LGBTQ+ ವ್ಯಕ್ತಿಗಳಿಗೆ ರೇಷನ್ ಕಾರ್ಡ್

ಕೊನೆಯ ಅಪ್ಡೇಟ್ Jan 7, 2026

ಸರ್ಕಾರ ಸ್ಥಾಪಿಸಿರುವ ಅಂಗಡಿಗಳಿಂದ ಕಡಿಮೆ ವೆಚ್ಚದಲ್ಲಿ  ಎಂದರೆ ಸಬ್ಸಿಡಿ ದರದಲ್ಲಿ ಅಕ್ಕಿ, ಧಾನ್ಯಗಳು ಇತ್ಯಾದಿ ಅಗತ್ಯ ವಸ್ತುಗಳನ್ನು ಪಡೆಯಲು ನೀವು ಬಯಸಿದಾಗ ಪಡಿತರ ಚೀಟಿಗಳು ಸಹಕಾರಿಯಾಗಿವೆ . ಪಡಿತರ ಚೀಟಿಗಳನ್ನು ಸರ್ಕಾರದ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಭಾಗವಾಗಿ ಪರಿಚಯಿಸಲಾಗಿದೆ ಮತ್ತು ಇದು ಪ್ರಮುಖ ಗುರುತಿನ ಪುರಾವೆಯಾಗಿದೆ. ಇದನ್ನು ಜನರ ಆರ್ಥಿಕ ಸ್ಥಿತಿಯನ್ನು ಅವಲಂಬಿಸಿ ಅವರಿಗೆ ನೀಡಲಾಗುತ್ತದೆ, ಆದ್ದರಿಂದ ಕೆಲವು ಜನರಿಗೆ APL (ಬಡತನ ರೇಖೆಯ ಮೇಲೆ) ಅಥವಾ BPL (ಬಡತನ ರೇಖೆಯ ಕೆಳಗೆ) ಪಡಿತರ ಚೀಟಿಯನ್ನು ನೀಡಬಹುದು.

ಪಡಿತರ ಚೀಟಿಗಳನ್ನು ರಾಜ್ಯ ಸರ್ಕಾರಗಳು ನೀಡುವುದರಿಂದ, ಅವುಗಳನ್ನು ಪಡೆಯುವ ಕಾರ್ಯವಿಧಾನಗಳು ಸಹ ರಾಜ್ಯದ ನಿಯಮಗಳ ಮೇಲೆ ಅವಲಂಬಿತವಾಗಿದೆ. ಕಾನೂನಿನ ಅಡಿಯಲ್ಲಿ, 18 ವರ್ಷಕ್ಕಿಂತ ಮೇಲ್ಪಟ್ಟ ಕುಟುಂಬದ ಹಿರಿಯ ಮಹಿಳೆಗೆ ಪಡಿತರ ಚೀಟಿಗಳನ್ನು ನೀಡಲಾಗುತ್ತದೆ ಮತ್ತು ಈ ಮಹಿಳೆಯನ್ನು ‘ಮನೆಯ ಮುಖ್ಯಸ್ಥೆ’ ಎಂದು ಪರಿಗಣಿಸಲಾಗುತ್ತದೆ. ಮಹಿಳೆ ಇಲ್ಲದಿದ್ದರೆ, ಹಿರಿಯ ಪುರುಷನಿಗೆ ಪಡಿತರ ಚೀಟಿ ಸಿಗುತ್ತದೆ. ಈಗ ಕಾನೂನಿನ ಪ್ರಕಾರ, ತೃತೀಯಲಿಂಗಿ ಮಹಿಳೆಯರೂ ಮನೆಯ ಮುಖ್ಯಸ್ಥರಾಗಬಹುದು.1

ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವಾಗ ಅಥವಾ ನವೀಕರಿಸುವಾಗ ನೀವು ಹೊಂದಿರುವ ಕೆಲವು ಪ್ರಮುಖ ಹಕ್ಕುಗಳನ್ನು ಈ ಕೆಳಗೆ ನೀಡಲಾಗಿದೆ.

ಹೊಸ ಪಡಿತರ ಚೀಟಿ

 ನೀವು ಯಾವುದೇ ಸರ್ಕಲ್ ಆಫೀಸ್‌ನಿಂದ ಪಡೆಯಬಹುದಾದ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು ಅಥವಾ ನಿಮ್ಮ ರಾಜ್ಯ ಸರ್ಕಾರದ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕು. ನೀವು ಇಲ್ಲಿ ಎಲ್ಲಾ ರಾಜ್ಯಗಳಿಗೆ ಸಂಬಂಧಿತ ವೆಬ್‌ಸೈಟ್‌ ಪೋರ್ಟಲ್‌ಗಳನ್ನು ಪ್ರವೇಶಿಸಬಹುದು. ಹೊಸ ಪಡಿತರ ಚೀಟಿಯನ್ನು ಹೇಗೆ ಪಡೆಯುವುದು ಎಂಬುದನ್ನು ತಿಳಿಯಲು, ಇಲ್ಲಿ ಓದಿ.

  •  ಹೆಸರು: ನೀವು ಗುರುತಿಸುವ ಲಿಂಗವನ್ನು ಪ್ರತಿಬಿಂಬಿಸಲು ನಿಮ್ಮ ಹೆಸರನ್ನು ಬದಲಾಯಿಸಿದ್ದರೆ, ನೀವು ಅರ್ಜಿ ನಮೂನೆಯಲ್ಲಿ ನಿಮ್ಮ ಹೊಸ ಹೆಸರನ್ನು ಭರ್ತಿ ಮಾಡಬಹುದು. ಕೇಂದ್ರ/ರಾಜ್ಯ ಗೆಜೆಟ್‌ನಲ್ಲಿ ನಿಮ್ಮ ಬದಲಾದ ಹೆಸರಿನ ನಕಲನ್ನು ಮತ್ತು ಸರ್ಕಲ್ ಆಫೀಸ್ ಅಧಿಕಾರಿಗಳಿಗೆ ಅಗತ್ಯವಿದ್ದರೆ ನಿಮ್ಮ ಹೊಸ ಹೆಸರನ್ನು ಗುರುತಿಸುವ ಇತರ ಐಡಿ ಪುರಾವೆಗಳ ಪ್ರತಿಯನ್ನು ನೀವು ಒಯ್ಯಬೇಕು.
  • ಲಿಂಗ ವಿವರಗಳು: ಹೊಸ ಪಡಿತರ ಚೀಟಿಯನ್ನು ಪಡೆದುಕೊಳ್ಳುವಾಗ, “ಪುರುಷ”, “ಸ್ತ್ರೀ” ಮತ್ತು “ತೃತೀಯ ಲಿಂಗ” ಎಂದು ಲಿಂಗಕ್ಕೆ ನೀವು ಮೂರು ಆಯ್ಕೆಗಳನ್ನು ಹೊಂದಿರಬಹುದು. ಪಡಿತರ ಚೀಟಿಗಳನ್ನು ರಾಜ್ಯವಾರು ನಿಯಂತ್ರಿಸಲಾಗಿರುವುದರಿಂದ, ಕೆಲವೊಮ್ಮೆ ತೃತೀಯ ಲಿಂಗವನ್ನು ಆಯ್ಕೆ ಮಾಡುವ ಅವಕಾಶ ಇಲ್ಲದಿರಬಹುದು. ಅಂತಹ ಸಂದರ್ಭಗಳಲ್ಲಿ, ನೀವು ಹೀಗೆ ಮಾಡಬೇಕು:
  • ರೇಷನ್ ಕಾರ್ಡ್ ಸರ್ಕಲ್ ಅಧಿಕಾರಿಗಳನ್ನು ಸಂಪರ್ಕಿಸಿ ಮುಂದಿನ ಕ್ರಮದ ಬಗ್ಗೆ ವಿಚಾರಿಸಿ
  • ನೀವು ಗುರುತಿಸುವ ಲಿಂಗ, ನಿಮ್ಮ ಹೊಸ ಹೆಸರು ಇತ್ಯಾದಿ ವಿವರಗಳನ್ನು ಹೊಂದಿರುವ ಶಪಥ ಪತ್ರದಂತಹಾ ಗುರುತಿನ ಪುರಾವೆಯನ್ನು ಒಯ್ಯಿರಿ.

ರೇಷನ್ ಕಾರ್ಡ್ ವಿವರಗಳನ್ನು ನವೀಕರಿಸುವುದು / ಬದಲಾಯಿಸುವುದು

  ನಿಮ್ಮ ಪಡಿತರ ಚೀಟಿಯ ವ್ಯಕ್ತಿಗತ ಮಾಹಿತಿಯನ್ನು ನೀವು ನವೀಕರಿಸಬಹುದು ಹಾಗು ನವೀಕರಿಸಿದ ಮಾಹಿತಿಯನ್ನು ಹೊಂದಿರುವ ಹೊಸದಾಗಿ ನೀಡಲಾದ ಕಾರ್ಡ್ ಅನ್ನು ಸ್ವೀಕರಿಸಬಹುದು. ರೇಷನ್ ಕಾರ್ಡ್ ವಿವರಗಳನ್ನು ಹೇಗೆ ನವೀಕರಿಸುವುದು ಎಂಬುದನ್ನು ವಿವರವಾಗಿ ತಿಳಿಯಲು ಇಲ್ಲಿ ಓದಿ.

  • ನಿಮ್ಮ ಹೆಸರನ್ನು ಬದಲಾಯಿಸುವುದು: ನೀವು ಗುರುತಿಸುವ ಲಿಂಗವನ್ನು ಪ್ರತಿಬಿಂಬಿಸಲು ನಿಮ್ಮ ಹೆಸರನ್ನು ನವೀಕರಿಸಲು ನೀವು ಬಯಸಿದರೆ, ನೀವು ಅರ್ಜಿ ನಮೂನೆಯಲ್ಲಿ ನಿಮ್ಮ ಹೊಸ ಹೆಸರನ್ನು ಭರ್ತಿ ಮಾಡಬಹುದು. ಕೇಂದ್ರ/ರಾಜ್ಯ ಗೆಜೆಟ್‌ನಲ್ಲಿ ನಿಮ್ಮ ಬದಲಾದ ಹೆಸರಿನ ಪ್ರತಿಯನ್ನು ಮತ್ತು ನಿಮ್ಮ ಹೊಸ ಹೆಸರನ್ನು ಗುರುತಿಸುವ ಇತರ ಗುರುತಿನ ಪುರಾವೆಗಳ ಪ್ರತಿಯನ್ನು ನೀವು ಒಯ್ಯಬೇಕು.
  • ಲಿಂಗ ವಿವರಗಳನ್ನು ಬದಲಾಯಿಸುವುದು: ನಿಮ್ಮ ಲಿಂಗ ವಿವರವನ್ನು ನವೀಕರಿಸಲು ನೀವು ಬಯಸಿದರೆ, “ಪುರುಷ”, “ಸ್ತ್ರೀ” ಮತ್ತು “ತೃತೀಯಲಿಂಗಿ” ಎಂಬ ಮೂರು ಆಯ್ಕೆಗಳಿಂದ ನೀವು ಗುರುತಿಸಬಹುದು.

ಸರ್ಕಲ್ ಆಫೀಸ್ ಅಧಿಕಾರಿಗಳು ನಿಮ್ಮ ಲಿಂಗ ಗುರುತಿನ ಪುರಾವೆ ಅಥವಾ ಹೆಸರು ಬದಲಾವಣೆಯ ಪುರಾವೆಯನ್ನು ಕೇಳಬಹುದು, ಆದರೆ ಅವರು ನಿಮ್ಮನ್ನು ಯಾವುದೇ ರೀತಿಯ ಕಿರುಕುಳ ಅಥವಾ ಲಿಂಗ ಪರಿಶೀಲನೆಗೆ ಸ್ಥಳದಲ್ಲೇ ಒಳಪಡಿಸಲು ಸಾಧ್ಯವಿಲ್ಲ. ನೀವು ಯಾವುದೇ ಕಿರುಕುಳ ಅಥವಾ ತಾರತಮ್ಯವನ್ನು ಎದುರಿಸಿದರೆ, ನೀವು ಪಡಿತರ ಚೀಟಿ ಅಧಿಕಾರಿಗಳಿಗೆ ದೂರು ನೀಡಬೇಕು. ಈ ಅಧಿಕಾರಿಗಳು ಸ್ಪಂದಿಸದಿದ್ದರೆ, ನೀವು ವಕೀಲರು, NGO ಇತ್ಯಾದಿಗಳ ಸಹಾಯವನ್ನು ಪಡೆದು ಪ್ರಕ್ರಿಯೆಯನ್ನು ಸುಲಭಗೊಳಿಸಬಹುದು ಮತ್ತು ಪೊಲೀಸರಿಗೆ ದೂರು ನೀಡುವ ಮೂಲಕ ಕ್ರಮ ಕೈಗೊಳ್ಳಬಹುದು.

             1.ಅಶ್ವಿನ್ ಕುಮಾರ್ ಮಿಶ್ರಾ ವಿರುದ್ಧ ಭಾರತ್ ಸರ್ಕಾರ್, 2015(4) RCR (ಸಿವಿಲ್) 327. []

 

Leave a Reply

Your email address will not be published. Required fields are marked *

ನಿರ್ದಿಷ್ಟ ಕಾನೂನು ಪ್ರಶ್ನೆಗಳನ್ನು ಹೊಂದಿರುವಿರಾ? ನಮ್ಮ ತಜ್ಞರು ಮತ್ತು ಸ್ವಯಂಸೇವಕರನ್ನು ಕೇಳಿ.