ಸ್ಥಿರ ಆಸ್ತಿಯ ವಿಷಯಕ್ಕೆ ಬಂದಾಗ, ಉತ್ತರಾಧಿಕಾರವು ವ್ಯಕ್ತಿಯ ಮರಣದ ನಂತರ ಆಸ್ತಿಯ ಮಾಲೀಕತ್ವದ ವರ್ಗಾವಣೆಯನ್ನು ಸೂಚಿಸುತ್ತದೆ. ಒಬ್ಬರ ಮರಣದ ನಂತರ ಆಸ್ತಿ ಮಾಲೀಕತ್ವದ ಸುಗಮ ವರ್ಗಾವಣೆಯನ್ನು ಖಚಿತಪಡಿಸಿಕೊಳ್ಳಲು ಸೂಕ್ತವಾದ ಮಾರ್ಗವು ಉಯಿಲಿನ ಮೂಲಕ ನೆಡೆಯುತ್ತದೆ1.
ಆದಾಗ್ಯೂ, ಯಾವುದೇ ಉಯಿಲು/ವಿಲ್ಇಲ್ಲದಿದ್ದರೆ, ಅಂತಹ ಆಸ್ತಿಯ ಹಂಚಿಕೆಯನ್ನು ನಿರ್ಧರಿಸಲು ಉತ್ತರಾಧಿಕಾರದ ಕಾನೂನು ಅನ್ವಯಿಸುತ್ತದೆ. ಭಾರತದಲ್ಲಿ, ವೈಯಕ್ತಿಕ ಕಾನೂನುಗಳು, ಸಾಂಪ್ರದಾಯಿಕ ಕಾನೂನುಗಳು ಮತ್ತು ಶಾಸಕಾಂಗ ಕಾನೂನುಗಳು ಆಸ್ತಿಯ ಉತ್ತರಾಧಿಕಾರದ ಕಾನೂನನ್ನು ನಿಯಂತ್ರಿಸುತ್ತವೆ. ಹಿಂದೂ ಉತ್ತರಾಧಿಕಾರ ಕಾಯಿದೆ 1956 ಮತ್ತು ಇಸ್ಲಾಮಿಕ್ ವೈಯಕ್ತಿಕ ಕಾನೂನುಗಳು ಇದಕ್ಕೆ ಸಂಬಂಧಪಟ್ಟ ಕಾನೂನುಗಳು
ಹಿಂದೂ ಉತ್ತರಾಧಿಕಾರದ ಕಾನೂನಿನಡಿಯಲ್ಲಿ, ಒಬ್ಬ ವ್ಯಕ್ತಿ ತನ್ನ ಸ್ವಯಾರ್ಜಿತ ಆಸ್ತಿಯನ್ನು ತನ್ನ ಇಚ್ಛೆಯಂತೆ ಬಳಸಬಹುದು, ಆದರೆ ಪಿತ್ರಾರ್ಜಿತ ಆಸ್ತಿಯ ವರ್ಗಾವಣೆಗೆ ನಿರ್ಬಂಧಗಳಿವೆ. ಕಾನೂನು ಕೆಲವು ಕುಟುಂಬ ಸದಸ್ಯರಿಗೆ ಪೂರ್ವಜರ ಆಸ್ತಿಯ ಮೇಲೆ ಜನ್ಮಸಿದ್ಧ ಹಕ್ಕನ್ನು ನೀಡುತ್ತದೆ. ಹಿಂದೂ ಪಿತ್ರಾರ್ಜಿತ ಕಾನೂನಿನ ಅಡಿಯಲ್ಲಿ ಸಹೋದರರು ಮತ್ತು ಸಹೋದರಿಯರು ತಮ್ಮ ತಾಯಿ ಅಥವಾ ತಂದೆಯ ಆಸ್ತಿಯಲ್ಲಿ ಸಮಾನ ಪಾಲುಗಳಿಗೆ ಅರ್ಹರಾಗಿದ್ದಾರೆ. ಇಲ್ಲಿ, ‘ಮಗ’ ಮತ್ತು ‘ಮಗಳು’ ಎಂಬ ಪದಗಳು ದತ್ತು ಪಡೆದ ಪುತ್ರರು ಮತ್ತು ಹೆಣ್ಣು ಮಕ್ಕಳನ್ನು ಒಳಗೊಂಡಿರುತ್ತವೆ, ಆದರೆ ಮಲಮಕ್ಕಳನ್ನಲ್ಲ.
ಸ್ಥಿರ ಆಸ್ತಿಯ ಮಾಲೀಕ ವಿಲ್ ಮಾಡದೆ ಇದ್ದಲ್ಲಿ, ಅಂತಹ ಆಸ್ತಿ ಬಗ್ಗೆ ಉತ್ತರಾಧಿಕಾರಿಗಳಿಗೆ ವಿವಾದವಿದ್ದರೆ , ಅವರು ನ್ಯಾಯಾಲಯದ ಮುಂದೆ ದಾವೆ ಹೂಡಬಹುದು.
ಮುಸ್ಲಿಂ ಉತ್ತರಾಧಿಕಾರದ ಕಾನೂನಿನ ಸಂದರ್ಭದಲ್ಲಿ, ಅವರ ಉಪ-ಪಂಗಡದ ( ಅಂದರೆ, ಸುನ್ನಿ ಅಥವಾ ಶಿಯಾ) ಮೇಲೆ ಅವರಿಗೆ ಅನ್ವಯವಾಗುವ ವೈಯಕ್ತಿಕ ಕಾನೂನುಗಳು ಅವಲಂಬಿತವಾಗಿರುತ್ತದೆ. ಮುಸ್ಲಿಂ ಕಾನೂನುಗಳನ್ನು ಕ್ರೋಡೀಕರಿಸಲಾಗಿಲ್ಲ, ಅಂದರೆ ಅವುಗಳನ್ನು ಸೂಚಿಸುವ ಯಾವುದೇ ಕಾಯಿದೆ ಇಲ್ಲ. ಹನಾಫಿ ಕಾನೂನನ್ನು ಅನುಸರಿಸುವ ಸುನ್ನಿಗಳಿಗೆ, ವೈಯಕ್ತಿಕ ಕಾನೂನು ಅಂತ್ಯಕ್ರಿಯೆಯ ವೆಚ್ಚಗಳು, ಮನೆಕೆಲಸದವರ ಬಾಕಿ ವೇತನ ಮತ್ತು ಸಾಲಗಳನ್ನು ನಿರ್ವಹಿಸಿದ ನಂತರ ಉಳಿದಿರುವ ಎಸ್ಟೇಟಿನ ಗರಿಷ್ಠ ಮೂರನೇ ಒಂದು ಭಾಗಕ್ಕೆ ಪರಂಪರೆಯನ್ನು ನಿರ್ಬಂಧಿಸುತ್ತದೆ.
- ಉಯಿಲಿನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ನಮ್ಮ ವಿವರಣೆಯನ್ನು ಓದಿ -https://kannada.nyaaya.org/legal-explainers/money-and-property/inheritance/will/ [↩]