ಭಾರತದಲ್ಲಿ ಅನೈರ್ಮಲ್ಯವಾದ ಶೌಚಾಲಯಗಳನ್ನು ಸ್ವಚ್ಛಗೊಳಿಸಲು ವ್ಯಕ್ತಿಗಳನ್ನು ಮಲ ಹೊರುವವರನ್ನಾಗಿ ಕೆಲಸಕ್ಕಿಟ್ಟುಕೊಳ್ಳುವುದಾಗಲಿ, ಅಥವಾ ರಕ್ಷಣಾ ಕವಚವಿಲ್ಲದೆ ಒಳಚರಂಡಿಗಳನ್ನು, ಸೆಪ್ಟಿಕ್ ಟ್ಯಾಂಕ್ ಗಳನ್ನು ಸ್ವಚ್ಛಗೊಳಿಸುವುದಾಗಲಿ, ಅಥವಾ ಅನೈರ್ಮಲ್ಯವಾದ ಶೌಚಾಲಗಳನ್ನು ಕಟ್ಟುವುದಾಗಲಿ ಅಕ್ರಮ ಚಟುವಟಿಕೆಗಳು.
ಮಲ ಹೊರುವ ಪದ್ಧತಿ
ಅನೈರ್ಮಲ್ಯವಾದ ಶೌಚಾಲಯಗಳು, ಒಳಚರಂಡಿಗಳು, ಮತ್ತು ಸೆಪ್ಟಿಕ್ ಟ್ಯಾಂಕ್ ಗಳನ್ನು ರಕ್ಷಣಾ ಕವಚಗಳಿಲ್ಲದೆ ಸ್ವಚ್ಛ ಮಾಡುವುದು, ಅಥವಾ ಅನೈರ್ಮಲ್ಯವಾದ ಶೌಚಾಲಯಗಳನ್ನು ಕಟ್ಟುವಂತಹ ಅಕ್ರಮ ಅಭ್ಯಾಸಗಳನ್ನು ಒಳಗೊಂಡಿಹ ಭಾರತದಲ್ಲಿನ ಮಲ ಹೊರುವ ಪದ್ಧತಿಯ ಬಗ್ಗೆ ಈ ವಿವರಣೆ ಚರ್ಚಿಸುತ್ತದೆ. ಪ್ರಾಥಮಿಕವಾಗಿ “ಮಲ ಹೊರುವವರ ಉದ್ಯೋಗ ನಿಷೇಧ ಮತ್ತು ಪುನರ್ವಸತಿ ಕಾಯಿದೆ, ೨೦೧೩”ರ ಅಡಿಯ ಕಾನೂನಿನ ಬಗ್ಗೆ ಈ ವಿವರಣೆ ಚರ್ಚಿಸುತ್ತದೆ.