LGBTQ+ ವ್ಯಕ್ತಿಗಳಿಗೆ ಆಧಾರ್ ಕಾರ್ಡ್

ಕೊನೆಯ ಅಪ್ಡೇಟ್ Jan 7, 2026

ಆಧಾರ್ ಎಂಬುದು 12-ಅಂಕಿಯ ಗುರುತಿನ ಸಂಖ್ಯೆಯಾಗಿದ್ದು 1, ಇದು ಪ್ರತಿಯೊಬ್ಬ ವ್ಯಕ್ತಿಗೆ ನಿರ್ದಿಷ್ಟವಾಗಿದೆ 2, ವ್ಯಕ್ತಿಗತ ಮಾಹಿತಿ ಮತ್ತು ಬಯೋಮೆಟ್ರಿಕ್ ಮಾಹಿತಿಯ ಆಧಾರದ ಮೇಲೆ ಪರಿಶೀಲನೆ ಪ್ರಕ್ರಿಯೆಯನ್ನು ಪೂರೈಸಿದ ನಂತರ ಇದನ್ನು ಭಾರತದ ನಿವಾಸಿಗಳಿಗೆ ವಿಶಿಷ್ಟ ಗುರುತಿನ ಪ್ರಾಧಿಕಾರದ (UIDAI) ಮೂಲಕ ನೀಡಲಾಗುತ್ತದೆ.3 ಹೆಸರು, ಹುಟ್ಟಿದ ದಿನಾಂಕ, ವಿಳಾಸ, ಇತ್ಯಾದಿಗಳಂತಹ ನಿಮ್ಮ ವ್ಯಕ್ತಿಗತ ವಿವರಗಳೊಂದಿಗೆ ಕಾರ್ಡ್‌ ನಲ್ಲಿರುವ ಆಧಾರ್ ಸಂಖ್ಯೆಯನ್ನು ನಿಮಗೆ ನಿಯೋಜಿಸಲಾಗುತ್ತದೆ. ಇದು ಸಾಮಾನ್ಯವಾಗಿ ನಿಮ್ಮ ಶಾಶ್ವತ ವಿಳಾಸವಿರುವ ರಾಜ್ಯ ಭಾಷೆಯಲ್ಲಿ ಮತ್ತು ಇಂಗ್ಲಿಷ್ ಅಲ್ಲಿ ಇರುತ್ತದೆ.

ಆಧಾರ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವಾಗ ಅಥವಾ ನವೀಕರಿಸುವಾಗ ನೀವು ಹೊಂದಿರುವ ಕೆಲವು ಪ್ರಮುಖ ಹಕ್ಕುಗಳನ್ನು ಕೆಳಗೆ ನೀಡಲಾಗಿದೆ.

ಹೊಸ ಆಧಾರ್ ಕಾರ್ಡ್‌ನಲ್ಲಿ ವಿವರಗಳು

 ಹೊಸ ಆಧಾರ್ ಕಾರ್ಡ್ ಪಡೆಯುವ ಪ್ರಕ್ರಿಯೆಗಾಗಿ ಆಧಾರ್ ನೋಂದಣಿ ಕೇಂದ್ರಕ್ಕೆ ಖುದ್ದಾಗಿ ಹೋಗಬೇಕಾಗುತ್ತದೆ ಮತ್ತು ಅದನ್ನು ಆನ್‌ಲೈನ್‌ ನಲ್ಲಿ ಮಾಡಲಾಗುವುದಿಲ್ಲ. ಇದು ಉಚಿತ  ಪ್ರಕ್ರಿಯೆಯಾಗಿದ್ದು, ಹೊಸ ಆಧಾರ್ ಕಾರ್ಡ್ ಅನ್ನು ಹೇಗೆ ಪಡೆಯುವುದು ಎಂಬುದನ್ನು ತಿಳಿಯಲು, ಇಲ್ಲಿ ಓದಿ.

  • ಹೆಸರು: ನೀವು ಗುರುತಿಸುವ ಲಿಂಗವನ್ನು ಪ್ರತಿಬಿಂಬಿಸಲು ನಿಮ್ಮ ಹೆಸರನ್ನು ನೀವು ಬದಲಾಯಿಸಿದ್ದರೆ, ದಾಖಲಾತಿ ಅರ್ಜಿಯಲ್ಲಿ ನಿಮ್ಮ ಹೊಸ ಹೆಸರನ್ನು ನೀವು ಭರ್ತಿ ಮಾಡಬಹುದು. ಕೇಂದ್ರ/ರಾಜ್ಯ ಗೆಜೆಟ್‌ನಲ್ಲಿ ನಿಮ್ಮ ಬದಲಾದ ಹೆಸರಿನ ಪ್ರತಿಯ ಅಗತ್ಯವಿದ್ದರೆ ನಿಮ್ಮ ಹೊಸ ಹೆಸರನ್ನು ಗುರುತಿಸುವ ಇತರ ಐಡಿ ಪುರಾವೆಗಳ ಪ್ರತಿಯನ್ನು ನೀವು ಒಯ್ಯಬೇಕು.
  • ಲಿಂಗ ವಿವರಗಳು: ಹೊಸ ಆಧಾರ್ ಕಾರ್ಡ್ ಅನ್ನು ಪಡೆದುಕೊಳ್ಳುವಾಗ, ನೀವು ಲಿಂಗಕ್ಕೆ ಮೂರು ಆಯ್ಕೆಗಳನ್ನು ಹೊಂದಿದ್ದೀರಿ ಅದು “ಪುರುಷ”, “ಸ್ತ್ರೀ” ಮತ್ತು “ತೃತೀಯಲಿಂಗಿ” (ಮೂರನೇ ಲಿಂಗ). ಈ ಆಯ್ಕೆಯು ಭಾರತದಾದ್ಯಂತ ಇರುವ ಎಲ್ಲಾ ದಾಖಲಾತಿ ಕೇಂದ್ರಗಳಲ್ಲಿ ಮತ್ತು ಆಧಾರ್ ದಾಖಲಾತಿ ಅರ್ಜಿಯಲ್ಲಿ ನಿಮಗೆ ಲಭ್ಯವಿದೆ.

 ಆಧಾರ್ ವಿವರಗಳನ್ನು ನವೀಕರಿಸುವುದು / ಬದಲಾಯಿಸುವುದು

 ಹತ್ತಿರದ ಆಧಾರ್ ದಾಖಲಾತಿ ಕೇಂದ್ರಕ್ಕೆ ಖುದ್ದಾಗಿ ಹೋಗಿ ‘ಆಧಾರ್ ಡೇಟಾ ಅಪ್‌ಡೇಟ್/ತಿದ್ದುಪಡಿಗಾಗಿ ಅರ್ಜಿಯನ್ನು’ ಕೊಡುವ ಮೂಲಕ ನಿಮ್ಮ ವ್ಯಕ್ತಿಗತ  ಮಾಹಿತಿ ಅಥವಾ ಹೆಸರು, ಲಿಂಗ, ಬೆರಳಚ್ಚುಗಳು ಇತ್ಯಾದಿಗಳಂತಹ ನಿಮ್ಮ ಬಯೋಮೆಟ್ರಿಕ್ ಮಾಹಿತಿಯನ್ನು ನೀವು ನವೀಕರಿಸಬಹುದು. ಆಧಾರ್ ವಿವರಗಳನ್ನು ಹೇಗೆ ನವೀಕರಿಸುವುದು ಎಂಬುದನ್ನು ಅರ್ಥಮಾಡಿಕೊಳ್ಳಲು, ಇಲ್ಲಿ ಓದಿ.

  • ನಿಮ್ಮ ಹೆಸರನ್ನು ಬದಲಾಯಿಸುವುದು: ನೀವು ಗುರುತಿಸುವ ಲಿಂಗವನ್ನು ಪ್ರತಿಬಿಂಬಿಸಲು ನಿಮ್ಮ ಹೆಸರನ್ನು ನವೀಕರಿಸಲು ನೀವು ಬಯಸಿದರೆ, ದಾಖಲಾತಿ  ಆರ್ಜಿಯಲ್ಲಿ ನಿಮ್ಮ ಹೊಸ ಹೆಸರನ್ನು ನೀವು ಭರ್ತಿ ಮಾಡಬಹುದು. ಕೇಂದ್ರ/ರಾಜ್ಯ ಗೆಜೆಟ್‌ನಲ್ಲಿ ನಿಮ್ಮ ಬದಲಾದ ಹೆಸರಿನ ಪ್ರತಿಯನ್ನು ಮತ್ತು ನಿಮ್ಮ ಹೊಸ ಹೆಸರನ್ನು ಗುರುತಿಸುವ , ಇತರ ಗುರುತಿನ ಪುರಾವೆಗಳ ನಕಲನ್ನು ನೀವು ಹೊಂದಿರಬೇಕು (ಅದು ನಿಮ್ಮ ಬಳಿ ಇದ್ದಾರೆ).
  •  ಲಿಂಗ ವಿವರಗಳನ್ನು ಬದಲಾಯಿಸುವುದು: ನಿಮ್ಮ ಲಿಂಗ ವಿವರವನ್ನು ನವೀಕರಿಸಲು ನೀವು ಬಯಸಿದರೆ, “ಪುರುಷ”, “ಸ್ತ್ರೀ” ಮತ್ತು “ತೃತೀಯಲಿಂಗಿ” ಎಂಬ ಮೂರು ಆಯ್ಕೆಗಳಿಂದ ನೀವು ಗುರುತಿಸಬಹುದು. ಈ ಆಯ್ಕೆಯು ಭಾರತದಾದ್ಯಂತ ಎಲ್ಲಾ ದಾಖಲಾತಿ ಕೇಂದ್ರಗಳಲ್ಲಿ ಮತ್ತು ಪ್ರತಿ ಆಧಾರ್ ಅಪ್‌ಡೇಟ್  ಆರ್ಜಿಯಲ್ಲಿಯೂ ನಿಮಗೆ ಲಭ್ಯವಿದೆ.

ದಾಖಲಾತಿ ಕೇಂದ್ರದಲ್ಲಿರುವ ಅಧಿಕಾರಿಗಳು ನಿಮ್ಮನ್ನು ಲಿಂಗ ಗುರುತಿನ ಪುರಾವೆ ಅಥವಾ ಹೆಸರು ಬದಲಾವಣೆಯ ಪುರಾವೆಗಳನ್ನು ಕೇಳಬಹುದು, ಆದರೆ ಅವರು ನಿಮ್ಮನ್ನು ಯಾವುದೇ ರೀತಿಯ ಕಿರುಕುಳ ಅಥವಾ ಲಿಂಗ ಪರಿಶೀಲನೆಗೆ ಸ್ಥಳದಲ್ಲೇ ಒಳಪಡಿಸಲು ಸಾಧ್ಯವಿಲ್ಲ. ನೀವು ಯಾವುದೇ ಕಿರುಕುಳ ಅಥವಾ ತಾರತಮ್ಯವನ್ನು ಎದುರಿಸಿದರೆ, ನೀವು ಆಧಾರ್ ಅಧಿಕಾರಿಗಳಿಗೆ ದೂರು ಸಲ್ಲಿಸಬೇಕು. ಈ ಅಧಿಕಾರಿಗಳು ಸ್ಪಂದಿಸದಿದ್ದರೆ ನೀವು ಪ್ರಕ್ರಿಯೆಯನ್ನು ಸುಲಭಗೊಳಿಸಲು ವಕೀಲರು, NGO ಗಳು ಇತ್ಯಾದಿಗಳ ಸಹಾಯವನ್ನು ಪಡೆಯಬಹುದು ಮತ್ತು ಪೊಲೀಸರಿಗೆ ದೂರು ನೀಡುವ ಮೂಲಕ ಕ್ರಮ ಕೈಗೊಳ್ಳಬಹುದು.

1.ವಿಭಾಗ 2(a), ಆಧಾರ್ (ಹಣಕಾಸು ಮತ್ತು ಇತರ ಉದ್ದೇಶಿತ ವಿತರಣೆ. ಸಬ್ಸಿಡಿಗಳು, ಪ್ರಯೋಜನಗಳು ಮತ್ತು ಸೇವೆಗಳು) ಕಾಯಿದೆ, 2016. []

  1. ವಿಭಾಗ 4(1), ಆಧಾರ್ (ಹಣಕಾಸು ಮತ್ತು ಇತರ ಉದ್ದೇಶಿತ ವಿತರಣೆ. ಸಬ್ಸಿಡಿಗಳು, ಪ್ರಯೋಜನಗಳು ಮತ್ತು ಸೇವೆಗಳು) ಕಾಯಿದೆ, 2016. []

3.ಸೆಕ್ಷನ್ 3(3), ಆಧಾರ್ (ಹಣಕಾಸು ಮತ್ತು ಇತರ ಉದ್ದೇಶಿತ ವಿತರಣೆ. ಸಬ್ಸಿಡಿಗಳು, ಪ್ರಯೋಜನಗಳು ಮತ್ತು ಸೇವೆಗಳು) ಕಾಯಿದೆ, 2016. []

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.