ಮಕ್ಕಳ ಅಕ್ರಮ ಉದ್ಯೋಗವನ್ನು ತಡೆಗಟ್ಟಲು, ಮತ್ತು ಕಿಶೋರರ ಅನುಮತಿಸಲಾದ ಉದ್ಯೋಗ ಕಾನೂನುಬದ್ಧವಾಗಿ ನಡೆಯುತ್ತಿದೆ ಎಂದು ನೋಡಿಕೊಳ್ಳಲು ಸರ್ಕಾರ ತನಿಖಾಧಿಕಾರಿಗಳನ್ನು ನೇಮಿಸುತ್ತದೆ. ಇಂತಹ ತನಿಖಾಧಿಕಾರಿಗಳು ಅಥವಾ ಪೊಲೀಸ್ ಅಧಿಕಾರಿಗಳ ಕರ್ತವ್ಯಗಳು ಹೀಗಿವೆ:
- ೧. ಮಕ್ಕಳ ಉದ್ಯೋಗ ನಿಷೇಧವಿರುವ ಜಾಗಗಳ ನಿಯತಕಾಲಿಕವಾಗಿ ತನಿಖೆ ಮಾಡುವುದು
- ೨. ಮಕ್ಕಳು ಅಥವಾ ಕಿಶೋರರು ಕೆಲಸ ಮಾಡುತ್ತಿರುವ ಕಾರ್ಖಾನೆಗಳ ಸಾಮಯಿಕ ತನಿಖೆ ಮಾಡುವುದು
- ೩. ಕೌಟುಂಬಿಕ ಉದ್ಯಮಗಳಲ್ಲಿ ಮಕ್ಕಳ ಉದ್ಯೋಗದ ಪರಿಸ್ಥಿತಿಯ ಬಗ್ಗೆ ತಪಾಸಣೆ ಮಾಡುವುದು
- ೪. ಬಾಲ ಕಾರ್ಮಿಕ ಪದ್ಧತಿಯ ಬಗ್ಗೆ ಬರುವ ದೂರುಗಳನ್ನು ಸ್ವೀಕರಿಸುವುದು, ಮತ್ತು ಅಕ್ರಮ ಚಟುವಟಿಕೆಗಳ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸುವುದು
- ೫. ಮಗುವಿನ ವಯಸ್ಸು ೧೪ಕ್ಕಿಂತ ಹೆಚ್ಚೋ ಕಮ್ಮಿಯೋ ಎಂಬ ಅನುಮಾನವಿದ್ದಲ್ಲಿ, ವಯಸ್ಸನ್ನು ಕಂಡು ಹಿಡಿಯುವುದು
- ೬. ಉದ್ಯೋಗದಾತರು ತಮ್ಮ ಕೆಲಸದ ಸ್ಥಳದಲ್ಲಿ ಇಟ್ಟುಕೊಂಡ ದಾಖಲಾ ಪುಸ್ತಕವನ್ನು ಪರಿಶೀಲಿಸುವುದು. ಆ ಪುಸ್ತಕದಲ್ಲಿ ಕೆಳಗಿನ ವಿವರಗಳು ಇರುತ್ತವೆ:
- – ಆ ಜಾಗದಲ್ಲಿ ಕೆಲಸ ಮಾಡುತ್ತಿರುವ ಮಕ್ಕಳ ಹೆಸರು, ಜನ್ಮ ದಿನಾಂಕ, ಮತ್ತು ಜನ್ಮ ದಿನಾಂಕಕ್ಕೆ ಸಂಬಂಧ ಪಟ್ಟ ದಾಖಲೆಗಳು
- – ಕೆಲಸದ ಗಂಟೆಗಳು ಮತ್ತು ಅವಧಿ (ವಿಶ್ರಾಮದ ಗಂಟೆಗಳನ್ನು ಸೇರಿಸಿ)
- – ಮಕ್ಕಳು ಮಾಡುತ್ತಿರುವ ಕೆಲಸದ ಪ್ರಕೃತಿ
ಒಂದು ವೇಳೆ ಮಕ್ಕಳು ಕಾನೂನು ಬಾಹಿರವಾಗಿ ಇಲ್ಲಿ ಕೆಲಸ ಮಾಡುತ್ತಿದ್ದಲ್ಲಿ, ಉದ್ಯೋಗದಾತರು “ಬಾಲ ಕಾರ್ಮಿಕರ ಪುನರ್ವಸತಿ ಮತ್ತು ಕಲ್ಯಾಣ ನಿಧಿ” ಎಂಬ ನಿಧಿಗೆ ೨೦೦೦೦ ರೂಪಾಯಿಗಳ ದಂಡ ಕಟ್ಟುವಂತೆ ತನಿಖಾಧಿಕಾರಿಗಳು ನೋಡಿಕೊಳ್ಳಬೇಕು. ಈ ಹಣವನ್ನು ಮಕ್ಕಳು ವಯಸ್ಕರಾದ ಮೇಲೆ ಮರು ಪಡೆದುಕೊಳ್ಳಬಹುದು.