ದತ್ತು ಸ್ವೀಕೃತಿಯ ಪ್ರಕ್ರಿಯೆಯಲ್ಲಿ ನ್ಯಾಯಾಲಯಗಳು ಮಹತ್ತರ ಪಾತ್ರ ನಿಭಾಯಿಸುತ್ತವೆ. ಈ ಪಾತ್ರಗಳು ಕೆಳಗಿನಂತಿವೆ:
ದತ್ತು ಸ್ವೀಕಾರದ ಆದೇಶ (ಧಾರ್ಮಿಕೇತರ ಕಾನೂನು):
ಧಾರ್ಮಿಕೇತರ ದತ್ತು ಸ್ವೀಕಾರ ಕಾನೂನಿನಡಿಯಲ್ಲಿ ವಿಶೇಷ ದತ್ತು ಸ್ವೀಕಾರ ಸಂಸ್ಥೆಗಳು ನ್ಯಾಯಾಲಯಕ್ಕೆ ಸಂಬಂಧಪಟ್ಟ ದಾಖಲೆಗಳ ಜೊತೆ ದತ್ತು ಸ್ವೀಕಾರದ ಅರ್ಜಿ ಸಲ್ಲಿಸುತ್ತವೆ. ನ್ಯಾಯಾಲಯವು ದತ್ತು ಸ್ವೀಕಾರದ ಆದೇಶ ನೀಡಬೇಕೋ ಬೇಡವೋ ಎಂದು ಈ ದಾಖಲೆಗಳನ್ನು ಪರಿಶೀಲಿಸಿ ನಿರ್ಧರಿಸುತ್ತದೆ. ಇಂತಹ ಅರ್ಜಿ ಕೆಳಗಿನ ದಾಖಲೆಗಳನ್ನು ಹೊಂದಿರುತ್ತದೆ:
- ವಿಶೇಷ ದತ್ತು ಸ್ವೀಕಾರ ಸಂಸ್ಥೆ ಮತ್ತು ಸಹ ಅರ್ಜಿದಾರರ (ಉದಾಹರಣೆಗೆ, ಮಕ್ಕಳ ಆರೈಕೆ ಸಂಸ್ಥೆಗಳು) ವಿವರಗಳು
- ಭಾವೀ ದತ್ತು ತಂದೆ-ತಾಯಿಯರ ವಿವರಗಳು – ಹೆಸರು, ಮಗುವಿನ ದತ್ತು ಸ್ವೀಕಾರ ಸಂಪನ್ಮೂಲ ವಿವರಗಳು, ಮತ್ತು ಮಾರ್ಗದರ್ಶನ ವ್ಯವಸ್ಥೆ ನೋಂದಣಿ ಸಂಖ್ಯೆ.
- ದತ್ತು ಪಡೆಯಬೇಕಾದ ಮಗುವಿನ ವಿವರಗಳು
- ಮಗು ಕಾನೂನುಬದ್ಧವಾಗಿ ದತ್ತಕ್ಕೆ ಕೊಡಲು ಯೋಗ್ಯವಿದೆ ಎಂದು ಪ್ರಮಾಣೀಕರಿಸಲಾದ ಪುರಾವೆ
- ವಿಶೇಷ ದತ್ತು ಸ್ವೀಕಾರ ಸಂಸ್ಥೆಗಳು ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಾಮಾಜಿಕ ಕಾರ್ಯಕರ್ತರಿಂದ ಮನೆ ಭೇಟಿ ನೀಡುವುದಕ್ಕೆ ಅನುಮತಿ ನೀಡುವಂತೆ ಭಾವೀ ದತ್ತು ತಂದೆ-ತಾಯಿಯರು ಸಹಿ ಮಾಡಿದ ದತ್ತು-ಪೂರ್ವ ಅನಾಥಾಲಯದ ಶಪಥಪತ್ರ
- ದತ್ತು ಸ್ವೀಕೃತಿ ಸಮಿತಿಯ ನಿರ್ಣಯದ ಪ್ರತಿ
ಈ ದತ್ತು ಸ್ವೀಕೃತಿ ಆದೇಶವನ್ನು ಹೊರಡಿಸಿ ನ್ಯಾಯಾಲಯವು ತಂದೆ-ತಾಯಿಯರಿಗೆ ಮಗುವಿನ ದತ್ತು ತಂದೆ-ತಾಯಂದಿರಾಗಲು ಅನುಮತಿ ನೀಡುತ್ತದೆ. ಇಂತಹ ಆದೇಶವನ್ನು ಹೊರಡಿಸುವ ಮೊದಲು ನ್ಯಾಯಾಲಯವು ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡಿರುತ್ತದೆ:
- ದತ್ತು ಸ್ವೀಕೃತಿಯು ಮಗುವಿನ ಕಲ್ಯಾಣಕ್ಕೆ ಆಗುತ್ತಿದೆ
- ಮಗುವಿನ ವಯಸ್ಸು ಮತ್ತು ಸಂದರ್ಭವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯಾನುಸಾರ, ದತ್ತು ಸ್ವೀಕೃತಿಗೆ ಮಗುವಿನ ಒಪ್ಪಿಗೆ ಇದೆಯೋ ಇಲ್ಲವೋ
- ದತ್ತು ತಂದೆ-ತಾಯಿಯರು ಮಗುವನ್ನು ದತ್ತಕ್ಕೆ ತೆಗದುಕೊಳ್ಳಲು ಯಾವುದೇ ಹಣದ ಪಾವತಿ ಅಥವಾ ಬಹುಮಾನವನ್ನು ಸ್ವೀಕರಿಸಿಲ್ಲ
- ನ್ಯಾಯಾಲಯದಲ್ಲಿ ದತ್ತು ಸ್ವೀಕೃತಿಯ ಪ್ರಕ್ರಿಯೆ ಖಾಸಗಿಯಾಗಿ ನಡೆಯಬೇಕು
ದತ್ತು ಸ್ವೀಕಾರ ಮಾಡಲು ಅನುಮತಿ (ಹಿಂದೂ ಕಾನೂನು):
ಹಿಂದೂ ದತ್ತು ಸ್ವೀಕೃತಿ ಕಾನೂನಿನ ಪ್ರಕಾರ, ಪಾಲಕರು/ಪೋಷಕರಿಗೆ ಕೆಳಗಿನ ಸಂದರ್ಭಗಳಲ್ಲಿ, ಮಗುವನ್ನು ದತ್ತಕ್ಕೆ ತೆಗೆದುಕೊಳ್ಳಲು/ಕೊಡಲು ನ್ಯಾಯಾಲಯದ ಅನುಮತಿ ಬೇಕಾಗುತ್ತದೆ:
- ಮಗುವಿನ ತಂದೆ ಮತ್ತು ತಾಯಿ ಇಬ್ಬರೂ ಸತ್ತುಹೋಗಿದ್ದರೆ
- ಮಗುವಿನ ತಂದೆ ಮತ್ತು ತಾಯಿ ಇಬ್ಬರೂ ಸಂಪೂರ್ಣವಾಗಿ ಲೋಕವನ್ನು ತ್ಯಜಿಸಿದ್ದರೆ
- ಮಗುವನ್ನು ತಂದೆ ಮತ್ತು ತಾಯಿ ಇಬ್ಬರೂ ತ್ಯಜಿಸಿದ್ದಾಗ
- ಸಂಬಂಧಪಟ್ಟ ನ್ಯಾಯಾಲಯವು ತಂದೆ ಮತ್ತು ತಾಯಿ ಇಬ್ಬರನ್ನೂ ಮಾನಸಿಕವಾಗಿ ಅಸ್ವಸ್ಥರೆಂದು ಘೋಷಿಸಿದ್ದರೆ ೫. ಮಗುವಿನ ತಂದೆ-ತಾಯಿ ಯಾರು ಎಂದು ಗೊತ್ತಿಲ್ಲದಿದ್ದಾಗ
ಮೇಲ್ಮನವಿ (ಧಾರ್ಮಿಕೇತರ ಮತ್ತು ಹಿಂದೂ ಕಾನೂನು):
ಧಾರ್ಮಿಕೇತರ ದತ್ತು ಸ್ವೀಕೃತಿ ಕಾನೂನಿನಡಿಯಲ್ಲಿ, ನೀವು ಮಗುವನ್ನು ದತ್ತು ತೆಗೆದುಕೊಳ್ಳುವಾಗ, ಸಂಬಂಧಪಟ್ಟ ಅಧಿಕಾರಿಗಳ ಆದೇಶಗಳಿಂದ ಅಸಂತೋಷಗೊಂಡಿದ್ದರೆ, ಅಥವಾ ನಿಮ್ಮ ದತ್ತು ಸ್ವೀಕೃತಿ ಅರ್ಜಿ ತಿರಸ್ಕಾರಗೊಂಡಿದ್ದರೆ, ಸಂಬಂಧಿಸಿದ ಆದೇಶ ಹೊರಡಿಸಿದ ೩೦ ದಿನಗಳ ಒಳಗೆ ಮಕ್ಕಳ ನ್ಯಾಯಾಲಯಕ್ಕೆ ನೀವು ಮೇಲ್ಮನವಿ ಮಾಡಬಹುದು. ನಿಗದಿಪಡಿಸಲಾದ ೩೦ ದಿನಗಳ ನಂತರವೂ, ನಿಮಗೆ ಮೇಲ್ಮನವಿ ಮಾಡಲಾಗದ ಹಾಗೆ ಸಾಕಾಷ್ಟು ಕಾರಣಗಳಿದ್ದವು ಎಂದು ನ್ಯಾಯಾಲಯ ನಂಬಿದರೆ, ನಿಮ್ಮ ಮೇಲ್ಮನವಿಯನ್ನು ನ್ಯಾಯಾಲಯವು ಸ್ವೀಕರಿಸಬಹುದು. ನ್ಯಾಯಾಲಯದ ಆದೇಶದಿಂದ ನೀವು ಅಸಂತುಷ್ಟಗೊಂಡಲ್ಲಿ ಸಂಬಂಧಿಸಿದ ರಾಜ್ಯದ ಉಚ್ಚ ನ್ಯಾಯಾಲಯದಲ್ಲಿ ನೀವು ಮನವಿ ಸಲ್ಲಿಸಬಹುದು.