ಬಾಲ್ಯ ವಿವಾಹ ನೆರವೇರಲಿದೆ, ಅಥವಾ ನೆರವೇರಿಸಲು ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ನಂಬಲರ್ಹ ಮಾಹಿತಿ ನ್ಯಾಯಾಲಯಕ್ಕೆ ಸಿಕ್ಕರೆ, ಕೂಡಲೇ ಸಂಬಂಧಪಟ್ಟ ವ್ಯಕ್ತಿಗಳ ವಿರುಧ್ಧ ಅದು ನಿಷೇಧಾಜ್ಞೆಯನ್ನು ಹೊರಡಿಸಬಲ್ಲದು.
ಆರೋಪಿಗಳು ಈ ನಿಷೇಧಾಜ್ಞೆಯನ್ನು ರದ್ದುಪಡಿಸಲು ಅಥವಾ ಬದಲಾಯಿಸಲು ಕೋರ್ಟಿನಲ್ಲಿ ಅರ್ಜಿ ಸಲ್ಲಿಸಬಹುದು. ನ್ಯಾಯಾಲಯವು ಖುದ್ದಾಗಿಯೂ ಕೂಡ ಆಜ್ಞೆಯನ್ನು ಹಿಂತೆಗೆದುಕೊಳ್ಳಬಹುದು ಅಥವಾ ಬದಲಾಯಿಸಬಹುದು.
ಇಂತಹ ನಿಷೇಧಾಜ್ಞೆ ಹೊರಡಿಸಿದ ಬಳಿಕ ಯಾವುದೇ ಬಾಲ್ಯ ವಿವಾಹ ನೆರವೇರಿದಲ್ಲಿ ಅದು ಕಾನೂನಿನ ಕಣ್ಣಿನಲ್ಲಿ ಅಮಾನ್ಯವಾಗಿರುತ್ತದೆ.
ನ್ಯಾಯಾಲಯ ಹಸ್ತಕ್ಷೇಪ ಮಾಡಬಲ್ಲ ಸನ್ನಿವೇಶಗಳು:
ನ್ಯಾಯಾಲಯವು ಬಾಲ್ಯ ವಿವಾಹಗಳಲ್ಲಿ ಈ ಕೆಳಗಿನ ಸಂದರ್ಭಗಳಲ್ಲಿ ಹಸ್ತಕ್ಷೇಪ ಮಾಡಬಹುದು:
- ಸ್ವಯಂ ಪ್ರೇರಿತವಾಗಿ
- ಬಾಲ್ಯ ವಿವಾಹ ನಿಷೇಧಾಧಿಕಾರಗಳು ಅಥವಾ ಇನ್ನೋರ್ವ ಸರ್ಕಾರೇತರ ಸಂಸ್ಥೆಯ ದೂರಿನ ಆಧಾರದ ಮೇಲೆ
- ಅಕ್ಷಯ ತೃತಿಯಾಗಳಂತಹ ಮದುವೆಗೆ ಮಂಗಳಕರ ದಿನಗಳಂದು, ನ್ಯಾಯಾಲಯವೇ ಬಾಲ್ಯ ವಿವಾಹ ನಿಷೇಧಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಬಹುದು. ಈ ಸಂದರ್ಭಗಳಲ್ಲಿ, ಬಾಲ್ಯ ವಿವಾಹಗಳನ್ನು ತಡೆಗಟ್ಟಲು, ಬಾಲ್ಯ ವಿವಾಹ ನಿಷೇಧಾಧಿಕಾರಿಗಳ ಎಲ್ಲ ಅಧಿಕಾರಗಳೂ ಸಹ ನ್ಯಾಯಾಲಯಕ್ಕೆ ಇರುತ್ತವೆ.
- ನಡೆಯಲಿರುವ ಬಾಲ್ಯ ವಿವಾಹದ ಬಗ್ಗೆ ಯಾವುದೇ ವ್ಯಕ್ತಿಯ ಬಳಿ ವೈಯಕ್ತಿಕ ಮಾಹಿತಿ ಇದ್ದಾಗ
ನ್ಯಾಯಾಲಯವು ಹೊರಡಿಸುವ ಸೂಚನೆ:
ನಿಷೇಧಾಜ್ಞೆಯನ್ನು ಜಾರಿಗೆ ತರುವ ಮುನ್ನ, ನ್ಯಾಯಾಲಯವು ಆರೋಪಿಗಳ ವಿರುಧ್ಧ ಸೂಚನೆಯನ್ನು ಹೊರಡಿಸಬೇಕಾಗುತ್ತದೆ. ಇದು ಅವರಿಗೆ ಪ್ರತಿರಕ್ಷೆ ಮಾಡಿಕೊಳ್ಳಲು ಅವಕಾಶ ನೀಡುವುದಕ್ಕಾಗಿ. ಆದರೆ, ತುರ್ತು ಸಂದರ್ಭಗಳಲ್ಲಿ, ಆರೋಪಿಗಳಿಗೆ ಇಂತಹ ಸೂಚನೆ ನೀಡದೆ ನ್ಯಾಯಾಲಯಗಳು ಬಾಲ್ಯ ವಿವಾಹದ ವಿರುಧ್ಧ ಮಧ್ಯಂತರ ಆದೇಶವನ್ನು ಹೊರಡಿಸಬಹುದು.
ಶಿಕ್ಷೆ:
ನಿಮ್ಮ ವಿರುಧ್ಧ ನ್ಯಾಯಾಲಯವು ತಾತ್ಕಾಲಿಕ ಆದೇಶವನ್ನು ಹೊರಡಿಸಿದ್ದಲ್ಲಿ, ಮತ್ತು ನೀವು ಅದನ್ನು ಅನುಸರಿಸದಿದ್ದಲ್ಲಿ, ನಿಮಗೆ ಗರಿಷ್ಟ ೨ ವರ್ಷಗಳ ಸೆರೆಮನೆ ವಾಸ ಹಾಗು/ಅಥವಾ ಗರಿಷ್ಟ ೧ ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಲಾಗುವುದು.