ಧಾರ್ಮಿಕೇತರ ಕಾನೂನಿನಡಿ ದತ್ತು ಸ್ವೀಕಾರ:
ಧಾರ್ಮಿಕೇತರ ದತ್ತು ಸ್ವೀಕಾರ ಕಾನೂನಿನಡಿ, ಕೆಳಕಂಡ ಮಕ್ಕಳನ್ನು ದತ್ತು ಪಡೆಯಬಹುದು:
೧. ಮಕ್ಕಳ ಕಲ್ಯಾಣ ಸಮಿತಿ ಈ ಕೆಳಗಿನ ಮಕ್ಕಳನ್ನು “ಕಾನೂನುಬದ್ಧವಾಗಿ ದತ್ತು ಪಡೆಯಲು ಯೋಗ್ಯ” ಎಂದು ಘೋಷಿಸಿದಾಗ:
- ಜೈವಿಕ ತಂದೆ-ತಾಯಿ, ದತ್ತು ತಂದೆ-ತಾಯಿ, ಅಥವಾ ಕಾನೂನಾತ್ಮಕ ಪೋಷಕರು ಇರದ ಅನಾಥ ಮಗು
- ತ್ಯಜಿಸಿದ ಮಗು: ಜೈವಿಕ ತಂದೆ-ತಾಯಿ ಮಗುವನ್ನು ತ್ಯಜಿಸುವುದು – ಬಿಟ್ಟುಕೊಟ್ಟ ಮಗು: ದತ್ತು ಸ್ವೀಕಾರ ಅಧಿಕಾರಿಗಳಿಗೆ ತಂದೆ
- ತಾಯಂದಿರು ಮಗುವನ್ನು ಬಿಟ್ಟುಕೊಡುವುದು
೨. ನೆಂಟರ ಮಗು
೩. ಸಂಗಾತಿಯ ಮಗು: ಮಲ ತಂದೆ/ತಾಯಿ ದತ್ತು ಪಡೆಯಲು, ಜೈವಿಕ ತಂದೆ-ತಾಯಿ ಬಿಟ್ಟುಕೊಟ್ಟ ಮಗು
ಹಿಂದೂ ಕಾನೂನಿನಡಿ ದತ್ತು ಸ್ವೀಕಾರ:
ಹಿಂದೂ ದತ್ತು ಸ್ವೀಕಾರ ಕಾನೂನಿನ ಪ್ರಕಾರ, ಕೆಳಗಿನ ಮಾನದಂಡಗಳನ್ನು ಪೂರೈಸುವ ಮಕ್ಕಳನ್ನು ಮಾತ್ರ ದತ್ತು ಪಡೆಯಬಹುದು (ಕೆಲವು ಪದ್ಧತಿಗಳು ಮತ್ತು ಬಳಕೆಗಳ ವಿನಾಯಿತಿಗಳೊಂದಿಗೆ):
- ಅವರಿಗೆ ಮದುವೆಯಾಗಿಲ್ಲ
- ಅವರು ೧೫ ವರ್ಷಗಳೊಳಗಿದ್ದಾರೆ
- ಅವರು ಹಿಂದೂ ಆಗಿದ್ದಾರೆ
- ಅವರನ್ನು ಈಗಾಗಲೇ ದತ್ತು ಪಡೆದಿಲ್ಲ