ಮದುವೆಯ ಸರಿಪಡಿಸಲಾಗದ ವಿಘಟನೆಯು ಯಾರೊಬ್ಬರ ತಪ್ಪಿಲ್ಲದೆ ಒಬ್ಬ ಅಥವಾ ಇಬ್ಬರೂ ಸಂಗಾತಿಗಳು ಒಟ್ಟಿಗೆ ಇರಲು ಸಾಧ್ಯವಾಗದ ಪರಿಸ್ಥಿತಿಯನ್ನು ಸೂಚಿಸುತ್ತದೆ. ಮದುವೆಯ ಸಂಸ್ಥೆಯನ್ನು ರಕ್ಷಿಸುವ ಸಲುವಾಗಿ ಹಿಂದೂ ಕಾನೂನಿನ ಅಡಿಯಲ್ಲಿ ವಿಚ್ಛೇದನಕ್ಕೆ ಇದು ಇನ್ನೂ ಆಧಾರವಾಗಿಲ್ಲ. ಆದಾಗ್ಯೂ, ಕೆಲವು ನ್ಯಾಯಾಲಯಗಳು ವಿಚ್ಛೇದನಕ್ಕೆ ಕಾರಣವೆಂದು ಒಪ್ಪಿಕೊಂಡಿವೆ.

ಹಿಂದೂ ವಿಚ್ಛೇದನವನ್ನು ಯಾವಾಗ ಪಡೆಯಬಹುದು

ಕೊನೆಯ ಅಪ್ಡೇಟ್ Sep 14, 2022

ಹಿಂದೂ ವೈವಾಹಕ ಕಾನೂನಿನಡಿ ಗುರುತಿಸಲಾದ ಆಧಾರಗಳ ಮೇಲಷ್ಟೇ ನೀವು ವಿಚ್ಛೇದನವನ್ನು ಪಡೆಯಬಹುದು. ಈ ಕಾನೂನಾತ್ಮಕ ಆಧಾರಗಳ ವ್ಯಾಪ್ತಿ ನಿಮ್ಮ ಸಂಗಾತಿಯ ಕಿರುಕುಳದಿಂದ ಹಿಡಿದು ಅವರ ಮಾನಸಿಕ ರೋಗದ ವರೆಗೆ ಹಬ್ಬಿದೆ.

ಭಾರತದಲ್ಲಿ, ವಿಚ್ಛೇದನ ಪಡೆಯಲು ಕಾನೂನು ನಿರ್ದಿಷ್ಟವಾದ ಆಧಾರಗಳನ್ನು ನೀಡಿದೆ:

ಕಿರುಕುಳ:

  • ನಿಮ್ಮ ಸಂಗಾತಿ ನಿಮ್ಮೊಡನೆ ಕ್ರೂರವಾಗಿ ವರ್ತಿಸಿದಾಗ
  • ನಿಮ್ಮ ಸಂಗಾತಿ ಬೇರೆಯವರ ಜೊತೆ ಲೈಂಗಿಕ ಸಂಭೋಗ ಮಾಡಿದಾಗ
  • ನಿಮ್ಮ ಸಂಗಾತಿ ನಿಮ್ಮನ್ನು ತೊರೆದಾಗ

ಅನಾರೋಗ್ಯ:

  • ನಿಮ್ಮ ಸಂಗಾತಿ ನಿಮಗೆ ಹಬ್ಬಬಹುದಾದ ಲೈಂಗಿಕ ರೋಗದಿಂದ ಬಳಲುತ್ತಿದ್ದಾಗ
  • ನಿಮ್ಮ ಸಂಗಾತಿಗೆ ಮಾನಸಿಕ ರೋಗವಿದ್ದಾಗ

ನಿಮ್ಮ ಸಂಗಾತಿಯ ಗೈರುಹಾಜರಿ:

  • ನಿಮ್ಮ ಸಂಗಾತಿಯು ನಿಮ್ಮಿಂದ ದೂರವಾದಾಗ
  • ನಿಮ್ಮ ಸಂಗಾತಿಯು ಕನಿಷ್ಠ ೭ ವರ್ಷದ ಹಿಂದೆ ಸತ್ತು ಹೋಗಿದ್ದಾರೆ ಎಂದು ನೀವು ಭಾವಿಸಿದ್ದಾಗ
  • ನಿಮ್ಮ ಸಂಗಾತಿಯು ವಸ್ತು ಪ್ರಪಂಚವನ್ನು ತ್ಯಜಿಸಿ ಯಾವುದೇ ಒಂದು ಧಾರ್ಮಿಕ ಸಂಪ್ರದಾಯವನ್ನು ಸೇರಿದಾಗ
  • ತಾತ್ಕಾಲಿಕ ಬೇರ್ಪಡೆಯ ನಿರ್ಣಯವಾದ ಒಂದು ವರ್ಷವಾದ ಮೇಲೆಯೂ ನೀವು ಹಾಗು ನಿಮ್ಮ ಸಂಗಾತಿ ಒಂದುಗೂಡದಿದ್ದಾಗ
  • ನಿಮ್ಮ ವೈವಾಹಿಕ ಬಾಧ್ಯತೆಗಳನ್ನು ಪುನರಾರಂಭಿಸಿ ಎಂದು ನ್ಯಾಯಾಲಯವು ಆದೇಶಿಸಿದ ಒಂದು ವರ್ಷದ ನಂತರವೂ ನೀವು ಈ ಆದೇಶವನ್ನು ಪಾಲಿಸದಿದ್ದಾಗ

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.