ನೀವು ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಲ್ಲಿ, ನಿಮ್ಮ ಸಂಗಾತಿಯು ಮಾನಸಿಕ ರೋಗದಿಂದ ಬಳಲುತ್ತಿದ್ದಲ್ಲಿ, ಅದು ವಿಚ್ಛೇದನಕ್ಕೆ ಆಧಾರವಾಗಬಹುದು.
ನೀವು ವಿಚ್ಛೇದನಾ ಅರ್ಜಿ ಈ ಕೆಳಕಂಡ ಸಂದರ್ಭಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬಹುದು:
- ನಿಮ್ಮ ಸಂಗಾತಿಯು ಗುಣಪಡಿಸಲಾಗದಂತಹ ಮಾನಸಿಕ ರೋಗದಿಂದ ಬಳಲುತ್ತಿದ್ದಲ್ಲಿ
- ನಿಮ್ಮ ಸಂಗಾತಿಯು ಮಾನಸಿಕ ರೋಗದಿಂದ ಅನಿಯಮಿತವಾಗಿ ಅಥವಾ ನಿರಂತರವಾಗಿ ಬಳಲುತ್ತಿದ್ದು, ಈ ಸಂಗತಿಯಿಂದ ನಿಮಗೆ ಅವರೊಡನೆ ಇರಲು ಸಾಧ್ಯವಿಲ್ಲವಾದಾಗ ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಅವರಲ್ಲಿ ಕೆಲವು ಮುಂಗೋಪದ ಅಥವಾ ಸಿಟ್ಟಿನ ನಡತೆಗಳು/ಗುಣಲಕ್ಷಣಗಳು ಇವೆ ಅಂದ ಮಾತ್ರಕ್ಕೆ ಅವರಿಗೆ ಮಾನಸಿಕ ರೋಗವಿದೆ ಎಂದು ಅರ್ಥ ಅಲ್ಲ.
ಯಾವಾಗ ಅವರ ನಡತೆ ಯಾವ ಸಂವೇದನಾಶೀಲ ವ್ಯಕ್ತಿಗೂ ಸಹ ಅವರೊಂದಿಗೆ ಇರದ ಹಾಗೆ ಮಾಡುತ್ತದೆಯೋ, ಆವಾಗ ಮಾನಸಿಕ ರೋಗದ ಆಧಾರದ ಮೇಲೆ ವಿಚ್ಛೇದನ ಬೇಡಬಹುದು.
ನಿಮ್ಮ ಸಂಗಾತಿಯು ಅಸ್ವಸ್ಥ ಮನಸ್ಸಿನಿಂದ ಬಳಲುತ್ತಿದ್ದಾರೋ ಇಲ್ಲವೋ ಎಂದು ಪರೀಕ್ಷಿಸಲು ವೈದ್ಯಕೀಯ ತಪಾಸಣೆಗಾಗಿ ಅವರನ್ನು ಕೊಂಡೊಯ್ಯಬೇಕು ಎಂದು ನ್ಯಾಯಾಲಯವು ನಿರ್ದೇಶಿಸಬೇಕು ಎಂದು ನೀವು ಮನವಿ ಸಲ್ಲಿಸಬಹುದು.