ಭಾರತವು ವಿಶಾಲವಾದ ದೇಶವಾಗಿದ್ದು, ಐತಿಹಾಸಿಕವಾಗಿ ನೋಡಿದಾಗ, ಭೂಮಿಗೆಸಂಬಂಧಿಸಿದ ದಾಖಲೆಗಳನ್ನು ಸರಿಯಾಗಿ ದಾಖಲಿಸಿ, ಸಂಗ್ರಹಿಸಲಾಗಿಲ್ಲ. . ಇದು ಭಾರತದಲ್ಲಿ ಭೂ ವಿವಾದಗಳಿಗೆ ಕಾರಣವಾಗುವ ದೊಡ್ಡ ಅಂಶವಾಗಿದೆ.
ಭೂಮಿ ಮತ್ತು ಆಸ್ತಿ ವಿವಾದಗಳು
ಭೂಮಿ ಮತ್ತು/ಅಥವಾ ಸ್ಥಿರ ಆಸ್ತಿಗೆ ಸಂಬಂಧಿಸಿದ ವಿವಿಧ ರೀತಿಯ ವಿವಾದಗಳು ಮತ್ತು ನಿಮ್ಮ ಸ್ಥಿರ ಆಸ್ತಿಯ ಮೇಲಿನ ನಿಮ್ಮ ಹಕ್ಕುಗಳು ಸುರಕ್ಷಿತವಾಗಿವೆ ಎಂದು ಖಚಿತಪಡಿಸಿಕೊಳ್ಳಲು ನೀವು ತೆಗೆದುಕೊಳ್ಳಬಹುದಾದ ಕ್ರಮಗಳನ್ನು ಈ ವಿವರಣೆಯು ಚರ್ಚಿಸುತ್ತದೆ ಇದು ಪ್ರಾಥಮಿಕವಾಗಿ ಸಿವಿಲ್ ಪ್ರಕ್ರಿಯಾ ಸಂಹಿತೆ 1908, ಹಿಂದೂ ಉತ್ತರಾಧಿಕಾರ ಕಾಯಿದೆ 1956, ಭಾರತೀಯ ಉತ್ತರಾಧಿಕಾರ ಕಾಯಿದೆ 1925, ಇಸ್ಲಾಮಿಕ್ ವೈಯಕ್ತಿಕ ಕಾನೂನುಗಳು, ಭಾರತೀಯ ದಂಡ ಸಂಹಿತೆ 1860/ಭಾರತೀಯ ನ್ಯಾಯ ಸಂಹಿತೆ,2023, ಇಂಡಿಯನ್ ಈಸ್ಮೆಂಟ್ಸ್ ಕಾಯಿದೆ,1882, ಮತ್ತು ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆಯ ಹಕ್ಕು( ಭೂ ಸ್ವಾಧೀನ, ಪುನರ್ವಸತಿ ಮತ್ತು ಪುನರ್ವಸತಿ) ಕಾಯಿದೆ 2013ರ ಬಗ್ಗೆ ಚರ್ಚಿಸುತ್ತದೆ.