ಚೆಕ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳೋಣ. ಚೆಕ್ ಎನ್ನುವುದು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಲಿಖಿತವಾಗಿ ನಿಗದಿತ ಮೊತ್ತದ ಹಣವನ್ನು ಯಾವುದೇ ಷರತ್ತುಗಳಿಲ್ಲದೆ ಪಾವತಿಸುವ ಭರವಸೆಯಾಗಿದೆ. ಆದರೂ, ನೀವೇ ಚೆಕ್ ಅನ್ನು ಸ್ವಂತಕ್ಕೆ ಕೂಡಾ ಬರೆದುಕೊಳ್ಳಬಹುದು. ಉದಾಹರಣೆಗೆ, ಅಮಿತ್ ಆಶಾಗೆ ರೂ. 10,000 ಕೊಡಬೇಕಾದಲ್ಲಿ, ಅವರು ಆಶಾಗೆ ರೂ. 10000 ಚೆಕ್ ನೀಡಬಹುದು. ಆಶಾ ಈ ಚೆಕ್ ಅನ್ನು ಬ್ಯಾಂಕಿಗೆ ಸಲ್ಲಿಸಿದಾಗ, ಅವರಿಗೆ ರೂ. 10,000 ನಗದಿನ ರೂಪದಲ್ಲಿ ಕೊಡಲಾಗುತ್ತದೆ ಅಥವಾ ಆಕೆಯ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಅಮಿತ್ ಖಾತೆಯಿಂದ ರೂ. 10,000 ಕಡಿತಗೊಳಿಸಲಾಗುತ್ತದೆ.
ತಾಂತ್ರಿಕ ಪರಿಭಾಷೆಯಲ್ಲಿ, ಬ್ಯಾಂಕರ್‌ಗಳು ಮತ್ತು ವಕೀಲರು ಬಳಸುವಂತೆ, ಚೆಕ್ ಅನ್ನು ‘ನೆಗೋಷಿಯೇಬಲ್ ಉಪಕರಣ’ ಅಥವಾ ಅದರ ಒಂದು ಬಗೆ ಎಂದು ಉಲ್ಲೇಖಿಸಲಾಗುತ್ತದೆ.
ಚೆಕ್‌ನೊಂದಿಗೆ ವ್ಯವಹರಿಸುವಾಗ ಒಳಗೊಂಡಿರುವ ವಿವಿಧ ವ್ಯಕ್ತಿಗಳು:
- ಚೆಕ್ ನೀಡುವವರು (ಡ್ರಾಯರ್)
- ಚೆಕ್‌ನ ಪಾವತಿದಾರ/ ಹೊಂದಿರುವವರು ಮತ್ತು
- ಬ್ಯಾಂಕ್ (ಡ್ರಾಯೀ)