ಹಿಂದೂ ದತ್ತು ಸ್ವೀಕೃತಿ ಕಾನೂನಿನಡಿಯಲ್ಲಿ ದತ್ತು ಪಡೆದುಕೊಳ್ಳಲು ನಿಗದಿತ ಪ್ರಕ್ರಿಯೆ ಇಲ್ಲ. ನೀವು ಯಾವುದೇ ನಿರ್ದೇಶನಗಳನ್ನು ಪಾಲಿಸುವಂತಿಲ್ಲ, ಆದರೆ ದತ್ತು ಪತ್ರವನ್ನು ಕಾರ್ಯಗತಗೊಳಿಸಬೇಕಾಗುತ್ತದೆ. ದತ್ತು ಪಾತ್ರದ ಬಗ್ಗೆ ಹೆಚ್ಚು ಮಾಹಿತಿಗೆ ನಿಮ್ಮ ವಕೀಲರನ್ನು ಸಂಪರ್ಕಿಸಿ.
ನೀವು ಪಾಲಕರು/ಪೋಷಕರು ಆಗಿದ್ದರೆ:
ಪಾಲಕರು/ಪೋಷಕರಿಗೆ ಮಗುವನ್ನು ದತ್ತಕ್ಕೆ ತೆಗೆದುಕೊಳ್ಳಲು/ಕೊಡಲು ನ್ಯಾಯಾಲಯದ ಅನುಮತಿ ಕೆಳಗಿನ ಸಂದರ್ಭಗಳಲ್ಲಿ ಬೇಕಾಗುತ್ತದೆ:
- ಮಗುವಿನ ತಂದೆ ಮತ್ತು ತಾಯಿ ಇಬ್ಬರೂ ಸತ್ತುಹೋಗಿದ್ದರೆ
- ಮಗುವಿನ ತಂದೆ ಮತ್ತು ತಾಯಿ ಇಬ್ಬರೂ ಸಂಪೂರ್ಣವಾಗಿ ಲೋಕವನ್ನು ತ್ಯಜಿಸಿದ್ದರೆ
- ಮಗುವನ್ನು ತಂದೆ ಮತ್ತು ತಾಯಿ ಇಬ್ಬರೂ ತ್ಯಜಿಸಿದ್ದಾಗ
- ಸಂಬಂಧಪಟ್ಟ ನ್ಯಾಯಾಲಯವು ತಂದೆ ಮತ್ತು ತಾಯಿ ಇಬ್ಬರನ್ನೂ ಮಾನಸಿಕವಾಗಿ ಅಸ್ವಸ್ಥರೆಂದು ಘೋಷಿಸಿದ್ದರೆ
- ಮಗುವಿನ ತಂದೆ-ತಾಯಿ ಯಾರು ಎಂದು ಗೊತ್ತಿಲ್ಲದಿದ್ದಾಗ