ನೀವು ಮಗುವಿನ ಮಲ ತಂದೆ/ತಾಯಿಯಾಗಿ ದತ್ತು ಪಡೆಯಬೇಕಾದಲ್ಲಿ ಕೆಳಗಿನ ಪ್ರಕ್ರಿಯೆಯನ್ನು ಪಾಲಿಸಿ:
ಹಂತ ೧: ನೀವು ಮತ್ತು ನಿಮ್ಮ ಸಂಗಾತಿ (ಮಗುವಿನ ಜೈವಿಕ ತಂದೆ/ತಾಯಿ) ಕೇಂದ್ರೀಯ ದತ್ತು ಸ್ವೀಕೃತಿ ಸಂಪನ್ಮೂಲ ಅಧಿಕಾರದ ಜಾಲತಾಣದಲ್ಲಿ ನಿಮ್ಮ ಹೆಸರುಗಳನ್ನೂ ನೋಂದಾಯಿಸಬೇಕು. ಹೀಗೆ ಮಾಡಿದಾಗ ಆ ಜಾಲತಾಣ ನಿಮ್ಮನ್ನು “ಮಕ್ಕಳ ದತ್ತು ಸ್ವೀಕೃತಿ ಸಂಪನ್ಮೂಲ ಮಾಹಿತಿ ಮತ್ತು ಮಾರ್ಗದರ್ಶನ ವ್ಯವಸ್ಥೆ”ಗೆ ಮರುನಿರ್ದೇಶಿಸುತ್ತದೆ. ಅಲ್ಲಿ ನಿಮ್ಮ ವೈಯಕ್ತಿಕ ವಿವರಗಳು, ಉದ್ಯೋಗ ವಿವರಗಳು, ಇತ್ಯಾದಿಗಳನ್ನು ನೀಡಬೇಕು.
ಹಂತ ೨: ಕೆಳಗಿನ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು:
- ನಿಮ್ಮ ಮತ್ತು ನಿಮ್ಮ ಸಂಗಾತಿಯ ನಿವಾಸ ಸ್ಥಾನದ ಪುರಾವೆ
- ನೀವು ಮತ್ತು ನಿಮ್ಮ ಸಂಗಾತಿಯು ಕಾನೂನುಬದ್ಧವಾಗಿ ಮದುವೆಯಾದ ದಂಪತಿಗಳೆಂದು ಸೂಚಿಸುವ ಪುರಾವೆ
- ಜೈವಿಕ ತಂದೆ/ತಾಯಿ ಮರಣಗೊಂಡಲ್ಲಿ ಅವರ ಮರಣ ಪ್ರಮಾಣಪತ್ರ
- ಮಗುವಿನ, ಅದರ ಜೈವಿಕ ತಂದೆ/ತಾಯಿಯರ, ದತ್ತು ತೆಗೆದುಕೊಳ್ಳುವ ಸಂಗಾತಿಯ, ಮತ್ತು ಸಾಕ್ಷಿದಾರರ ಧೃಡೀಕರಿಸಲಾದ ಭಾವಚಿತ್ರಗಳು
- ಮಕ್ಕಳ ಕಲ್ಯಾಣ ಸಮಿತಿ ನಿಮಗೆ ದತ್ತು ಸ್ವೀಕೃತಿಯ ಅನುಮತಿ ನೀಡಿದ ಪುರಾವೆ ೬. ನ್ಯಾಯಾಲಯದಿಂದ ಸಿಕ್ಕ ದತ್ತು ಸ್ವೀಕೃತಿ ಆದೇಶ
ಹಂತ ೩: ಮಕ್ಕಳ ಕಲ್ಯಾಣ ಸಮಿತಿಯಿಂದ ನಿಮಗೆ ದತ್ತು ಸ್ವೀಕೃತಿ ಮಾಡಲು ಅನುಮತಿ ಸಿಕ್ಕಿರಬೇಕು. ಸಮಂಜಸ ದಾಖಲೆಯನ್ನು, ನಿಮ್ಮ ಹಾಗು ನಿಮ್ಮ ಸಂಗಾತಿಯ ಒಪ್ಪಿಗೆಯ ಜೊತೆ ಸಲ್ಲಿಸಬೇಕು. ಒಂದು ವೇಳೆ ಇಬ್ಬರೂ ದಂಪತಿಗಳು ತಮ್ಮ ತಮ್ಮ ಮೊದಲಿನ ಮದುವೆಯಿಂದ ಹುಟ್ಟಿದ ಮಕ್ಕಳನ್ನು ದತ್ತು ಸ್ವೀಕೃತಿಯ ಸಲುವಾಗಿ ಬಿಟ್ಟುಕೊಡುವುದ್ದಿದ್ದಲ್ಲಿ, ಬೇರೆ-ಬೇರೆ ಒಪ್ಪಿಗೆ ಪತ್ರಗಳನ್ನು ಸಲ್ಲಿಸಬೇಕು.
ಹಂತ ೪: ನೀವು ಮತ್ತು ನಿಮ್ಮ ಸಂಗಾತಿ ಕುಟುಂಬ ನ್ಯಾಯಾಲಯ/ ಜಿಲ್ಲಾ ನ್ಯಾಯಾಲಯ/ನಗರ ನಾಗರಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕು. ಇದಾದ ಮೇಲೆ ದತ್ತು ಸ್ವೀಕೃತಿಯ ಪ್ರಮಾಣೀಕರಿಸಲಾದ ಆದೇಶಪತ್ರವನ್ನು “ಮಕ್ಕಳ ದತ್ತು ಸ್ವೀಕೃತಿ ಸಂಪನ್ಮೂಲ ಮಾಹಿತಿ ಮತ್ತು ಮಾರ್ಗದರ್ಶನ ವ್ಯವಸ್ಥೆ”ಯ ಜಾಲತಾಣದಲ್ಲಿ ಅಪ್ಲೋಡ್ ಮಾಡಬೇಕು.