿ ಹಾಕಬೇಕು.

ವಿವಾಹ ದಾಖಲಾ ಪುಸ್ತಕದಲ್ಲಿನ ಈ ನೋಂದಣಿಯ ಪ್ರಮಾಣೀಕೃತ ಪ್ರತಿಯ ಮೇಲೆ, ಯಾವ ಅಧಿಕಾರಿಗಳ ಅಧೀನದಲ್ಲಿ ಈ ದಾಖಲಾ ಪುಸ್ತಕ ಇರುತ್ತದೆಯೋ, ಅವರ ಸಹಿ ಬೇಕಾಗುತ್ತದೆ. ಆ ಸಹಿಯಾದ ಬಳಿಕ, ದಂಪತಿಗಳು ಕಾನೂನುಬದ್ಧವಾಗಿ ಮದುವೆಯಾಗಿದ್ದಾರೆ ಎಂಬ ಪುರಾವೆಯಾಗುತ್ತದೆ ಈ ಪ್ರಮಾಣೀಕೃತ ಪತ್ರ.

 

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.