ನೀವು ಧೂಮಪಾನ ಮಾಡಲಾಗದ ಸ್ಥಳಗಳು
ರೆಸ್ಟೋರೆಂಟ್, ಥಿಯೇಟರ್, ಆರೋಗ್ಯ ಸಂಸ್ಥೆಗಳು ಅಥವಾ ಸಾರ್ವಜನಿಕ ಸಾರಿಗೆಯಂತಹ ಸಾರ್ವಜನಿಕ ಕಟ್ಟಡಗಳಲ್ಲಿ ಧೂಮಪಾನ ಮಾಡುವುದು ಅಪರಾಧವಾಗಿದೆ. ನೀವು ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವಾಗ ಸಿಕ್ಕಿಬಿದ್ದರೆ, ಪೊಲೀಸ್ ಅಧಿಕಾರಿ ನಿಮ್ಮನ್ನು ತಡೆದು ನಿಲ್ಲಿಸಬಹುದು. ಇದಕ್ಕೆ ಗರಿಷ್ಠ ಶಿಕ್ಷೆಯು ₹ 200 ದಂಡ.
ನೀವು ಧೂಮಪಾನ ಮಾಡಬಹುದಾದ ಸ್ಥಳಗಳು
ತೆರೆದ ಸ್ಥಳಗಳು
ರಸ್ತೆಗಳು ಅಥವಾ ಉದ್ಯಾನ ವನಗಳಂತಹ ಸಂಪೂರ್ಣ ತೆರೆದ ಸ್ಥಳಗಳಲ್ಲಿ ನೀವು ಧೂಮಪಾನ ಮಾಡಬಹುದು. ಆದಾಗ್ಯೂ, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಅಥವಾ ತೆರೆದ ಸಭಾಂಗಣಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಕಾನೂನುಬಾಹಿರವಾಗಿದೆ.
ಧೂಮಪಾನ ಪ್ರದೇಶಗಳು
ಗೊತ್ತುಪಡಿಸಿದ ಧೂಮಪಾನ ಪ್ರದೇಶಗಳಲ್ಲಿ ನೀವು ಧೂಮಪಾನ ಮಾಡಬಹುದು. ಈ ಕಾನೂನಿನ ಅಡಿಯಲ್ಲಿ, ಹೋಟೆಲ್ ಗಳು (30 ಕ್ಕಿಂತ ಹೆಚ್ಚು ಕೊಠಡಿಗಳನ್ನು ಹೊಂದಿದ ), ವಿಮಾನ ನಿಲ್ದಾಣಗಳು ಅಥವಾ ರೆಸ್ಟೋರೆಂಟ್ಗಳು (30 ಕ್ಕಿಂತ ಹೆಚ್ಚು ಜನರು ಕುಳಿತುಕೊಳ್ಳಬಹುದಾದ) ಧೂಮಪಾನಿಗಳು ಧೂಮಪಾನ ಮಾಡಬಹುದಾದ ಪ್ರತ್ಯೇಕ ಧೂಮಪಾನ ಪ್ರದೇಶವನ್ನು ರಚಿಸಬಹುದು.
