ಎಚ್ಚರಿಕೆ: ಈ ವಿವರಣೆಯು ದೈಹಿಕ ಹಿಂಸೆ ಮತ್ತು ಲೈಂಗಿಕ ಹಿಂಸಾಚಾರದ ಮಾಹಿತಿಯನ್ನು ಒಳಗೊಂಡಿರುವುದರಿಂದ, ಕೆಲವು ಓದುಗರು ಇದರಿಂದ ತೊಂದರೆಯಾಗಬಹುದು.
ಅತ್ಯಾಚಾರವು ಪುರುಷನು ಮಹಿಳೆಯೊಂದಿಗೆ ಅವಳ ಇಚ್ಛೆಗೆ ವಿರುದ್ಧವಾಗಿ ಅಥವಾ ಅವಳ ಒಪ್ಪಿಗೆಯಿಲ್ಲದೆ ಲೈಂಗಿಕ ಸಂಭೋಗವನ್ನು ನಡೆಸಿದಾಗ ಸಂಭವಿಸುವ ಅಪರಾಧವಾಗಿದೆ.
ಒಬ್ಬ ಪುರುಷನು ಸಮ್ಮತಿಸದ ಮಹಿಳೆಯ ಮೇಲೆ ಈ ಕೃತ್ಯಗಳನ್ನು ಎಸಗಿದರೆ ಅದು ಅತ್ಯಾಚಾರವಾಗುತ್ತದೆ:
- ಮಹಿಳೆಯ ಯೋನಿ, ಬಾಯಿ, ಮೂತ್ರನಾಳ, ಅಥವಾ ಗುದದ್ವಾರದೊಳಗೆ ಅವನ ಶಿಶ್ನವನ್ನು ನುಗ್ಗಿಸುವುದು ಅಥವಾ ಅವನೊಂದಿಗೆ ಅಥವಾ ಇನ್ನೊಬ್ಬ ವ್ಯಕ್ತಿಯೊಂದಿಗೆ ಇದನ್ನು ಮಾಡಲು ಅವಳನ್ನು ಒತ್ತಾಯಿಸುವುದು, ಅಥವಾ
- ಮಹಿಳೆಯ ಯೋನಿ, ಬಾಯಿ ,ಮೂತ್ರನಾಳ, ಅಥವಾ ಗುದದ್ವಾರಕ್ಕೆ, ಯಾವುದೇ ವಸ್ತುವನ್ನು ಸೇರಿಸುವುದು ಅಥವಾ ಅವನೊಂದಿಗೆ ಅಥವಾ ಇತರ ಯಾವುದೇ ವ್ಯಕ್ತಿಯೊಂದಿಗೆ ಹಾಗೆ ಮಾಡುವಂತೆ ಒತ್ತಾಯಿಸುವುದು; ಅಥವಾ
- ಮಹಿಳೆಯ ಯೋನಿ, ಮೂತ್ರನಾಳ, ಗುದದ್ವಾರ, ಅಥವಾ ದೇಹದ ಯಾವುದೇ ಭಾಗಕ್ಕೆ ನುಗ್ಗುವಂತೆ ಮಹಿಳೆಯ ದೇಹದ ಯಾವುದೇ ಭಾಗವನ್ನು ಕುಶಲತೆಯಿಂದ ಬಳಸುವುದು/ ಪರಿವರ್ತಿಸುವುದು ಅಥವಾ ಅವನೊಂದಿಗೆ ಅಥವಾ ಇತರ ಯಾವುದೇ ವ್ಯಕ್ತಿಯೊಂದಿಗೆ ಹಾಗೆ ಮಾಡುವಂತೆ ಮಾಡುವುದು; ಅಥವಾ
- ಅವನ ಬಾಯಿಯನ್ನು ಮಹಿಳೆಯ ಯೋನಿ, ಗುದದ್ವಾರ ಅಥವಾ ಮೂತ್ರನಾಳಕ್ಕೆ ತಾಕಿಸುವುದು, ಅಥವಾ ಅವಳನ್ನು ಅವನ ಅಥವಾ ಇತರ ಯಾವುದೇ ವ್ಯಕ್ತಿಯೊಂದಿಗೆ ಹೀಗೆ ಮಾಡುವಂತೆ ಒತ್ತಾಯಿಸುವುದು.
ವೈದ್ಯಕೀಯ ವಿಧಾನ ಅಥವಾ ಪ್ರಕ್ರಿಯೆಯನ್ನು ಅತ್ಯಾಚಾರ ಎಂದು ಪರಿಗಣಿಸಲಾಗುವುದಿಲ್ಲ. ಉದಾಹರಣೆಗೆ, ವೈದ್ಯರು ವೈದ್ಯಕೀಯ ಪ್ರಕ್ರಿಯೆಯ ಭಾಗವಾಗಿ ರೋಗಿಯ ಖಾಸಗಿ ಭಾಗಗಳನ್ನು ಪರೀಕ್ಷಿಸಿದರೆ, ಅದು ಅತ್ಯಾಚಾರವಲ್ಲ.