ಯಾವುದೇ ಸಮಯದಲ್ಲಿ ಸಾಮಾನ್ಯವಾಗಿ ಅಥವಾ ಅಪಘಾತದ ಸಂದರ್ಭದಲ್ಲಿ ಸಂಚಾರ/ಇತರೆ ಪೋಲೀಸ್ ಅಧಿಕಾರಿಯು ವಾಹನದ ವಿಮಾ ಪ್ರಮಾಣಪತ್ರವನ್ನು ಹಾಜರುಪಡಿಸುವಂತೆ ನಿಮ್ಮನ್ನು ಕೇಳಿದಾಗ ನೀವು ಕಡ್ಡಾಯವಾಗಿ ಆ ಪ್ರಮಾಣಪತ್ರವನ್ನು ಹಾಜರುಮಾಡತಕ್ಕದ್ದು. ಭೌತಿಕ ರೂಪದಲ್ಲಿನ ಪ್ರತಿಯ ಬದಲಾಗಿ ಈಗ ನೀವು ನಿಮ್ಮ ವಿಮಾ ದಾಖಲೆಗಳನ್ನು ಡಿಜಿ ಲಾಕರ್ ಅಥವಾ ಎಂ- ಎಂ-ಪರಿವಹನ್ ನಲ್ಲಿ ಎಲೆಕ್ಟ್ರಾನಿಕ್ ಪ್ರತಿಗಳನ್ನೂ ಇಟ್ಟುಕೊಳ್ಳಬಹುದು.ನಿಮ್ಮ ಬಳಿ ಭೌತಿಕ ಅಥವಾ ಎಲೆಕ್ಟ್ರಾನಿಕ್ ರೂಪದಲ್ಲಿ ವಿಮಾ ದಾಖಲೆ ಇಲ್ಲವಾದಲ್ಲಿ, ನೀವು ಅದನ್ನು ಸಂಬಂಧಿಸಿದ ಪೋಲೀಸ್ ಠಾಣೆಯಲ್ಲಿ ಅಪಘಾತವಾದ 7 ದಿನಗಳ ಒಳಗೆ ಅಥವಾ ನಿಮಗೆ ತಿಳಿಸಿದ ಸಮಯದೊಳಗೆ ಹಾಜರು ಪಡಿಸತಕ್ಕದ್ದು.
ವಾಹನ ಚಾಲನೆ ಮಾಡುವ ಸಮಯದಲ್ಲಿ ನಿಮ್ಮ ಬಳಿ ವಿಮೆ ದಾಖಲೆಗಳು ಇಲ್ಲದಿದ್ದಲ್ಲಿ ಮೊದಲ ಅಪರಾಧಕ್ಕೆ ನೀವು ಕನಿಷ್ಟ ರೂ.500/-ನ್ನು ಜುಲ್ಮಾನೆಯಾಗಿಯೂ ನಂತರದ ಪುನರಾವರ್ತಿತ ಅಪರಾಧಗಳಿಗೆ ಕನಿಷ್ಟ ರೂ. 1,500/- ನ್ನು ಜುಲ್ಮಾನೆಯಾಗಿ ತೆರಬೇಕಾಗುವುದು. ಈ ಜುಲ್ಮಾನೆಯ ಮೊತ್ತ ರಾಜ್ಯದಿಂದ ರಾಜ್ಯಕ್ಕೆ ಬೇರೆಯಾಗಿರಬಹುದು.
ಎರಡು ರಾಜ್ಯಗಳಿಗೆ ಸಂಬಂಧಿಸಿದಂತೆ ಜುಲ್ಮಾನೆಯ ಮೊತ್ತವನ್ನು ಕೆಳಗೆ ನೀಡಲಾಗಿದೆ:
ರಾಜ್ಯ | ಅಪರಾಧದ ಪುನರಾವರ್ತನೆ | ಜುಲ್ಮಾನೆಯ ಮೊತ್ತ(ರೂ.ಗಳಲ್ಲಿ) |
ದೆಹಲಿ | ಮೊದಲನೇ ಅಪರಾಧ | 500 |
ಪುನರಾವರ್ತಿತ ಅಪರಾಧ | 1,500 | |
ಕರ್ನಾಟಕ | ಮೊದಲನೇ ಅಪರಾಧ | 500 |
ಪುನರಾವರ್ತಿತ ಅಪರಾಧ | 1,500 |