ಎಲ್ಲಿ ಮತ್ತು ಯಾವಾಗ ಕ್ರಿಶ್ಚಿಯನ್ ಮದುವೆಗಳು ನಡೆಯಬಹುದು?

ಕೊನೆಯ ಅಪ್ಡೇಟ್ Jul 10, 2025

ಮದುವೆಯ ಸಮಯ:
ಕ್ರಿಶ್ಚಿಯನ್ ಮದುವೆಯನ್ನು ಕೇವಲ ಬೆಳಿಗ್ಗೆ ೬ರಿಂದ ಸಂಜೆ ೭ರ ವರೆಗೆ ನೆರವೇರಿಸಬಹುದು. ಆದಾಗ್ಯೂ, ಇಂಗ್ಲೆಂಡ್, ರೋಮ್, ಮತ್ತು ಸ್ಕಾಟ್ಲೆಂಡ್ ಚರ್ಚುಗಳ ಪಾದ್ರಿಗಳು ಅವರವರ ಚರ್ಚುಗಳ ನಿಯಮಗಳು ಮತ್ತು ಸಂಪ್ರದಾಯಗಳನುಸಾರ ಈ ಸಮಯಾವಧಿಯನ್ನು ಮೀರಿ ಮದುವೆಯನ್ನು ನಡೆಸಬಹುದಾಗಿದೆ. ಮತ್ತಿನ್ನು, ಇಂಗ್ಲೆಂಡ್ ಮತ್ತು ರೋಮ್ ಚರ್ಚುಗಳ ಪಾದ್ರಿಗಳು, ಈ ಸಮಯಾವಧಿಯನ್ನು ಮೀರಿ ಮದುವೆಯನ್ನು ನಡೆಸಲು, ಅವರವರ ಧರ್ಮಾಧಿಪತಿಗಳಿಂದ ಪರವಾನಗಿ ಪಡೆದುಕೊಳ್ಳಬೇಕಾಗುತ್ತದೆ.

ಮದುವೆಯ ಸ್ಥಳ:
ಕ್ರಿಶ್ಚಿಯನ್ ಮದುವೆಯನ್ನು ಚರ್ಚಿನಲ್ಲಿ, ವೈಯಕ್ತಿಕ ನಿವಾಸದಲ್ಲಿ, ಅಥವಾ ವಿವಾಹ ಕುಲಸಚಿವರ ಉಪಸ್ಥಿತಿಯಲ್ಲಿ ನೆರವೇರಿಸಬಹುದು. ಆದರೆ, ಇಂಗ್ಲೆಂಡ್ ಚರ್ಚಿನ ಪಾದ್ರಿಗಳಿಂದ ವಿವಾಹ ನಡೆಯುತ್ತಿದ್ದರೆ, ಅದು ಚರ್ಚಿನಲ್ಲಿ ನಡೆಯಬೇಕು. ಒಂದು ವೇಳೆ ೫ ಮೈಲಿ ತ್ರಿಜ್ಯದಲ್ಲಿ ಚರ್ಚುಗಳಿಲ್ಲದಿದ್ದರೆ, ಧರ್ಮಾಧಿಪತಿಗಳಿಂದ ಚರ್ಚಿನ ಪಾದ್ರಿಗಳು ವಿಶೇಷ ಪರವಾನಗಿ ಪಡೆದಿದ್ದರೆ ಈ ನಿಯಮವನ್ನು ಉಲ್ಲಂಘಿಸಬಹುದು.

ಕಾನೂನಿನಡಿ ಅಪರಾಧಗಳು ಮತ್ತು ಶಿಕ್ಷೆಗಳು ಯಾವುವು?
ಕ್ರಿಶ್ಚಿಯನ್ ವಿವಾಹ ಕಾನೂನಿನಡಿ ಅಪರಾಧಗಳು ಕೆಳಗಿನಂತಿವೆ:

೧. ಸುಳ್ಳು ಪ್ರಮಾಣವಚನ ಅಥವಾ ಧೃಢೀಕರಣ ನೀಡುವುದು:
ಯಾರಾದರೂ ಮದುವೆಯಾಗಲು ಸುಳ್ಳು ಪ್ರಮಾಣವಚನ ಅಥವಾ ಧೃಢೀಕರಣ ನೀಡಿದರೆ, ಅಥವಾ ನಕಲಿ ವಿವಾಹ ಸೂಚನೆ/ಪ್ರಮಾಣ ಪತ್ರಕ್ಕೆ ಸಹಿ ಹಾಕಿದರೆ, ಅವರಿಗೆ ಗರಿಷ್ಟ ೩ ವರ್ಷಗಳ ವರೆಗೆ ಸೆರೆಮನೆ ವಾಸ ಮತ್ತು ದಂಡ ವಿಧಿಸಲಾಗುವುದು.

೨. ಅಲ್ಪವಯಸ್ಕರ ಸಂಬಂಧಿತ ಅಪರಾಧಗಳು:
ಯಾರದಾರೂ ಅಲ್ಪವಯಸ್ಕರ ಮದುವೆಗೆ ಒಪ್ಪಿಗೆ ಕೊಡಲು ಅವರಿಗೆ ಹಕ್ಕಿದೆ ಎಂದು ಸುಳ್ಳು ಹೇಳಿದರೆ, ಸುಳ್ಳು ವೇಷಧಾರಣೆಯ ಅಪರಾಧಕ್ಕೆ ತಪ್ಪಿತಸ್ಥರಾಗುತ್ತಾರೆ. ಈ ಅಪರಾಧಕ್ಕೆ ಶಿಕ್ಷೆ – ೩ ವರ್ಷ ಸೆರೆಮನೆ ವಾಸ, ಅಥವಾ ದಂಡ, ಅಥವಾ ಎರಡೂ.
ಧರ್ಮ ಸಚಿವರು ೧೪ ದಿನಗಳ ಸೂಚನಾ ಸಮಯಾವಧಿಯ ಮೊದಲೇ ಅಲ್ಪವಯಸ್ಕರ ಮದುವೆ ನೆರವೇರಿಸಿದಲ್ಲಿ, ಅವರಿಗೆ ಶಿಕ್ಷೆ – ಗರಿಷ್ಟ ೩ ವರ್ಷಗಳ ಸೆರೆಮನೆ ವಾಸ, ಮತ್ತು ದಂಡ.

೩. ಅಧಿಕಾರವಿಲ್ಲದೆ ಮದುವೆಯನ್ನು ನೆರವೇರಿಸುವುದು:
ಯಾರಾದರೂ ಅಗತ್ಯವಾದ ಅಧಿಕಾರವಿಲ್ಲದೆ ಮದುವೆಯನ್ನು ನೆರವೇರಿಸಿದರೆ ಅವರಿಗೆ ಶಿಕ್ಷೆ – ಗರಿಷ್ಟ ೧೦ ವರ್ಷಗಳ ಸೆರೆಮನೆ ವಾಸ ಮತ್ತು ದಂಡ

೪. ನಿಯಮಗಳನ್ನು ಪಾಲಿಸದೆ ಮದುವೆಯನ್ನು ನೆರವೇರಿಸುವುದು:
ಯಾರಾದರೂ ಕ್ರಿಶ್ಚಿಯನ್ ಮದುವೆಯನ್ನು ನಿಗದಿಪಡಿಸಲಾದ ಸಮಯಾವಧಿಯ ಬಾಹಿರವಾಗಿ, ಅಥವಾ ಸಾಕ್ಷಿದಾರರ ಅನುಪಸ್ಥಿತಿಯಲ್ಲಿ ಮದುವೆಯನ್ನು ನೆರವೇರಿಸಿದರೆ, ಅವರಿಗೆ ಶಿಕ್ಷೆ – ಗರಿಷ್ಟ ೩ ವರ್ಷಗಳ ಸೆರೆಮನೆ ವಾಸ ಮತ್ತು ದಂಡ.

ವಿವಾಹ ಕುಲಸಚಿವರು ಕೆಳಕಂಡ ಅಪರಾಧಗಳನ್ನು ಮಾಡಿದರೆ ಅವರಿಗೆ ವಿಧಿಸಲಾಗುವ ಶಿಕ್ಷೆ – ಗರಿಷ್ಟ ೫ ವರ್ಷಗಳ ಸೆರೆಮನೆ ವಾಸ ಮತ್ತು ದಂಡ:
೧. ಪೂರ್ವಭಾವಿ ಸೂಚನೆಯಿಲ್ಲದೆ ಮದುವೆ ನೆರವೇರಿಸುವುದು, ಅಥವಾ ಸೂಚನೆ ಪಡೆದ ಪ್ರಮಾಣಪತ್ರವನ್ನು ನೀಡುವುದು
೨. ವಿವಾಹ ಸೂಚನೆ ಸಿಕ್ಕ ಮೇಲೆ ೨ ತಿಂಗಳುಗಳಾದ ನಂತರ ಮದುವೆ ನೆರವೇರಿಸುವುದು
೩. ವಿವಾಹ ಸೂಚನೆ ಸಿಕ್ಕು ೧೪ ದಿನಗಳ ಕಾಲ ತಡೆಯದೆ, ಮತ್ತು ನ್ಯಾಯಾಲಯದ ಆದೇಶಕ್ಕೆ ತಡೆಯದೆ ಅಲ್ಪವಯಸ್ಕರ ಮದುವೆಯನ್ನು ಮಾಡುವುದು
೪. ಒಪ್ಪಿಗೆ ಇಲ್ಲದಿರುವ ಕಾರಣ ವಿವಾಹ ಸೂಚನೆ ಸಿಕ್ಕಿದೆ ಎಂಬ ಪ್ರಮಾಣ ಪತ್ರ ಕೊಡದಿರುವಂತೆ ಅರ್ಜಿ ಸಲ್ಲಿಸಿದ್ದರೂ ಕೂಡ ಇಂತಹ ಪ್ರಮಾಣಪತ್ರವನ್ನು ಕೊಡುವುದು

ತಪ್ಪಾಗಿ ವಿವಾಹ ಪ್ರಮಾಣಪತ್ರವನ್ನು ನೀಡುವುದು:
ಭಾರತೀಯ ಕ್ರಿಶ್ಚಿಯನ್ನರಿಗೆ ಪರವಾನಗಿ ಪಡೆಯದ ವ್ಯಕ್ತಿ ವಿವಾಹ ಪ್ರಮಾಣಪತ್ರ ನೀಡಿದರೆ ಅವರಿಗೆ ಶಿಕ್ಷೆ – ಗರಿಷ್ಟ ೫ ವರ್ಷ ಸೆರೆಮನೆ ವಾಸ ಮತ್ತು ದಂಡ.

ವಿವಾಹ ದಾಖಲಾ ಪುಸ್ತಕವನ್ನು ಅಕ್ರಮವಾಗಿ ತಿದ್ದುವುದು ಅಥವಾ ನಾಶಮಾಡುವುದು:
ಯಾರಾದರೂ ವಿವಾಹ ದಾಖಲಾ ಪುಸ್ತಕದಲ್ಲಿ ತಪ್ಪು ದಾಖಲೆಯನ್ನು ಬರೆಯುವುದು, ಅಕ್ರಮವಾಗಿ ಯಾವುದೇ ದಾಖಲೆಯನ್ನು ತಿದ್ದುವುದು, ಅಥವಾ ಈ ಪುಸ್ತಕವನ್ನು ನಾಶಮಾಡುವುದು ಮಾಡಿದರೆ ಅವರಿಗೆ ಶಿಕ್ಷೆ – ಗರಿಷ್ಟ ೭ ವರ್ಷಗಳ ಸೆರೆಮನೆ ವಾಸ ಮತ್ತು ದಂಡ.

ಈ ಎಲ್ಲ ಮೇಲ್ಕಂಡ ಪ್ರಕರಣಗಳಲ್ಲಿ, ಅಪರಾಧಿಗಳ ವಿರುದ್ಧ ನ್ಯಾಯಾಲಯಗಳಲ್ಲಿ ಕಾನೂನು ಕ್ರಮ ಅಪರಾಧವಾದ ೨ ವರ್ಷಗಳೊಳಗೆ ಶುರುವಾಗಬೇಕು.

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.