ಸಾರ್ವಜನಿಕ ಸ್ಥಳಗಳಲ್ಲಿ ವಾಹನ ಚಲಾಯಿಸಲು ನೀವು ನಿರ್ದಿಷ್ಟ ವಯೋಮಾನದವರಾಗಿರತಕ್ಕದ್ದು. ವಿವಿಧ ಮಾದರಿಯ ವಾಹನಗಳನ್ನು ಚಲಾಯಿಸಲು ಕಾನೂನು ಪ್ರಕಾರ ಈ ಕೆಳಕಂಡ ವಯೋಮಿತಿಯನ್ನು ಹೊಂದಿರತಕ್ಕದ್ದು.
ಯಾವುದೇ ಮೋಟಾರು ವಾಹನ ಚಲಾಯಿಸಲು (50 ಸಿಸಿ ಗಿಂತ ಕಡಿಮೆ ಇಂಜಿನ್ ಸಾಮರ್ಥ್ಯ ಹೊಂದಿರುವ ಮೋಟಾರು ಸೈಕಲ್ ಹೊರತುಪಡಿಸಿ): 18 ವರ್ಷ
50 ಸಿಸಿ ಗಿಂತ ಕಡಿಮೆ ಇಂಜಿನ್ ಸಾಮರ್ಥ್ಯ ಹೊಂದಿರುವ ಮೋಟಾರ್ ಸೈಕಲ್: 16 ವರ್ಷ
ಸಾರಿಗೆ ವಾಹನವನ್ನು ಚಲಾಯಿಸಲು (ಉದಾಹರಣೆಗೆ, ಟ್ರಕ್): 20 ವರ್ಷ
ಯಾವುದೇ ಮಾದರಿಯ ವಾಹನವನ್ನು ಚಲಾಯಿಸಲು ನೀವು ಅಪ್ರಾಪ್ತ ವಯಸ್ಕರಾಗಿದ್ದರೂ ಕೂಡ ಅಂತಹ ವಾಹನವನ್ನು ನೀವು ಚಲಾಯಿಸಿದಲ್ಲಿ, ನಿಮಗೆ ರೂ. 5,000/- ಜುಲ್ಮಾನೆ ಅಥವಾ ಮೂರು ತಿಂಗಳವರೆಗೆ ಕಾರಾವಾಸ ಅಥವಾ ಎರಡೂ ಶಿಕ್ಷೆಗಳನ್ನು ವಿಧಿಸಬಹುದಾಗಿದೆ. ಈ ಅಪರಾಧಕ್ಕಾಗಿ ವಿಧಿಸುವ ದಂಡದ ಮೊತ್ತ ರಾಜ್ಯದಿಂದ ರಾಜ್ಯಕ್ಕೆ ಬೇರೆಯಾಗಿರಬಹುದು.
ಎರಡು ರಾಜ್ಯಗಳಲ್ಲಿ ವಿಧಿಸುವ ಜುಲ್ಮಾನೆಯ ಮೊತ್ತ ಈ ಕೆಳಕಂಡಂತಿದೆ:
ರಾಜ್ಯ | ವಾಹನದ ಮಾದರಿ | ಜುಲ್ಮಾನೆಯ ಮೊತ್ತ(ರೂ) |
ದೆಹಲಿ | ಅನ್ವಯವಾಗುವುದಿಲ್ಲ | 5,000 |
ದ್ವಿಚಕ್ರ/ತ್ರಿಚಕ್ರ ವಾಹನಗಳು | 1,000 | |
ಕರ್ನಾಟಕ | ಲಘು ಮೋಟಾರು ವಾಹನ | 2,000 |
ಇತರೆ ಮಾದರಿಯ ವಾಹನಗಳು | 5,000 |