ನೀವು ಬಾಲ ಕಲಾವಿದರಿಗೆ ಉದ್ಯೋಗ ನೀಡಿದ್ದಲ್ಲಿ, ಬಾಲ ಕಾರ್ಮಿಕ ಪದ್ಧತಿ (ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯಿದೆ, ೧೯೮೬ರ ಅಡಿಯಲ್ಲಿನ ಫಾರಂ ಸೀ ಅನ್ನು ತುಂಬಿ ಅಧಿಕಾರಿಗಳಿಗೆ ನೀಡುವ ಕರ್ತವ್ಯ ನಿಮ್ಮದಾಗಿದೆ. ಈ ರೀತಿ ಫಾರಂ ಸೀ ಅನ್ನು ತುಂಬಿ ಕೆಳಗಿನ ಜವಾಬ್ದಾರಿಗಳನ್ನು ತೆಗೆದುಕೊಳ್ಳುವುದಾಗಿ ಉದ್ಯೋಗದಾತರು ಒಪ್ಪುತ್ತಾರೆ:
- ಮಗುವಿನ ಶಿಕ್ಷಣಕ್ಕೆ ಧಕ್ಕೆ ಬರುವಂತಿಲ್ಲ
- ಬಾಲ ಕಲಾವಿದರ ಕಾಳಜಿ ಹಾಗು ರಕ್ಷಣೆಯ ಹೊಣೆ, ಮತ್ತು ಅವರ ಶಾರೀರಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುವ ಜವಾಬ್ದಾರಿ
- ಬಾಲ ಕಾರ್ಮಿಕ ಪದ್ಧತಿ ಕಾನೂನನ್ನು ಉಲ್ಲಂಘಿಸುವಂತಿಲ್ಲ
- ಮಗುವಿನ ಮೇಲೆ ಯಾವ ರೀತಿಯ ಲೈಂಗಿಕ ಶೋಷಣೆಯಾಗದಂತೆ ಉದ್ಯೋಗದಾತರು ನೋಡಿಕೊಳ್ಳಬೇಕು
ಅನುಮತಿಗೆ ಅರ್ಜಿ ಯಾವ ಜಿಲ್ಲೆಯಲ್ಲಿ ಉದ್ಯೋಗ ನಡೆಯಲಿದೆಯೋ, ಆ ಜಿಲ್ಲೆಯ ಜಿಲ್ಲಾಧಿಕಾರಿಗಳು ಮಗುವಿನ ಉದ್ಯೋಗದ ಒಪ್ಪಿಗೆಯ ಪರವಾನಗಿ ನಿಮಗೆ ಕೊಡಬೇಕು. ಮಗುವಿನ ತಂದೆ-ತಾಯಿಯರು ಅಥವಾ ಪೋಷಕರು ಕೂಡ ಮಗುವಿನ ಉದ್ಯೋಗದ ಒಪ್ಪಿಗೆ ನಿಮಗೆ ನೀಡಬೇಕು. ಈ ಪರವಾನಗಿಯಲ್ಲಿ ಕೆಳಗಿನ ಶರತ್ತುಗಳಿರುತ್ತವೆ:
- ಮಗುವಿನ ಶಾರೀರಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಲು ಸೌಲಭ್ಯಗಳು
- ಮಗುವಿಗೆ ಪೌಷ್ಟಿಕ ಆಹಾರ ಒದಗಿಸುವುದು
- ಮಗುವಿಗೆ ವಾಸಿಸಲು ಸ್ವಚ್ಛ ಹಾಗು ಸುರಕ್ಷಿತ ಆಶ್ರಯ
- ಮಕ್ಕಳ ರಕ್ಷಣೆ, ಶಿಕ್ಷಣದ ಹಕ್ಕು, ಮತ್ತು ಲೈಂಗಿಕ ಅಪರಾಧಗಳಿಂದ ರಕ್ಷಣೆಯ ಕಾನೂನುಗಳ ಅನುಸರಣೆ
ಕೆಲಸದ ಸಮಯ: ಉದ್ಯೋಗದಾತರು ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು:
- ಮಗುವಿನಿಂದ ದಿನಕ್ಕೆ ೫ ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಿಸುವಂತಿಲ್ಲ
- ಮಗುವನ್ನು ವಿಶ್ರಾಂತಿಯಿಲ್ಲದೆ ಸತತ ೩ ಗಂಟೆಗಳಿಗಿಂತ ಹೆಚ್ಚಿನ ಕಾಲ ಕೆಲಸ ಮಾಡಿಸುವಂತಿಲ್ಲ
- ಮಗುವನ್ನು ಸತತವಾಗಿ ೨೭ ದಿನಗಳಿಗಿಂತ ಹೆಚ್ಚು ಕೆಲಸ ಮಾಡಿಸುವಂತಿಲ್ಲ
Manajemen
December 21, 2022
thanks for sharing