ಅನಾಮಧೇಯವಾಗಿ ವರದಿ ಮಾಡಲು https://cybercrime.gov.in/ ಅನ್ನು ಭೇಟಿ ನೀಡಿ

ಅಂತರ್ಜಾಲ ಶೋಷಣೆ ಕುರಿತು ದೂರು ನೀಡುವುದು

ಕೊನೆಯ ಅಪ್ಡೇಟ್ Oct 21, 2024

ಪೋಲೀಸ್ ಠಾಣೆಯನ್ನು ಸಂಪರ್ಕಿಸುವುದು
ಅಂತರ್ಜಾಲದಲ್ಲಿ ನೀವು ಶೋಷಣೆಯಿಂದ ಪೀಡಿತರಾಗಿರುವುದರನ್ನು ಕುರಿತು ಪೋಲೀಸ್ ಠಾಣೆಗೆ ದೂರು ನೀಡಲು ತೆರಳಿದಾಗ ಪೋಲೀಸರು ನಿಮಗೆ ಪ್ರಥಮ ವರ್ತಮಾನ ವರದಿ (ಎಫ್ಐಆರ್) ದಾಖಲಿಸುವಂತೆ ತಿಳಿಸುತ್ತಾರೆ. ಘಟನೆ ಬಗ್ಗೆ ನಿಮಗೆ ತಿಳಿದಿರುವ ಎಲ್ಲ ಮಾಹಿತಿಯನ್ನು ಮತ್ತು ನೀವು ಶೋಷಣೆಗೆ ಗುರಿಯಾಗಿರುವುದಕ್ಕೆ ಸಂಬಂಧಿಸಿದ ಸಂಪೂರ್ಣ ವಿವರವನ್ನು ಪೋಲೀಸರಿಗೆ ನೀವು ಚಾಚೂತಪ್ಪದೆ ತಿಳಿಸತಕ್ಕದ್ದು.

 

ಸೈಬರ್ ಸೆಲ್
ಎಲ್ಲ ರಾಜ್ಯಗಳಲ್ಲಿ ಸೈಬರ್ ಸೆಲ್ ಸ್ಥಾಪಿಸಲಾಗಿದ್ದು ಕೆಲವು ಪೋಲೀಸ್ ಠಾಣೆಗಳಲ್ಲಿ ಸೈಬರ್ ಅಪರಾಧಗಳಿಗೆ ಸಂಬಂಧಿಸಿದಂತೆ ವಿಶೇಷ ದಳ ರಚಿಸಲಾಗಿರುತ್ತದೆ. ಅಂತರ್ಜಾಲದಲ್ಲಿ ನಿಮ್ಮನ್ನು ಯಾರಾದರೂ ಹಿಂಬಾಲಿಸುತ್ತಿದ್ದಲ್ಲಿ ಅಥವಾ ಹ್ಯಾಕಿಂಗ್ ಇತ್ಯಾದಿಗಳಿಗೆ ಸಂಬಂಧಿಸಿದ ದೂರುಗಳ ಸಂದರ್ಭದಲ್ಲಿ ನೀವು ಈ ವಿಶೇಷ ದಳದಿಂದ ಸಹಾಯ ಪಡೆಯಬಹುದಾಗಿರುತ್ತದೆ. ಸೈಬರ್ ಸೆಲ್ ನ ಜಾಲತಾಣದ ಮೂಲಕ ನೇರವಾಗಿ ದೂರನ್ನು ಸಲ್ಲಿಸುವ ಸೌಲಭ್ಯವನ್ನು ಹಲವಾರು ರಾಜ್ಯಗಳಲ್ಲಿ ಕಲ್ಪಿಸಲಾಗಿದೆ. ಉದಾಹರಣೆಗೆ, ದೆಹಲಿಯಲ್ಲಿ ನೀವು ಜಾಲತಾಣದ ಮೂಲಕ ಈ ಸಂಪರ್ಕ ಕೊಂಡಿಯಿಂದ ಸೈಬರ್ ಸೆಲ್ ಗೆ ದೂರು ಸಲ್ಲಿಸಬಹುದಾಗಿದೆ.

ಸೈಬರ್ ಅಪರಾಧ ಕುರಿತು ದೂರು ನೀಡಲು ನಿಮಗೆ ಎರಡು ಆಯ್ಕಗಳಿವೆ:
 ನಿಮ್ಮ ರಾಜ್ಯದ ಸೈಬರ್ ಸೆಲ್ ನ ಜಾಲತಾಣದಲ್ಲಿ ನೇರವಾಗಿ ದೂರು ಸಲ್ಲಿಸಿರಿ ಅಥವಾ
 ಸನಿಹದ ಪೋಲೀಸ್ ಠಾಣೆಯಲ್ಲಿ ಪ್ರಥಮ ವರ್ತಮಾನ ವರದಿ (ಎಫ್ಐಆರ್) ಸಲ್ಲಿಸಿದಲ್ಲಿ, ಅದನ್ನು ಸೈಬರ್ ಸೆಲ್ ಗೆ ವರ್ಗಾಯಿಸಲಾಗುತ್ತದೆ.

 

ದೂರು ಸಲ್ಲಿಸುವ ಜಾಲತಾಣಗಳು:
ಆನ್ ಲೈನ್ ಅಪರಾಧ ವರದಿ ಮಾಡಲಾಗುವ ಜಾಲತಾಣ:
ಕೇಂದ್ರ ಗೃಹಖಾತೆಯ ಅಂತರ್ಜಾಲ ಅಪರಾಧ ವರದಿ ಜಾಲತಾಣದ https://cybercrime.gov.in/ ಮೂಲಕವೂ ನೀವು ದೂರನ್ನು ಸಲ್ಲಿಸಬಹುದಾಗಿದೆ. ದೂರು ದಾಖಲಿಸುವ ಸಲುವಾಗಿ ಈ ಜಾಲತಾಣದಲ್ಲಿ ನಿಮ್ಮನ್ನು ನಿರ್ದಿಷ್ಟ ರಾಜ್ಯದ ಜಾಲತಾಣಕ್ಕೆ ಪುನರ್ನಿರ್ದೇಶನ ಮಾಡಲಾಗುತ್ತದೆ. “ನಾಗರಿಕ ಸೇವೆಗಳು (Services for Citizen) ಎಂಬ ವಿಭಾಗದಲ್ಲಿ ನಿಮ್ಮ ದೂರನ್ನು ದಾಖಲಿಸಿ ನಂತರ “ಸೈಬರ್ ಕ್ರೈಂ ವರದಿ” (Report a Cyber Crime) ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿರಿ. ಇಲ್ಲಿ ನೀವು ಅಪರಾಧಿಯ ಮಾಹಿತಿ, ಘಟನೆಯ ವಿವರ ಹಾಗೂ ಅದಕ್ಕೆ ಸಂಬಂಧಿಸಿದ ಸ್ಕ್ರೀನ್ ಶಾಟ್ ಮತ್ತಿತರ ಸಾಕ್ಷ್ಯಾಧಾರಗಳನ್ನು ಒದಗಿಸಬಹುದು. ದೂರನ್ನು ನೀವು ಅನಾಮಧೇಯರಾಗಿ ಅಥವಾ ನಿಮ್ಮ ಗುರ್ತಿನೊಂದಿಗೆ ದಾಖಲಿಸಬಹುದಾಗಿದೆ. ನಿಮ್ಮ ದೂರಿನ ಕುರಿತು ತನಿಖೆಯ ಪ್ರಗತಿಯನ್ನು ಕೂಡ ಈ ಜಾಲತಾಣದ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಸೈಬರ್ ಅಪರಾಧ ವರದಿ ಮಾಡುವ ಜಾಲತಾಣ:
ನೀವು ದೂರನ್ನು ನೇರವಾಗಿ ಸೈಬರ್ ಅಪರಾಧ ವರದಿ ಮಾಡುವ https://cybercrime.gov.in/ ಜಾಲತಾಣದಲ್ಲಿಯೂ ದಾಖಲಿಸಬಹುದಾಗಿದೆ. ಇಲ್ಲಿಯೂ ಕೂಡ ದೂರನ್ನು ಅನಾಮಧೇಯವಾಗಿ ಸಲ್ಲಿಸಲು ಅವಕಾಶವಿದೆ. ಇಲ್ಲಿ ಹಲವಾರು ರೀತಿಯ ಸೈಬರ್ ಅಪರಾಧಗಳ ಕುರಿತು ದೂರು ದಾಖಲಿಸಬಹುದಾಗಿದೆ. ನಿಮ್ಮ ದೂರಿನ ಕುರಿತು ತನಿಖೆಯ ಪ್ರಗತಿಯನ್ನು ತಿಳಿಯಲು ನೀವು
ಖಾತೆಯೊಂದನ್ನು ಪ್ರಾರಂಭಿಸಿ, ಲಾಗ್ ಇನ್ ಮಾಡಬೇಕಾಗುತ್ತದೆ.

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.