ಮೋಟಾರು ವಾಹನವೊಂದನ್ನು ಸಾರ್ವಜನಿಕರಿಗೆ ಅಪಾಯವಾಗುವ ವೇಗ ಅಥವಾ ಮಾದರಿಯಲ್ಲಿ ಚಲಾಯಿಸಿದರೆ ಅಥವಾ ಅಂತಹ ಚಾಲನೆಯಿಂದ ವಾಹನದಲ್ಲಿ ಪ್ರಯಾಣಿಸುತ್ತಿರುವವರಿಗೆ, ರಸ್ತೆಯನ್ನು ಬಳಸುತ್ತಿರುವ ಇನ್ನಿತರ ಸಾರ್ವಜನಿಕರಿಗೆ ಮತ್ತು ರಸ್ತೆ ಹತ್ತಿರವಿರುವ ಇನ್ನಿತರ ವ್ಯಕ್ತಿಗಳಿಗೆ ಗಾಬರಿ ಅಥವಾ ಕಳವಳಕ್ಕೆ ಕಾರಣವಾದಲ್ಲಿ, ಅಂತಹ ರೀತಿಯ ವಾಹನ ಚಾಲನೆಯನ್ನು ಅಪಾಯಕಾರೀ ವಾಹನ ಚಾಲನೆ ಎಂದು ಕರೆಯಲಾಗುತ್ತದೆ. ಅಪಾಯಕಾರೀ ವಾಹನ ಚಾಲನೆಯ ಕೆಲವು ಉದಾಹರಣೆಗಳು ಈ ಕೆಳಕಂಡಂತಿವೆ:
ಕೆಂಪು ಸಂಚಾರ ದೀಪವನ್ನು ಉಲ್ಲಂಘಿಸುವುದು.
“ಸ್ಟಾಪ್” ಸಂಚಾರ ಸೂಚನೆಯನ್ನು ಉಲ್ಲಂಘಿಸಿ ವಾಹನ ಚಲಾಯಿಸುವುದು.
ವಾಹನ ಚಾಲನೆ ಮಾಡುವ ಸಮಯದಲ್ಲಿ ಮೊಬೈಲ್ ಅಥವಾ ಕೈನಿಂದ ನಿಯಂತ್ರಿಸುವ ಮತ್ತಾವುದೇ ಉಪಕರಣಗಳ ಬಳಕೆ.
ಕಾನೂನುಬಾಹಿರವಾಗಿ ಇತರೆ ವಾಹನಗಳನ್ನು ಹಿಂದಿಕ್ಕುವುದು.
ವಾಹನ ದಟ್ಟಣೆಯ ವಿರುದ್ಧ ದಿಕ್ಕಿನಲ್ಲಿ – ಉದಾಹರಣೆಗೆ – ರಾಂಗ್ ಸೈಡಿನಲ್ಲಿ ಚಲಿಸುವುದು.
ಅಪಾಯಕಾರಿಯಾದ ವಾಹನ ಚಾಲನೆಯ ಮೊದಲ ಬಾರಿಯ ಅಪರಾಧಕ್ಕಾಗಿ ಆರು ತಿಂಗಳುಗಳಿಂದ ಒಂದು ವರ್ಷ ಅವಧಿಯ ಕಾರಾವಾಸ ಅಥವಾ ರೂ.1,000 ದಿಂದ ರೂ.5,000 ದ ವರೆಗೆ ಜುಲ್ಮಾನೆ ಅಥವಾ ಎರಡೂ ಶಿಕ್ಷೆಗಳನ್ನು ವಿಧಿಸಬಹುದು. ಪ್ರತಿ ಪುನರಾವರ್ತಿತ ಈ ಅಪರಾಧಕ್ಕೆ ಎರಡು ವರ್ಷಗಳ ಅವಧಿಯವರೆಗೆ ಕಾರಾವಾಸ ಅಥವಾ ರೂ.10,000 ಜುಲ್ಮಾನೆ ಅಥವಾ ಎರಡೂ ಶಿಕ್ಷೆಗಳನ್ನು ವಿಧಿಸಬಹುದು. . ಈ ಜುಲ್ಮಾನೆಯ ಮೊತ್ತ ರಾಜ್ಯದಿಂದ ರಾಜ್ಯಕ್ಕೆ ಬೇರೆಯಾಗಿರಬಹುದು.
ಎರಡು ರಾಜ್ಯಗಳಿಗೆ ಸಂಬಂಧಿಸಿದಂತೆ ಜುಲ್ಮಾನೆಯ ಮೊತ್ತವನ್ನು ಕೆಳಗೆ ನೀಡಲಾಗಿದೆ:
ರಾಜ್ಯ | ಅಪರಾಧದ ಪುನರಾವರ್ತನೆ | ಜುಲ್ಮಾನೆಯ ಮೊತ್ತ (ರೂ.ಗಳಲ್ಲಿ) |
ದೆಹಲಿ | ಮೊದಲನೇ ಅಪರಾಧ | 1,000-5,000 |
ಪುನರಾವರ್ತಿತ ಅಪರಾಧ | 10,000 | |
ಕರ್ನಾಟಕ | ಮೊದಲನೇ ಅಪರಾಧ | 1,000-5,000
(ವಾಹನ ಚಲಾಯಿಸುವಾಗ ಕೈಯಿಂದ ನಿಯಂತ್ರಿಸುವ ಉಪಕರಣಗಳ ಬಳಕೆಗಾಗಿ ವಿಧಿಸುವ ಜುಲ್ಮಾನೆ ಹೊರತುಪಡಿಸಿ) |
ಪುನರಾವರ್ತಿತ ಅಪರಾಧ | 10,000 |