ತಂಬಾಕು ಉತ್ಪನ್ನಗಳ ಪ್ಯಾಕೇಜಿಂಗ್
ಕಾನೂನಿನಡಿಯಲ್ಲಿ, ಸಿಗರೇಟ್‌ಗಳ ಪ್ರತಿಯೊಂದು ಪ್ಯಾಕೇಜ್ ಅಥವಾ ಯಾವುದೇ ಇತರ ತಂಬಾಕು ಉತ್ಪನ್ನವು ಈ ಕೆಳಗಿನ ವಿವರಗಳನ್ನು ಒಳಗೊಂಡಿರಬೇಕು 28:
ಉತ್ಪನ್ನದ ಹೆಸರು
ತಯಾರಕ, ಆಮದುದಾರ ಅಥವಾ ಪ್ಯಾಕರ್ ಹೆಸರು ಮತ್ತು ವಿಳಾಸ
ಉತ್ಪನ್ನದ ಮೂಲ (ಆಮದು ಸಂದರ್ಭದಲ್ಲಿ)
ಉತ್ಪನ್ನದ ಪ್ರಮಾಣ
ತಯಾರಿಕೆಯ ದಿನಾಂಕ
ಕಾಲಕಾಲಕ್ಕೆ ಸರ್ಕಾರವು ಈ ಪಟ್ಟಿಗೆ ಹೆಚ್ಚಿನ ವಿವರಗಳನ್ನು ಸೇರಿಸಬಹುದು.
ತಂಬಾಕು ಉತ್ಪನ್ನಗಳ ಮೇಲೆ ಎಚ್ಚರಿಕೆ ಲೇಬಲ್‌ಗಳು
ಸಿಗರೇಟಿನ ಪ್ರತಿಯೊಂದು ಪ್ಯಾಕೇಜಿಗೆ ಅಥವಾ ಯಾವುದೇ ಇತರ ತಂಬಾಕು ಉತ್ಪನ್ನವು ಆರೋಗ್ಯ ಎಚ್ಚರಿಕೆಯನ್ನು ಹೊಂದುವುದು ಕಡ್ಡಾಯ 29 . ಅಂತಹ ಎಚ್ಚರಿಕೆಯು ಕೆಲವು ನಿಯಮಾವಳಿಗಳನ್ನು ಅನುಸರಿಸಬೇಕು, ಉದಾಹರಣೆಗೆ:
ತಂಬಾಕು ಧೂಮಪಾನ ಮತ್ತು ಹೊಗೆರಹಿತ ಉತ್ಪನ್ನಗಳ ರೂಪಗಳೆರಡಕ್ಕೂ, “ತಂಬಾಕು ನೋವು ತುಂಬಿದ ಸಾವಿಗೆ ಕಾರಣವಾಗುತ್ತದೆ” ಎಂಬ ಎಚ್ಚರಿಕೆ ಮತ್ತು “ಇಂದು 1800-11-2356ಗೆ ಕರೆ ಮಾಡಿ, ಕ್ವಿಟ್ ಮಾಡಿ” ಎಂಬ ಪದಗಳನ್ನು ಪ್ಯಾಕೇಜ್ ನಲ್ಲಿ ಮುದ್ರಿಸಬೇಕು. 30 ಇದು ಸೆಪ್ಟೆಂಬರ್, 2020 ರಿಂದ ಜಾರಿಗೊಳಿಸಬಹುದಾಗಿದೆ.
ಎಚ್ಚರಿಕೆಯು ಪ್ಯಾಕೇಜ್ ನ ದೊಡ್ಡ ಭಾಗದ ಕನಿಷ್ಠ 85 ಪ್ರತಿಶತವನ್ನು ಒಳಗೊಂಡಿರಬೇಕು, ಇದರಲ್ಲಿ 60 ಪ್ರತಿಶತ ಚಿತ್ರ ಮತ್ತು 25 ಪ್ರತಿಶತ ಪಠ್ಯವಾಗಿದೆ.31
ಆರೋಗ್ಯದ ಮೇಲೆ ತಂಬಾಕಿನ ದುಷ್ಪರಿಣಾಮಗಳನ್ನು ಎಚ್ಚರಿಕೆಯ ಕೆಳಗೆ ಸಚಿತ್ರವಾಗಿ ನೀಡಬೇಕು. ಉದಾಹರಣೆಗೆ, ಬಾಯಿ ಕ್ಯಾನ್ಸರ್ ನ ಚಿತ್ರ.32
ಎಚ್ಚರಿಕೆಯು ಇಂಗ್ಲಿಷ್, ಹಿಂದಿ ಮತ್ತು ಅಲ್ಲಿನ ಇತರ ಪ್ರಾದೇಶಿಕ ಭಾಷೆಗಳಲ್ಲಿ ಕಾಣಿಸಿಕೊಳ್ಳಬೇಕು.33
ಎಚ್ಚರಿಕೆ ಲೇಬಲ್ ಇಲ್ಲದೆ ತಂಬಾಕು ಮಾರಾಟ
ಅಗತ್ಯ ಎಚ್ಚರಿಕೆಗಳಿಲ್ಲದೆ ನೀವು ತಂಬಾಕು ಉತ್ಪನ್ನಗಳನ್ನು ಉತ್ಪಾದಿಸಿದರೆ ಅಥವಾ ಮಾರಾಟ ಮಾಡಿದರೆ, ನಿಮ್ಮನ್ನು ಈ ಕೆಳಗಿನ ರೀತಿಯಲ್ಲಿ ಶಿಕ್ಷಿಸಬಹುದು:
ಉತ್ಪಾದನೆಯಲ್ಲಿ ತೊಡಗಿದ್ದರೆ, ನಿಮಗೆ ಮೊದಲ ಅಪರಾಧಕ್ಕೆ 2 ವರ್ಷಗಳವರೆಗೆ ಜೈಲು ಮತ್ತು/ಅಥವಾ ₹ 5,000 ವರೆಗಿನ ದಂಡ. ಪ್ರತಿ ನಂತರದ ಅಪರಾಧಕ್ಕೆ ನಿಮಗೆ 5 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಮತ್ತು ₹ 10,000 ದಂಡ 34 ವಿಧಿಸಬಹುದು.
ಮಾರಾಟದಲ್ಲಿ ತೊಡಗಿದ್ದರೆ, ನಿಮಗೆ ಮೊದಲ ಅಪರಾಧದಕ್ಕೆ 1 ವರ್ಷದವರೆಗೆ ಜೈಲು ಮತ್ತು/ಅಥವಾ ₹1,000 ವರೆಗಿನ ದಂಡವನ್ನು ವಿಧಿಸಬಹುದು. ಪ್ರತಿ ನಂತರದ ಅಪರಾಧಕ್ಕೆ, ನಿಮಗೆ 2 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹3,000 ದಂಡವನ್ನು ವಿಧಿಸಬಹುದು 35 .
