ರಿಟ್ ಅರ್ಜಿ ಸಲ್ಲಿಸಲು ನಮೂನೆಯನ್ನು ಪಡೆದುಕೊಳ್ಳಿ
ತಮ್ಮ ಮೂಲಭೂತ ಹಕ್ಕನ್ನು ರಕ್ಷಿಸಲು ಬಯಸುವ ವ್ಯಕ್ತಿಯು ಸೂಕ್ತ ನ್ಯಾಯಾಲಯದಲ್ಲಿ ಅಂದರೆ ಸರ್ವೋಚ್ಚ ನ್ಯಾಯಾಲಯ ಅಥವಾ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು. ನಿರ್ದಿಷ್ಟ ನ್ಯಾಯಾಲಯವು ನೀಡಿರುವ ನಮೂನೆಯಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ಸರ್ವೋಚ್ಚ ನ್ಯಾಯಾಲಯದ ರಿಟ್ ಅರ್ಜಿಯ ನಿಗದಿತ ಸ್ವರೂಪವನ್ನು ಇಲ್ಲಿ ಕಾಣಬಹುದು. ಉಚ್ಚ ನ್ಯಾಯಾಲಯಕ್ಕೆ ಸಂಬಂಧಿಸಿದಂತೆ, ಪ್ರತಿ ಹೈಕೋರ್ಟ್‌ನಿಂದ ಸೂಚಿಸಲಾದ ವಿವಿಧ ನಮೂನೆಗಳನ್ನು ಸಂಬಂಧಿಸಿದ ಹೈಕೋರ್ಟ್‌ನ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಪಡೆಯಸಬಹುದು.
ಅರ್ಜಿಯ ಕರಡು
ಸೂಕ್ತ ನ್ಯಾಯಾಲಯಕ್ಕೆ ನಿಗದಿತ ನಮೂನೆಯನ್ನು ಪಡೆದ ನಂತರ, ಈ ಕೆಳಗಿನ ಮಾಹಿತಿಯನ್ನು ಅರ್ಜಿ 1 ರಲ್ಲಿ ನಮೂದಿಸಬೇಕು:
- ಅರ್ಜಿಯನ್ನು ಸಲ್ಲಿಸುವ ವ್ಯಕ್ತಿಯ ಹೆಸರು ಮತ್ತು ವಿವರ.
- ಅರ್ಜಿಯನ್ನು ಯಾರ ವಿರುದ್ಧ ಸಲ್ಲಿಸುತ್ತಿದ್ದೀರ , ಅಂತಹ ವ್ಯಕ್ತಿ/ಸಂಸ್ಥೆಯ ಹೆಸರು ಮತ್ತು ವಿವರ.
- ನೊಂದ ವ್ಯಕ್ತಿಗೆ ಉಲ್ಲಂಘನೆಯಾದ ಮೂಲಭೂತ ಹಕ್ಕು
- ನೊಂದ ವ್ಯಕ್ತಿ ಕೇಳುವ ಪರಿಹಾರ.
- ಪರಿಹಾರವನ್ನು ಕೇಳುವ ಕಾರಣಗಳು.
- (ಅರ್ಜಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸುತ್ತಿದ್ದರೆ) ಈ ವಿಷಯದ ಮೇಲೆ ಈಗಾಗಲೇ ಯಾವುದೇ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆಯೇ ಮತ್ತು ಹೌದು ಎಂದಾದರೆ, ಉಚ್ಚ ನ್ಯಾಯಾಲಯದಿಂದ ಜಾರಿಗೊಳಿಸಿದ ಆದೇಶದ ವಿವರ.
- ನಿಮಗೆ ಅನ್ವಯಿಸಿದರೆ ದಾಖಲೆಗಳನ್ನು ಲಗತ್ತಿಸಿ.1
- ಅರ್ಜಿಯು ಕೆಳ ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿದ್ದರೆ, ಅಂತಹ ಆದೇಶದ ಮೂಲ ಅಥವಾ ಪ್ರಮಾಣೀಕೃತ ಪ್ರತಿಯನ್ನು ಅರ್ಜಿಗೆ ಲಗತ್ತಿಸಬೇಕು.
- ಅರ್ಜಿ ಸಲ್ಲಿಸಲು ಕಾರಣವಾದ ಸತ್ಯಾಂಶಗಳ ಅಫಿಡವಿಟ್.
- ಯಾವುದೇ ಇತರ ಅಗತ್ಯ ದಾಖಲೆಗಳು.
ಯಾವುದೇ ದಾಖಲೆಯು ಅರ್ಜಿದಾರರ ಭೌತಿಕ ಸ್ವಾಧೀನದಲ್ಲಿಲ್ಲದಿದ್ದರೆ, ಅಂತಹ ದಾಖಲೆಗಳ ಪಟ್ಟಿಯನ್ನು ಅರ್ಜಿಗೆ ಲಗತ್ತಿಸಬೇಕು.
ಮನವಿ ಸಲ್ಲಿಸಿ
ಅರ್ಜಿಯನ್ನು ಸಂಪೂರ್ಣವಾಗಿ ರಚಿಸಿದ ನಂತರ, ಅರ್ಜಿದಾರರ ಆದ್ಯತೆಯ ಪ್ರಕಾರ ಅದನ್ನು ಸುಪ್ರೀಂ ಕೋರ್ಟ್ 2 ಅಥವಾ ಸಂಬಂಧಪಟ್ಟ ಹೈಕೋರ್ಟ್ 3 ರ ಫೈಲಿಂಗ್ ಕೌಂಟರ್‌ನಲ್ಲಿ ಸಲ್ಲಿಸಬೇಕು.