ನೀವು ಸಾಗರೋತ್ತರ ಭಾರತೀಯ ನಾಗರೀಕರಾಗಿದ್ದಲ್ಲಿ, ಅಥವಾ ರೋಢಿಗತವಾಗಿ ಭಾರತದಲ್ಲಿ ನೆಲೆಸಿದ್ದ ವಿದೇಶೀಯರಾಗಿದ್ದು, ಮಗುವನ್ನು ದತ್ತು ಪಡೆಯಬೇಕೆಂದರೆ ಕೆಳಕಂಡ ಪ್ರಕ್ರಿಯೆಯನ್ನು ಪಾಲಿಸಿ:
ಹಂತ ೧: ನೀವು ದತ್ತು ಪಡೆಯಲು ಅರ್ಹರಿದ್ದೀರೋ ಇಲ್ಲವೋ ಎಂಬುದನ್ನು ನಿಗದಿ ಪಡಿಸಬೇಕು. ನೀವು ಸಾಗರೋತ್ತರ ಭಾರತೀಯ ನಾಗರೀಕರಾಗಿದ್ದಲ್ಲಿ, ಅಥವಾ ರೋಢಿಗತವಾಗಿ ಭಾರತದಲ್ಲಿ ನೆಲೆಸಿದ್ದ ವಿದೇಶೀಯರಾಗಿದ್ದಲ್ಲಿ ಮಾತ್ರ ಈ ಪ್ರಕ್ರಿಯೆಯ ಮೂಲಕ ಮಗುವನ್ನು ದತ್ತು ಪಡೆಯಬಹುದು.
ಹಂತ ೨: ಕೇಂದ್ರೀಯ ದತ್ತು ಸ್ವೀಕೃತಿ ಸಂಪನ್ಮೂಲ ಅಧಿಕಾರದ ಜಾಲತಾಣದ ಮೇಲೆ ನೀವು ನಿಮ್ಮ ಹೆಸರನ್ನು ನೋಂದಾಯಿಸಬೇಕು. ಹೀಗೆ ಮಾಡಿದಾಗ ಆ ಜಾಲತಾಣ ನಿಮ್ಮನ್ನು “ಮಕ್ಕಳ ದತ್ತು ಸ್ವೀಕೃತಿ ಸಂಪನ್ಮೂಲ ಮಾಹಿತಿ ಮತ್ತು ಮಾರ್ಗದರ್ಶನ ವ್ಯವಸ್ಥೆ”ಗೆ ಮರುನಿರ್ದೇಶಿಸುತ್ತದೆ. ಇಲ್ಲಿ ನಿಮ್ಮ ಅರ್ಜಿಯನ್ನು ನೀವು ಸಲ್ಲಿಸಬೇಕು.
ಹಂತ ೩: ನಿಮ್ಮ ಅರ್ಜಿಯ ಜೊತೆ ಕೆಳಕಂಡ ದಾಖಲೆಗಳನ್ನು ಸಲ್ಲಿಸಬೇಕು:
- ನಿಮ್ಮ ಭಾವಚಿತ್ರ
- ಪಾನ್ ಕಾರ್ಡ್
- ನಿಮ್ಮ ಜನ್ಮ ಪುರಾವೆ (ಮದುವೆಯಾದ ದಂಪತಿಯಾದಲ್ಲಿ ನಿಮ್ಮ ಸಂಗಾತಿಯ ಜನ್ಮ ಪುರಾವೆ ಕೂಡ ಬೇಕು)
- ನಿವಾಸದ ಪುರಾವೆ (ಆಧಾರ್ ಕಾರ್ಡ್/ವೋಟರ್ ಕಾರ್ಡ್/ಪಾಸ್ಪೋರ್ಟ್/ವಿದ್ಯುತ್ ಬಿಲ್/ದೂರವಾಣಿ ಬಿಲ್)
- ಹಿಂದಿನ ವರ್ಷದ ಆದಾಯದ ಪುರಾವೆ (ಸಂಬಳ ಚೀಟಿ/ಸರ್ಕಾರ ನೀಡುವ ಆದಾಯ ಪ್ರಮಾಣಪತ್ರ/ ಆದಾಯ ತೆರಿಗೆ ರಿಟರ್ನ್ಸ್)
- ನಿಮಗೆ ಯಾವುದೇ ದೀರ್ಘಕಾಲದ, ಸಾಂಕ್ರಾಮಿಕ, ಅಥವಾ ಮಾರಣಾಂತಿಕ ರೋಗವಿಲ್ಲೆಂದು ಮತ್ತು ನೀವು ದತ್ತು ಪಡೆಯಲ್ಲೂ ಯೋಗ್ಯವಿದ್ದೀರಿ ಎಂದು ಘೋಷಿಸುವ ವೈದ್ಯಕೀಯ ಪ್ರಮಾಣಪತ್ರ (ಮದುವೆಯಾಗಿದ್ದಲ್ಲಿ ನಿಮ್ಮ ಸಂಗಾತಿಯ ವೈದ್ಯಕೀಯ ಪ್ರಮಾಣಪತ್ರವೂ ಬೇಕು)
- ವಿವಾಹ ಪ್ರಮಾಣಪತ್ರ/ವಿಚ್ಛೇದನಾ ತೀರ್ಪು/ವೈಯಕ್ತಿಕ ಕಾನೂನಿನಡಿ ವಿಚ್ಛೇದನ ಪಡೆದಿರುವಂತೆ ನ್ಯಾಯಾಲಯದ ಘೋಷಣೆ ಅಥವಾ ಶಪಥಪತ್ರ/ ಸಂಗಾತಿಯ ಮರಣ ಪ್ರಮಾಣಪತ್ರ – ಸಂದರ್ಭಾನುಸಾರ.
ಹಂತ ೪: ವಿಶೇಷ ದತ್ತು ಸ್ವೀಕಾರ ಸಂಸ್ಥೆ ನಿಮ್ಮ ಮನೆಗೆ ಭೇಟಿ ನೀಡಿ ನಿಮ್ಮ ಜೀವನದ ಬಗ್ಗೆ ಅಧ್ಯಯನ ನಡೆಸುತ್ತದೆ. ಇದರ ಅನುಗುಣವಾಗಿ ನಿಮ್ಮ ಅರ್ಜಿಯನ್ನು ಸ್ವೀಕರಿಸಬಹುದು, ಅಥವಾ ತಿರಸ್ಕರಿಸಬಹುದು. ಫಲಿತಾಂಶವನ್ನು “ಮಕ್ಕಳ ದತ್ತು ಸ್ವೀಕೃತಿ ಸಂಪನ್ಮೂಲ ಮಾಹಿತಿ ಮತ್ತು ಮಾರ್ಗದರ್ಶನ ವ್ಯವಸ್ಥೆ”ಯ ಜಾಲತಾಣದಲ್ಲಿ ಪ್ರಕಟಿಸಲಾಗುತ್ತದೆ.
ಹಂತ ೫: ನಿಮ್ಮ ಅರ್ಜಿ ಸ್ವೀಕಾರಗೊಂಡಲ್ಲಿ, ನಿಮ್ಮ ವರಿಷ್ಟತೆಯ ಅನುಗುಣವಾಗಿ, ದತ್ತು ಸ್ವೀಕಾರ ಸಂಸ್ಥೆಯು, “ಮಕ್ಕಳ ದತ್ತು ಸ್ವೀಕೃತಿ ಸಂಪನ್ಮೂಲ ಮಾಹಿತಿ ಮತ್ತು ಮಾರ್ಗದರ್ಶನ ವ್ಯವಸ್ಥೆ”ಯ ಜಾಲತಾಣದ ಮೂಲಕ ನಿಮಗೆ ೩ ಮಕ್ಕಳ ನಡುವೆ ಆಯ್ಕೆ ಮಾಡಲು ಅನುಮತಿ ನೀಡುತ್ತದೆ. ನೀವು ಇವರಲ್ಲಿ ಒಂದು ಮಗುವನ್ನು ೪೮ ಗಂಟೆಗಳಲ್ಲಿ ದತ್ತು ತೆಗೆದುಕೊಳ್ಳಲು ಮೀಸಲಿಡಬಹುದು. ಇದರ ನಂತರ ನಿಮ್ಮ ಮತ್ತು ಮಗುವಿನ ಹೊಂದಾಣಿಕೆಯ ಸೂಕ್ತತೆಯನ್ನು ಕಂಡುಹಿಡಿಯಲು ಮೀಟಿಂಗ್ ನಡೆಸಲಾಗುತ್ತದೆ. ಈ ಪ್ರಕ್ರಿಯೆ ೨೦ ದಿನಗಳ ವರೆಗೆ ನಡೆಯುತ್ತದೆ. ಒಂದು ವೇಳೆ ನೀವು ಮಗುವನ್ನು ಒಪ್ಪಿಕೊಳ್ಳದಿದ್ದರೆ, ನಿಮ್ಮ ಹೆಸರನ್ನು ವರಿಷ್ಠತಾ ಪಟ್ಟಿಯ ಕೊನೆಯಲ್ಲಿ ಸೇರಿಸಲಾಗುತ್ತದೆ.
ಹಂತ ೬: ವಿಶೇಷ ದತ್ತು ಸ್ವೀಕಾರ ಸಂಸ್ಥೆಯು ದತ್ತು ಸ್ವೀಕೃತಿಯ ಪ್ರಕ್ರಿಯೆಯನ್ನು ಅರ್ಧವಾರ್ಷಿಕ ವರದಿಗಳ ಮೂಲಕ, ೨ ವರ್ಷಗಳ ಕಾಲ ದಾಖಲಿಸುತ್ತದೆ. ಏನಾದರೂ ಸಮಸ್ಯೆಗಳು ಎದುರಾದಲ್ಲಿ ಸಮಾಲೋಚನೆ ನೀಡಲಾಗುತ್ತದೆ. ದತ್ತು ಸ್ವೀಕೃತಿಯ ನಂತರ ತೊಂದರೆಗಳು ಉಂಟಾದಲ್ಲೂ ದತ್ತು ಸ್ವೀಕೃತಿಯನ್ನು ರದ್ದು ಗೊಳಿಸಿ, ಮಗುವನ್ನು ಪುನಃ ಇನ್ನೋರ್ವ ಭಾವೀ ದತ್ತು ತಂದೆ-ತಾಯಂದಿರಿಗೆ ದತ್ತು ಕೊಡಲು ಯೋಗ್ಯವೆಂದು ಘೋಷಿಸಲಾಗುತ್ತದೆ.