ಎಲೆಕ್ಟ್ರಾನಿಕ್ ಸಿಗರೇಟ್, ಅಥವಾ ಇ-ಸಿಗರೆಟ್, ಸೇದಲು ಅನುವಾಗುವಂತೆ ಏರೋಸಾಲ್ ಅನ್ನು ರಚಿಸಲು ಯಾವುದೇ ವಸ್ತುವನ್ನು (ನಿಕೋಟಿನ್ ನಿಂದ ಕೂಡಿದ ಅಥವಾ ಯಾವುದೇ ಪರಿಮಳವನ್ನು ಹೊಂದಿರುವ) ಬಿಸಿ ಮಾಡುವ ಎಲೆಕ್ಟ್ರಾನಿಕ್ ಸಾಧನವನ್ನು ಸೂಚಿಸುತ್ತದೆ. ಇ-ಸಿಗರೇಟ್‌ಗಳು ಭಾರತದಲ್ಲಿ 2019 ರವರೆಗೆ ಅನಿಯಂತ್ರಿತವಾಗಿತ್ತು. ಆದರೆ, ನಂತರ ಅವುಗಳನ್ನು ಕಾನೂನುಬಾಹಿರವೆಂದು ಘೋಷಿಸಲಾಯಿತು.
ಕಾನೂನಿನ ಅಡಿಯಲ್ಲಿ, ಈ ಕೆಳಗಿನವುಗಳನ್ನು ನಿಷೇಧಿಸಲಾಗಿದೆ:
ಇ-ಸಿಗರೇಟ್‌ಗಳ ಉತ್ಪಾದನೆ/ತಯಾರಿಕೆ
ನೀವು ಇ-ಸಿಗರೇಟ್‌ಗಳನ್ನು ಉತ್ಪಾದಿಸುವುದು ಅಥವಾ ತಯಾರಿಸುವುದು ಕಾನೂನುಬಾಹಿರವಾಗಿದೆ 36. ಈ ತಪ್ಪಿಗೆ ಒಂದು ವರ್ಷದವರೆಗೆ ಜೈಲು ಶಿಕ್ಷೆಯು ಮತ್ತು/ಅಥವಾ ₹1 ಲಕ್ಷ ದಂಡ. ಹಾಗು, ಪ್ರತಿ ನಂತರದ ಅಪರಾಧಕ್ಕೆ, ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹ 5 ಲಕ್ಷ ದಂಡ 37.
ಇ-ಸಿಗರೇಟ್‌ಗಳ ಆಮದು/ರಫ್ತು/ಸಾರಿಗೆ
ನೀವು ಇ-ಸಿಗರೇಟ್‌ಗಳನ್ನು ರಫ್ತು ಮಾಡುವುದು, ಆಮದು ಮಾಡುವುದು ಅಥವಾ ಸಾಗಿಸುವುದು ಕಾನೂನುಬಾಹಿರವಾಗಿದೆ. 38 ನೀವು ಈ ತಪ್ಪು ಮಾಡಿದರೆ, ಒಂದು ವರ್ಷದವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಹಾಗು ನೀವು ₹ 1 ಲಕ್ಷ ವರೆಗಿನ ದಂಡವನ್ನು ಸಹ ಪಾವತಿಸಬೇಕಾಗಬಹುದು. ಹಾಗೂ, ಪ್ರತಿ ನಂತರದ ಅಪರಾಧಕ್ಕೆ, ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹ 5 ಲಕ್ಷಗಳವರೆಗೆ ದಂಡ 39.
ಇ-ಸಿಗರೇಟ್‌ಗಳ ಮಾರಾಟ/ವಿತರಣೆ
ನೀವು ಇ-ಸಿಗರೇಟ್‌ಗಳನ್ನು ಮಾರಾಟ ಮಾಡುವುದು ಅಥವಾ ವಿತರಿಸುವುದು ಕಾನೂನುಬಾಹಿರವಾಗಿದೆ 40 . ನೀವು ಈ ತಪ್ಪು ಮಾಡಿದರೆ, ಒಂದು ವರ್ಷದವರೆಗೆ ಜೈಲು ಶಿಕ್ಷೆ ಹಾಗು ನೀವು ₹ 1 ಲಕ್ಷ ವರೆಗಿನ ದಂಡವನ್ನು ಸಹ ಪಾವತಿಸಬೇಕಾಗಬಹುದು. ಮತ್ತು, ಪ್ರತಿ ನಂತರದ ಅಪರಾಧಕ್ಕೆ, 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹ 5 ಲಕ್ಷಗಳವರೆಗೆ ದಂಡ 41 .
ಇ-ಸಿಗರೇಟ್‌ಗಳ ಜಾಹೀರಾತು
ನೀವು ಇ-ಸಿಗರೇಟ್‌ಗಳನ್ನು ಜಾಹೀರಾತು ಮಾಡುವುದು ಕಾನೂನುಬಾಹಿರವಾಗಿದೆ 42. ನೀವು ಇದನ್ನು ಅನುಸರಿಸದಿದ್ದರೆ, ಒಂದು ವರ್ಷದವರೆಗೆ ಜೈಲು ಶಿಕ್ಷೆ ಹಾಗು ₹ 1 ಲಕ್ಷ ವರೆಗಿನ ದಂಡವನ್ನು ಸಹ ಪಾವತಿಸಬೇಕಾಗಬಹುದು. ಮತ್ತು, ಪ್ರತಿ ನಂತರದ ಅಪರಾಧಕ್ಕೆ, 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹ 5 ಲಕ್ಷಗಳವರೆಗೆ ದಂಡ 43.
ಇ-ಸಿಗರೇಟ್‌ಗಳ ಸಂಗ್ರಹಣೆ
ಇ-ಸಿಗರೇಟ್‌ಗಳ ಶೇಖರಣೆಗಾಗಿ ನಿಮ್ಮ ಯಾವುದೇ ಆಸ್ತಿಯನ್ನು ಬಳಸಲು ನೀವು ಅನುಮತಿಸಬಾರದು. ನೀವು ಹೊಂದಿರುವ ಯಾವುದೇ ಆಸ್ತಿಯನ್ನು ಇ-ಸಿಗರೆಟ್‌ಗಳ ಶೇಖರಣೆಯಾಗಿ ಬಳಸುತ್ತಿದ್ದರೆ, ನೀವು ಸ್ಟಾಕ್ ನ ಪಟ್ಟಿಯನ್ನು ಮಾಡಬೇಕು. ಹಾಗು, ನೀವು ಕನಿಷ್ಟ ಸಬ್-ಇನ್‌ಸ್ಪೆಕ್ಟರ್ ದರ್ಜೆಯಲ್ಲಿರುವ ಪೊಲೀಸ್ ಅಧಿಕಾರಿಗೆ, ಹತ್ತಿರದ ಪೊಲೀಸ್ ಠಾಣೆಯಲ್ಲಿ ಸಲ್ಲಿಸಬೇಕು.44
ನೀವು ಇದನ್ನು ಅನುಸರಿಸದಿದ್ದರೆ, ಆರು ತಿಂಗಳವರೆಗೆ ಜೈಲು ಮತ್ತು/ಅಥವಾ ₹ 50,000 ವರೆಗೆ ದಂಡವನ್ನು ವಿಧಿಸಬಹುದಾಗಿದೆ.45
ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಕುರಿತು ಇಲ್ಲಿ ಇನ್ನಷ್ಟು ಓದಿ.
