ಈ ಕೆಳಗೆ ನೀಡಿರುವ ಸಂಧರ್ಭಗಳಲ್ಲಿ ನಿಮ್ಮ ಉಯಿಲನ್ನು ಕಾರ್ಯಗತಗೊಳಿಸುವ ಅಡ್ಮಿನಿಸ್ಟ್ರೇಟರ್ ಅನ್ನು ಅಥವಾ ಕಾರ್ಯ ನಿರ್ವಾಹಕರನ್ನು ನೇಮಿಸುವ ಅಧಿಕಾರವನ್ನು ನ್ಯಾಯಾಲಯ ಹೊಂದಿದೆ.ಅವು:
ನಿಮ್ಮ ಉಯಿಲಿನಲ್ಲಿ ನೀವು ಉಯಿಲಿನ ಕಾರ್ಯ ನಿರ್ವಾಹಕರನ್ನು ನೇಮಿಸಿರದಿದ್ದಾಗ.
ನೀವು ನೇಮಿಸಿದ ಉಯಿಲಿನ ಕಾರ್ಯ ನಿರ್ವಾಹಕರು ಕಾರ್ಯನಿರ್ವಹಿಸಲು ಅಸಮರ್ಥರಾಗಿದ್ದಾರೆ.
ನೀವು ನೇಮಿಸಿದ ಉಯಿಲಿನ ಕಾರ್ಯ ನಿರ್ವಾಹಕರು ಕಾರ್ಯನಿರ್ವಹಿಸಲು ನಿರಾಕರಿಸಿದರೆ.
ನೀವು ಉಯಿಲಿನ ಫಲಾನುಭವಿಯಾಗಿದ್ದರೆ, ಮತ್ತು ಆ ಉಯಿಲು ಕಾರ್ಯನಿರ್ವಾಹಕರನ್ನು ಹೊಂದಿರದಿದ್ದರೆ ಅಥವಾ ಹೆಸರಿಸಿದ ವ್ಯಕ್ತಿಯು ಕಾರ್ಯಗಳನ್ನು ನಿರ್ವಹಿಸಲು ಬಯಸದಿದ್ದರೆ, ನೀವು ಉಯಿಲಿನ ಕಾರ್ಯ ನಿರ್ವಾಹಕರ ನೇಮಕಾತಿಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು.
ಒಬ್ಬ ವ್ಯಕ್ತಿಯು ತನ್ನ ಉಯಿಲಿನಲ್ಲಿ ಕಾರ್ಯನಿರ್ವಾಹಕನನ್ನು ಹೆಸರಿಸದೆ ಮರಣಹೊಂದಿದಾಗ, ಉಯಿಲಿನಲ್ಲಿರುವ ಫಲಾನುಭವಿಗಳಲ್ಲಿ ಒಬ್ಬರು ಉಯಿಲಿನ ಕಾರ್ಯ ನಿರ್ವಾಹಕ್ಕೆ ಆಡಳಿತಾಧಿಕಾರ ಪತ್ರವನ್ನು ಪಡೆಯಲು ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ಪ್ರಕ್ರಿಯೆಯು ಪ್ರೊಬೇಟ್ ಪತ್ರ ಪಡೆಯುವ ಪ್ರಕ್ರಿಯೆಯನ್ನೇ ಹೋಲುತ್ತದೆ.