ಚಾಲನಾ ಪರವಾನಗಿ (DL) ಎನ್ನುವುದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಅಡಿಯಲ್ಲಿ ಪ್ರತಿ ರಾಜ್ಯದ ಪ್ರಾದೇಶಿಕ ಸಾರಿಗೆ ಕಚೇರಿ (RTO) ಅಥವಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ (RTA) ಮೂಲಕ ಕಾರ್ಡ್ ರೂಪದಲ್ಲಿ ನೀಡಲಾದ ಅಧಿಕೃತ ದಾಖಲೆಯಾಗಿದೆ. ಸಾರ್ವಜನಿಕ ರಸ್ತೆಯಲ್ಲಿ ಮೋಟಾರ್‌ಸೈಕಲ್, ಕಾರು ಇತ್ಯಾದಿಗಳಂತಹ ಒಂದು ಅಥವಾ ಹೆಚ್ಚಿನ ರೀತಿಯ ವಾಹನಗಳನ್ನು ಓಡಿಸಲು ಇದು ನಿಮಗೆ ಅನುಮತಿ ನೀಡುತ್ತದೆ.
ಹೊಸ ಚಾಲನಾ ಪರವಾನಗಿ
ಕಲಿಕಾ ಪರವಾನಗಿಯನ್ನು ನೀಡಿದ 30 ದಿನಗಳ ನಂತರ ಮತ್ತು 180 ದಿನಗಳ (6 ತಿಂಗಳು)((ವಿಭಾಗ 14 (1), ಮೋಟಾರು ವಾಹನಗಳ ಕಾಯಿದೆ, 1988.)) ಒಳಗಾಗಿ ನೀವು ಹೊಸ ಚಾಲನಾ ಪರವಾನಗಿಗಾಗಿ ನೋಂದಾಯಿಸಿಕೊಳ್ಳಬಹುದು. ಹೊಸ ಚಾಲನಾ ಪರವಾನಗಿಯನ್ನು ಹೇಗೆ ಪಡೆಯುವುದು ಎಂಬುದನ್ನು ತಿಳಿಯಲು, ಇಲ್ಲಿ ಓದಿ.
- ಹೆಸರು: ನೀವು ಗುರುತಿಸುವ ಲಿಂಗವನ್ನು ಪ್ರತಿಬಿಂಬಿಸಲು ನಿಮ್ಮ ಹೆಸರನ್ನು ನೀವು ಬದಲಾಯಿಸಿದ್ದರೆ, ನೀವು ಅರ್ಜಿ ನಮೂನೆಯಲ್ಲಿ ನಿಮ್ಮ ಹೊಸ ಹೆಸರನ್ನು ಭರ್ತಿ ಮಾಡಬಹುದು. ನೀವು ಕೇಂದ್ರ/ರಾಜ್ಯ ಗೆಜೆಟ್‌ನಲ್ಲಿ ನಿಮ್ಮ ಬದಲಾದ ಹೆಸರಿನ ನಕಲನ್ನು ಮತ್ತು RTO/RTA ಅಧಿಕಾರಿಗಳಿಗೆ ಅಗತ್ಯವಿದ್ದರೆ ನಿಮ್ಮ ಹೊಸ ಹೆಸರನ್ನು ಗುರುತಿಸುವ ಇತರ ಗುರುತಿನ ಪುರಾವೆಗಳ ಪ್ರತಿಯನ್ನು ಸಹಾ ಒಯ್ಯಬೇಕು.
- ಲಿಂಗ ವಿವರಗಳು: ಹೊಸ ಚಾಲನಾ ಪರವಾನಗಿಯನ್ನು ಪಡೆದುಕೊಳ್ಳುವಾಗ, ನೀವು ಲಿಂಗಕ್ಕಾಗಿ ಮೂರು ಆಯ್ಕೆಗಳನ್ನು ಹೊಂದಿರಬಹುದು ಅದು “ಪುರುಷ”, “ಸ್ತ್ರೀ” ಮತ್ತು “ತೃತೀಯ ಲಿಂಗ”. ಚಾಲನಾ ಪರವಾನಗಿಯನ್ನು ರಾಜ್ಯವಾರು ನಿಯಂತ್ರಿಸಲಾಗಿರುವುದರಿಂದ, ಕೆಲವೊಮ್ಮೆ ತೃತೀಯ ಲಿಂಗ ಅನ್ನು ಆಯ್ಕೆ ಮಾಡುವ ಅವಕಾಶ ಇಲ್ಲದಿರಬಹುದು. ಅಂತಹ ಸಂದರ್ಭಗಳಲ್ಲಿ, ನೀವು ಹೀಗೆ ಮಾಡಬೇಕು:
- RTO/RTA ಅನ್ನು ಸಂಪರ್ಕಿಸಿ ಮತ್ತು ಮುಂದಿನ ಕ್ರಮದ ಬಗ್ಗೆ ವಿಚಾರಿಸಿ
- ನೀವು ಗುರುತಿಸುವ ಲಿಂಗ, ನಿಮ್ಮ ಹೊಸ ಹೆಸರು ಇತ್ಯಾದಿ ವಿವರಗಳನ್ನು ಹೊಂದಿರುವ ಶಪಥ ಪತ್ರದಂತಹಾ ಗುರುತಿನ ಪುರಾವೆಯನ್ನು ಒಯ್ಯಿರಿ.
- ವಕೀಲರು, NGO ಗಳು ಇತ್ಯಾದಿಗಳ ಸಹಾಯವನ್ನು ಪಡೆಯಿರಿ.
ಚಾಲನಾ ಪರವಾನಗಿ ವಿವರಗಳನ್ನು ನವೀಕರಿಸುವುದು / ಬದಲಾಯಿಸುವುದು / ನವೀಕರಿಸುವುದು
ನಿಮ್ಮ ಚಾಲನಾ ಪರವಾನಗಿಯ ಮಾಹಿತಿಯನ್ನು ನೀವು ನವೀಕರಿಸಬಹುದು ಮತ್ತು ಹಾಗೆ ಮಾಡುವುದರಿಂದ ನೀವು ನವೀಕರಿಸಿದ ಮಾಹಿತಿಯನ್ನು ಹೊಂದಿರುವ ಹೊಸದಾಗಿ ನೀಡಲಾದ ಕಾರ್ಡ್ ಅನ್ನು ಸ್ವೀಕರಿಸುತ್ತೀರಿ. ಚಾಲನಾ ಪರವಾನಗಿ ವಿವರಗಳನ್ನು ಹೇಗೆ ನವೀಕರಿಸುವುದು ಎಂಬುದನ್ನು ವಿವರವಾಗಿ ತಿಳಿಯಲು ಇಲ್ಲಿ ಓದಿ ಮತ್ತು ನಿಮ್ಮ ಚಾಲನಾ ಪರವಾನಗಿಯನ್ನು ಹೇಗೆ ನವೀಕರಿಸುವುದು ಎಂಬುದನ್ನು ತಿಳಿಯಲು ಇಲ್ಲಿ ಓದಿ.
- ನಿಮ್ಮ ಹೆಸರನ್ನು ಬದಲಾಯಿಸುವುದು: ನೀವು ಗುರುತಿಸುವ ಲಿಂಗವನ್ನು ಪ್ರತಿಬಿಂಬಿಸಲು ನಿಮ್ಮ ಹೆಸರನ್ನು ನವೀಕರಿಸಲು ನೀವು ಅರ್ಜಿ ನಮೂನೆಯಲ್ಲಿ ನಿಮ್ಮ ಹೊಸ ಹೆಸರನ್ನು ಭರ್ತಿ ಮಾಡಬಹುದು. ಕೇಂದ್ರ/ರಾಜ್ಯ ಗೆಜೆಟ್‌ನಲ್ಲಿ ನಿಮ್ಮ ಬದಲಾದ ಹೆಸರಿನ ಪ್ರತಿಯನ್ನು ಮತ್ತು ನಿಮ್ಮ ಹೊಸ ಹೆಸರನ್ನು ಗುರುತಿಸುವ ಇತರ ಗುರುತಿನ ಪುರಾವೆಯ ಪ್ರತಿಯನ್ನು ನೀವು ಪಡೆಯಬಹುದು.
ಲಿಂಗ ವಿವರಗಳನ್ನು ಬದಲಾಯಿಸುವುದು: ಚಾಲನಾ ಪರವಾನಗಿಯನ್ನು ರಾಜ್ಯವಾರು ನಿಯಂತ್ರಿಸಲಾಗಿರುವುದರಿಂದ, ಕೆಲವೊಮ್ಮೆ ತೃತೀಯಲಿಂಗಿಯನ್ನು ಆಯ್ಕೆ ಮಾಡುವ ಅವಕಾಶವು ಇಲ್ಲದಿರಬಹುದು. ಅಂತಹ ಸಂದರ್ಭಗಳಲ್ಲಿ, ನೀವು ಹೀಗೆ ಮಾಡಬೇಕು:
- RTO/RTA ಅನ್ನು ಸಂಪರ್ಕಿಸಿ ಮತ್ತು ಮುಂದಿನ ಕ್ರಮದ ಬಗ್ಗೆ ವಿಚಾರಿಸಿ
- ನೀವು ಗುರುತಿಸುವ ಲಿಂಗ, ನಿಮ್ಮ ಹೊಸ ಹೆಸರು ಇತ್ಯಾದಿ ವಿವರಗಳನ್ನು ಹೊಂದಿರುವ ಶಪಥ ಪತ್ರದಂತಹಾ ಗುರುತಿನ ಪುರಾವೆಯನ್ನು ಒಯ್ಯಿರಿ.
- ವಕೀಲರು, NGO ಗಳು ಇತ್ಯಾದಿಗಳ ಸಹಾಯವನ್ನು ಪಡೆಯಿರಿ
RTO/RTA ಅಧಿಕಾರಿಗಳು ನಿಮ್ಮ ಲಿಂಗ ಗುರುತಿನ ಪುರಾವೆ ಅಥವಾ ಹೆಸರು ಬದಲಾವಣೆಯ ಪುರಾವೆಯನ್ನು ಕೇಳಬಹುದು, ಆದರೆ ಅವರು ನಿಮ್ಮನ್ನು ಯಾವುದೇ ರೀತಿಯ ಕಿರುಕುಳ ಅಥವಾ ಲಿಂಗ ಪರಿಶೀಲನೆಗೆ ಸ್ಥಳದಲ್ಲೇ ಒಳಪಡಿಸಲು ಸಾಧ್ಯವಿಲ್ಲ. ನೀವು ಯಾವುದೇ ಕಿರುಕುಳ ಅಥವಾ ತಾರತಮ್ಯವನ್ನು ಎದುರಿಸಿದರೆ, ನೀವು ಡ್ರೈವಿಂಗ್ ಲೈಸೆನ್ಸ್ ಅಧಿಕಾರಿಗಳಿಗೆ ದೂರು ನೀಡಬೇಕು. ಈ ಅಧಿಕಾರಿಗಳು ಸ್ಪಂದಿಸದಿದ್ದರೆ, ಪ್ರಕ್ರಿಯೆಯನ್ನು ಸುಲಭಗೊಳಿಸಲು ನೀವು ವಕೀಲರು, NGO ಇತ್ಯಾದಿಗಳ ಸಹಾಯವನ್ನು ಪಡೆಯಬಹುದು ಮತ್ತು ಪೊಲೀಸರಿಗೆ ದೂರು ನೀಡುವ ಮೂಲಕ ಕ್ರಮ ಕೈಗೊಳ್ಳಬಹುದು.
- ನಿಯಮ, 15 (1), ಕೇಂದ್ರ ಮೋಟಾರು ವಾಹನ ನಿಯಮಗಳು, 1989. [↩]
